ವಾಹನದಲ್ಲಿ ದೋಷ ಇದ್ದರೆ ಕಂಪನಿಯೇ ಹೊಣೆ
Team Udayavani, Feb 9, 2017, 3:45 AM IST
ಹೊಸದಿಲ್ಲಿ:ನೀವು ಹೊಸದಾಗಿ ಖರೀದಿಸಿದ ವಾಹನದ ಮೂಲ ವಿನ್ಯಾಸದಲ್ಲಿ ದೋಷ ಉಂಟಾಗಿ, ಖರೀದಿಸಿದ ಬಳಿಕ ಅದು ಬಹಿರಂಗಗೊಂಡರೆ ಮಾಲಕನಿಗೆ ಸಂಪೂರ್ಣ ಹಣ ಹಿಂಪಡೆಯುವ ಅವಕಾಶ ಸಿಗಲಿದೆ. ಈ ಅಂಶವನ್ನು ಸಂಸತ್ನ ಸಾರಿಗೆ, ಪ್ರವಾಸೋದ್ಯಮಕ್ಕಾಗಿನ ಸ್ಥಾಯೀ ಸಮಿತಿ ಶಿಫಾರಸು ಮಾಡಿದೆ. ಸಂಸತ್ನಲ್ಲಿ ಮಂಡಿಸಲಾಗಿರುವ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆ 2016ಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ವರದಿಯಲ್ಲಿ ಈ ಅಂಶವನ್ನು ಪ್ರಸ್ತಾವಿಸಲಾಗಿದೆ. ಇದರಿಂದಾಗಿ ಕಾರು ಕಂಪೆನಿಗಳು ಗ್ರಾಹಕರಿಗೆ ಮೋಸ ಮಾಡುವುದನ್ನು ತಪ್ಪಿಸಲು ಕ್ರಮ ಕೈಗೊಂಡಂತಾಗುತ್ತದೆ. ಬಿಡಿ ಭಾಗಗಳಲ್ಲಿನ ದೋಷ, ಕರಪತ್ರದಲ್ಲಿ ಪ್ರಸ್ತಾವ ಮಾಡಿರುವ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಕಂಪೆನಿಗಳ ಜವಾಬ್ದಾರಿ ಆಗಿರುತ್ತದೆ. ಗ್ರಾಹಕನ ಕೈಗೆ ವಾಹನದ ಕೀಲಿ ಕೊಡುವ ಮುನ್ನವೇ
ವಾಹನ ಪರೀಕ್ಷಾ ಏಜೆನ್ಸಿಗಳಿಂದ ಗುಣಮಟ್ಟದ ಪರೀಕ್ಷೆ ಮಾಡಿಸಬೇಕು. ಇದರ ಸರ್ಟಿಫಿಕೇಟನ್ನು ಗ್ರಾಹಕನಿಗೆ ನೀಡಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.