ನೇರ ಮಾರುಕಟ್ಟೆಗೆ ಐಮಂಡಿ
Team Udayavani, Jul 18, 2018, 8:45 AM IST
ನವದೆಹಲಿ: ರೈತರಿಗೆ ನೇರವಾಗಿ ಬೆಳೆಗಳ ಮಾರಾಕಟ್ಟೆ, ಕೃಷಿ ಉತ್ಪನ್ನ ಖರೀದಿ, ಕಿರು ಸಾಲ ಸೌಲಭ್ಯ, ಬೆಳೆ ವಿಮೆ ನೀಡಲು ‘ಐಮಂಡಿ’ ಎಂಬ ಮೊಬೈಲ್ ಆ್ಯಪ್ ಆರಂಭಿಸಲಾಗಿದೆ. ಸಿಂಗಾಪುರ ಮೂಲದ ರಸಗೊಬ್ಬರ ತಯಾರಿಕೆ ಸಂಸ್ಥೆ ಐಎಫ್ಎಫ್ಸಿಒ ಲಿಮಿಟೆಡ್, ‘IFFCO iMandi’ ಎಂಬ ಈ ಕಾಮರ್ಸ್ ಆ್ಯಪ್ ಬಿಡುಗಡೆ ಮಾಡಿದ್ದು, 5.5 ಕೋಟಿ ರೈತರು ಒಂದೇ ವೇದಿಕೆಯಡಿ ಬೆಳೆಗಳ ಮಾರಾಟ, ಕೃಷಿ ಉಪಕರಣಗಳ ಖರೀದಿ, ಸಾಲ, ವಿಮೆ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಜೊತೆಗೆ IFFCO ಸಂಸ್ಥೆಯ ರಾಸಾಯನಿಕ ಗೊಬ್ಬರ, ಕೀಟನಾಶಕ, ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದಾಗಿದೆ. ಈ ಸೌಲಭ್ಯಗಳನ್ನು ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲಾಗುವುದು. ಈಗಾಗಲೇ ಈ ಆ್ಯಪ್ ಅನ್ನು ಚಂಡೀಗಡದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು IFFCO ವ್ಯವಸ್ಥಾಪಕ ನಿರ್ದೇಶಕಿ ಡಾ.ಯು.ಎಸ್. ಅಶ್ವಥಿ ತಿಳಿಸಿದ್ದಾರೆ. ಜೊತೆಗೆ ಈ ಆ್ಯಪ್ ನಲ್ಲಿ ಚಾಟ್, ಕರೆ ಮೂಲಕ ವಿಷಯ ತಜ್ಞರನ್ನು ಸಂಪರ್ಕಿಸಬಹುದಾಗಿದೆ. IFFCO ಸಂಸ್ಥೆಯು 55 ಸಾವಿರ ಮಾರುಕಟ್ಟೆ ಕೇಂದ್ರ, 36 ಸಾವಿರ ಸಹಕಾರ ಸಂಘಗಳು, 30 ಸಾವಿರ ಮಳಿಗೆಗಳು ಹಾಗೂ 25 ಕೋಟಿ ಗ್ರಾಮೀಣ ಗ್ರಾಹಕರನ್ನು ಹೊಂದಿದೆ ಎಂದು ಹೇಳಿದ್ದಾರೆ. ಇ-ಕಾಮರ್ಸ್ ಆ್ಯಪ್ ಅನ್ನು ಆ್ಯಂಡ್ರಾಯಿಡ್ ಹಾಗೂ ಐಒಎಸ್ ಮೊಬೈಲ್ ಫೋನ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ
Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ
Kasaragod; ಬಸ್-ಕಾರು ಢಿಕ್ಕಿ: ಇಬ್ಬರ ಸಾವು
South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…
Israel ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.