ಕಾಸು ಕೊಟ್ಟರೆ ಸಾಕು, ತಿಹಾರ್ ಜೈಲು ವಾಸದ ಅನುಭವ
Team Udayavani, Mar 2, 2018, 8:15 AM IST
ನವದೆಹಲಿ: ದೇಶದ ಅತಿದೊಡ್ಡ ಹಾಗೂ ಅತಿ ಭದ್ರತೆಯ ಜೈಲು ಎಂದೇ ಹೆಸರಾಗಿರುವ ತಿಹಾರ್ ಜೈಲಿನ ಒಳಗೆ ಹೇಗಿರಬಹುದು ಎಂದು ಒಮ್ಮೆಯಾದರೂ ಯೋಚಿಸಿದ್ದಿದೆಯೇ? ಉಗ್ರ ಯಾಸೀನ್ ಭಟ್ಕಳ್, ಭೂಗತ ಪಾತಕಿ ಛೋಟಾ ರಾಜನ್, ಶಹಾಬುದ್ದೀನ್ ಮುಂತಾದ ಕ್ರಿಮಿನಲ್‌ಗಳಿರುವಂಥ ಈ ಜೈಲಿನೊಳಕ್ಕೆ ಹೋಗಿ ಅನುಭವ ಪಡೆಯಬೇಕೆಂಬ ಆಸೆಯಿದೆಯೇ? ನಿಮ್ಮ ಆಸೆ ಕೆಲವೇ ತಿಂಗಳಲ್ಲಿ ಈಡೇರಲಿದೆ. ಹಾಗಂತ, ಜೈಲಿನೊಳಕ್ಕೆ ಹೋಗಲು ನೀವು ಕೈದಿಯೇ ಆಗಬೇಕಾಗಿಲ್ಲ. ಸದ್ಯದಲ್ಲೇ ತಿಹಾರ್ ಜೈಲಿನ 400 ಎಕರೆ ಪ್ರದೇಶದೊಳಗೆ “ಫೀಲ್ ಲೈಕ್ ಜೈಲ್’ ಎಂಬ ಹೆಸರಿನ ಹೊಸ ಸೌಲಭ್ಯವೊಂದು ಆರಂಭವಾಗಲಿದೆ. ಈ ಹೆಸರನ್ನು ತಮಾಷೆಯಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ, ನೀವು ಜೈಲಿನೊಳಕ್ಕೆ ಕೈದಿಯಾಗಿ ಹೋಗ ದಿದ್ದರೂ, ಕೈದಿಯಂತೆಯೇ ಇರಬೇಕಾಗುತ್ತದೆ.
ಹೌದು, ತಿಹಾರ್ ಜೈಲು ಇನ್ನು ಮುಂದೆ ಅತಿಥಿಗಳಿಗಾಗಿಯೂ ತೆರೆದಿರುತ್ತದೆ. ಪ್ರವೇಶ ಶುಲ್ಕ ನೀಡಿ ಯಾರು ಬೇಕಿದ್ದರೂ “ಜೈಲು ವಾಸ’ ಅನುಭವಿಸಬಹುದು. ಆದರೆ, ಒಳಹೋದ ಬಳಿಕ ನೀವೂ ಕೈದಿಗಳಂತೆಯೇ ವಸ್ತ್ರಗಳನ್ನು ತೊಡಬೇಕು. ಅಷ್ಟೇ ಅಲ್ಲ, ಕೈದಿಗಳು ಮಾಡುವಂಥ ಕೆಲಸಗಳನ್ನು ಅಂದರೆ, ತೋಟಗಾರಿಕೆ, ಮರಗೆಲಸದಂಥ ಕೂಲಿ ಕೆಲಸಗಳನ್ನು ಮಾಡಬೇಕು. ಜೊತೆಗೆ, ಅಲ್ಲಿ ಇರುವಷ್ಟು ದಿನ ಮೊಬೈಲ್ ಫೋನ್ ಮತ್ತು ಇತರ ಯಾವುದೇ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಬಳಸುವಂತಿಲ್ಲ. ಅವುಗಳನ್ನು ಒಳಗೆ ಕೊಂಡೊಯ್ಯಲೂ ಅವಕಾಶವಿಲ್ಲ.
ಕೈದಿಗಳ ಕೈರುಚಿ: ಜೈಲಿನೊಳಗೆ ಇರುವಷ್ಟು ದಿನಗಳೂ ಕೈದಿಗಳೇ ತಯಾರಿಸಿದ ಆಹಾರವನ್ನೇ ಸೇವಿಸಬೇಕು. ಆದರೆ, ಭದ್ರತೆಯ ಕಾರಣಕ್ಕಾಗಿ ಕೈದಿಗಳ ಜತೆ ನೇರ ಸಂಪರ್ಕಕ್ಕೆ ಬರುವಂತಿಲ್ಲ ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಯೋಜನೆಯ ರೂಪುರೇಷೆಗಳು ಸಿದ್ಧವಾಗುತ್ತಿವೆ. ಯೋಜನೆ ಸಂಪೂರ್ಣ ಸಿದ್ಧವಾಗುತ್ತಿದ್ದಂತೆ, ಈ ಕಾರ್ಯಕ್ರಮ ಆರಂಭಿಸುವ ದಿನಾಂಕವನ್ನು ಹಾಗೂ ಪ್ರವೇಶ ಶುಲ್ಕ ಇನ್ನಿತರ ಮಾಹಿತಿಗಳನ್ನು ತಿಳಿಸುತ್ತೇವೆ ಎಂದೂ ಅವರು ಹೇಳಿದ್ದಾರೆ. ಬಂದೀಖಾನೆಯ ಮುಖ್ಯಕಚೇರಿ ಬಳಿಯೇ ಈ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ಇಲ್ಲಿ ಕೈದಿಗಳಾಗಿ ಅನುಭವ ಪಡೆಯಲಿಚ್ಛಿಸುವವರ ಹಿನ್ನೆಲೆಯನ್ನು ಪರಿಶೀಲಿಸಿಯೇ ಜೈಲಿನೊಳಗೆ ಬರಲು ಅವರಿಗೆ ಅವಕಾಶ ನೀಡಲಾಗುವುದು ಎಂದು ಮತ್ತೂಬ್ಬ ಅಧಿಕಾರಿ ಹೇಳಿದ್ದಾರೆ.
ತೆಲಂಗಾಣದಲ್ಲೇ ಜೈಲು ಮ್ಯೂಸಿಯಂ: ತೆಲಂಗಾಣ ಸರ್ಕಾರ ಕೂಡ ತನ್ನ ರಾಜ್ಯದ ಸಂಗರೆಡ್ಡಿಯಲ್ಲಿನ 220 ವರ್ಷಗಳಷ್ಟು ಪ್ರಾಚೀನವಾದ ಜೈಲೊಂದರಲ್ಲಿ ಇದೇ ಮಾದರಿಯ ಯೋಜನೆ ಆರಂಭಿಸಿತ್ತು. 2016ರ ಜೂನ್‌ನಲ್ಲಿ ಇದನ್ನು ವಸ್ತು ಸಂಗ್ರಹಾಲಯವನ್ನಾಗಿ ಬದಲಾಯಿಸಲಾಯಿತು. ರಾಜ್ಯ ಸರ್ಕಾರದ ಪ್ರವಾಸೋದ್ಯಮದ ಭಾಗವಾಗಿ ಇದನ್ನು ಸಾರ್ವಜನಿಕರಿಗೆ ಮುಕ್ತವಾಗಿಸಲಾಯಿತು. ಇಲ್ಲಿಗೆ ಭೇಟಿ ನೀಡಲು ಬಯಸುವವರು ದಿನಕ್ಕೆ 500 ರೂ. ಪ್ರವೇಶ ಶುಲ್ಕ ಪಾವತಿಸಬೇಕಿತ್ತು. ಕಳೆದ ತಿಂಗಳಷ್ಟೇ, ಮಲೇಷ್ಯಾದ ಇಬ್ಬರು ಪ್ರವಾಸಿಗರು ಇಲ್ಲಿಗೆ ಬಂದು, ಭಾರತೀಯ ಜೈಲುಗಳು ಹೇಗಿರುತ್ತವೆ ಎಂಬ ಅನುಭವವನ್ನು ಪಡೆದು ಹೋಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.