ಬಿಲ್ ಕೊಡದಿದ್ದರೆ, ಹಣ ಕೊಡಬೇಡಿ
Team Udayavani, Jan 5, 2019, 12:30 AM IST
ಹೊಸದಿಲ್ಲಿ: “ದಯವಿಟ್ಟು ಟಿಪ್ಸ್ ಕೊಡಬೇಡಿ, ನಿಮ್ಮ ಊಟಕ್ಕೆ ಬಿಲ್ ನೀಡದಿದ್ದರೆ, ಅದಕ್ಕೆ ಹಣವನ್ನೂ ಪಾವತಿಸಬೇಡಿ.’ ಮಾರ್ಚ್ ತಿಂಗಳಿಂದ ಇಂಥದ್ದೊಂದು ಫಲಕವನ್ನು ನೀವು ರೈಲುಗಳಲ್ಲಿ ಕಾಣಬಹುದು. ಹೀಗೆಂದು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಮಾಹಿತಿ ನೀಡಿದ್ದಾರೆ. ಕೆಟರಿಂಗ್ ಸೇವೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಎಲ್ಲ ವಲಯಗಳಿಗೂ ಸುತ್ತೋಲೆ ಕಳುಹಿ ಸಲಾಗಿದೆ. ಅದರಂತೆ, ಮಾರ್ಚ್ನಿಂದ ರೈಲುಗಳೊಳಗೆ ಈ ರೀತಿಯ ಬೋರ್ಡ್ ಮತ್ತು ಪಕ್ಕದಲ್ಲೇ ಮೆನುವಿನ ದರ ಪಟ್ಟಿಯನ್ನು ಅಳವಡಿಸಲಾಗುತ್ತದೆ.
ಉನ್ನತ ಮಟ್ಟದ ಅಧಿಕಾರಿಗಳ ಜತೆ ನಡೆದ ಸಭೆಯ ಬಳಿಕ ಗೋಯೆಲ್ ಈ ಮಾಹಿತಿ ನೀಡಿದ್ದಾರೆ. ಅಲ್ಲದೆ, ಪ್ರಸಕ್ತ ತಿಂಗಳಾಂತ್ಯದೊಳಗೆ ಪ್ರಯಾಣಿಕರ ಅನುಕೂಲತೆ ಗಾಗಿ ಭದ್ರತೆ ಹೊರತಾದ ದೂರುಗಳನ್ನು ನೀಡಲು ಒಂದೇ ಸಹಾಯವಾಣಿ ಸಂಖ್ಯೆಯನ್ನು ಪರಿಚಯಿಸಲೂ ನಿರ್ಧರಿಸಲಾಗಿದೆ. ಸದ್ಯ 723 ನಿಲ್ದಾಣಗಳಲ್ಲಿ ವೈಫೈ ಇದ್ದು, ಇದನ್ನು 2000 ನಿಲ್ದಾಣಗಳಿಗೆ ವಿಸ್ತರಿಸಲು ನಿರ್ಧರಿ ಸಲಾಗಿದೆ. ಯಾರು ಈ ಕಾರ್ಯವನ್ನು ಬೇಗನೆ ಪೂರ್ಣ ಗೊಳಿಸುತ್ತಾರೋ ಅಂಥ ವಿಭಾಗೀಯ ರೈಲ್ವೆ ಮ್ಯಾನೇ ಜರ್ಗೆ ಬಹುಮಾನ ನೀಡಲಾಗುವುದು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.