India Rankings 2017: ಬೆಂಗಳೂರಿನ IISc ಅತ್ಯುತ್ತಮ ವಿಶ್ವವಿದ್ಯಾಲಯ
Team Udayavani, Apr 3, 2017, 4:36 PM IST
ಹೊಸದಿಲ್ಲಿ : ಭಾರತ ಸರಕಾರದ “ಇಂಡಿಯಾ ರಾಂಕಿಂಗ್ಸ್ 2017’ರಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸರಕಾರ ದೇಶಾದ್ಯಂತ ನಡೆಸಿರುವ ಶೈಕ್ಷಣಿಕ ಸಂಸ್ಥೆಗಳ ರಾಂಕಿಂಗ್‌ನಲ್ಲಿ ದಿಲ್ಲಿಯ ಮಿರಾಂಡಾ ಹೌಸ್ ಕಾಲೇಜು ಸಾಮಾನ್ಯ ಪದವಿ ಶಿಕ್ಷಣದ ದೇಶದ ಅತ್ಯುತ್ತಮ ಕಾಲೇಜು ಎಂದು ಪರಿಗಣಿತವಾಗಿದೆ. ಎರಡನೇ ಮತ್ತು ಮೂರನೇ ಸ್ಥಾನವನ್ನು ಅನುಕ್ರಮವಾಗಿ ಚೆನ್ನೈನ ಲೊಯೋಲಾ ಕಾಲೇಜು ಮತ್ತು ಶ್ರೀ ರಾಮ್ ಕಾಲೇಜು ಗಳಿಸಿವೆ. ಕಾಲೇಜುಗಳಿಗೆ ರಾಂಕ್ ನೀಡಲಾಗಿರುವುದು ಇದೇ ಮೊದಲ ಸಲವಾಗಿದೆ.
ಕಳೆದ ವರ್ಷ ವಿವಾದ ಕೇಂದ್ರ ಬಿಂದುವಾಗಿದ್ದ ದಿಲ್ಲಿಯ ಜವಾಹರ ಲಾಲ್ ಯುನಿವರ್ಸಿಟಿ ಎರಡನೇ ಅತ್ಯುತ್ತಮ ವಿಶ್ವವಿದ್ಯಾಲವೆನಿಸಿದೆ. ಬನಾರಸ್ ಹಿಂದು ಯುನಿವರ್ಸಿಟಿಗೆ ಮೂರನೇ ಸ್ಥಾನ ಪ್ರಾಪ್ತವಾಗಿದೆ.
ಓವರಾಲ್ ರಾಂಕಿಂಗ್ ಕೆಟಗರಿಯಲ್ಲಿ ಏಳು ಐಐಟಿ ಗಳು ಟಾಪ್ ಹತ್ತರಲ್ಲಿ ಸ್ಥಾನ ಪಡೆದಿವೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಗೆ ನಂ.1 ತಾಂತ್ರಿಕ ವಿದ್ಯಾಲಯ ಎನಿಸಿಕೊಂಡಿದೆ. ಜಾಮಿಯಾ ಹಮ್‌ದದ್ì ಅತ್ಯುತ್ತಮ ಫಾರ್ಮಸಿ ವಿದ್ಯಾಲಯ ಎನಿಸಿದೆ. ಐಐಎಂ ಅಹ್ಮದಾಬಾದ್ ಅತ್ಯುತ್ತಮ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿಶ್ವವಿದ್ಯಾಲಯಗಳ ಪೈಕಿ ಜಾಧವ್‌ಪುರ ಯುನಿವರ್ಸಿಟಿಗೆ ಐದನೇ ಸ್ಥಾನ ಪ್ರಾಪ್ತವಾಗಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಅವರು ಈ ಸರಕಾರ ಕೈಗೊಂಡ ಶೈಕ್ಷಣಿಕ ವಿದ್ಯಾಲಯಗಳ 2017ರ ಸಮೀಕ್ಷೆಯ ಕ್ರಮಾಂಕಗಳನ್ನು ಇಂದಿಲ್ಲಿ ಪ್ರಕಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.