ನೀರಿನಲ್ಲಿರುವ ವಿಷಾಂಶ ಪತ್ತೆ ಹಚ್ಚಿ ತೆಗೆವ ಉಪಕರಣ: IISER ಸಾಧನೆ
Team Udayavani, May 17, 2018, 12:32 PM IST
ಕೋಲ್ಕತ : ಇಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಯನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್ (IISER) ಖಾಸಗಿ ಕಂಪೆನಿಯೊಂದರ ಸಹಭಾಗಿತ್ವದಲ್ಲಿ ನೀರಿನಲ್ಲಿರುವ ವಿಷಾಂಶವನ್ನು ತೆಗೆದು ಅದನ್ನು ಮನೆ ಬಳಕೆಗೆ ಮತ್ತು ಕುಡಿಯುವುದಕ್ಕೆ ಯೋಗ್ಯ ಮಾಡುವ ಹೊಸ ಉಪಕರಣವನ್ನು ಅಭಿವೃದ್ಧಿಪಡಿಸಿದೆ.
ಆರ್ಸೆನಿಕ್ ಸೆನ್ಸರ್ ಆ್ಯಂಡ್ ರಿಮೂವಲ್ ಮೀಡಿಯ ಎಂಬ ಹೆಸರಿನ ಈ ಉಪಕರಣವು ನೀರಿನಿಂದ ವಿಷಾಂಶವನ್ನು ತೆಗೆದು ಅದನ್ನು ಕುಡಿಯಲು ಮತ್ತು ಮನೆ ಬಳಕೆಗೆ ಯೋಗ್ಯವನ್ನಾಗಿ ಮಾಡಲು ಆತ್ಯಂತ ಪರಿಣಾಮಕಾರಿಯಾಗಿದ್ದು ಇದರ ಉತ್ಪಾದನಾ ವೆಚ್ಚ ಅತ್ಯಂತ ಕಡಿಮೆ ಎಂದು ಐಐಎಸ್‌ಇಆರ್ ನಿದೇರ್ಶಕ ಸೌರವ್ ಪಾಲ್ ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಡಾ. ರಾಜಾ ಷಣ್ಮುಗಂ ನೇತೃತ್ವದ ಐಐಎಸ್‌ಇಆರ್ ಸಂಶೋಧನ ತಂಡ ಈ ಆರ್ಸೆನಿಕ್ ಸೆನ್ಸೆರ್ ಉಪಕರಣವನ್ನು ರಾಸಾಯನಿಕ ಉತ್ಪಾದಿಸುವ ಪ್ರಮುಖ ಕಂಪೆನಿಯೊಂದರ ಪ್ರಯೋಗಾಲಯದಲ್ಲಿ ಅಭಿವೃದ್ಧಿ ಪಡಿಸಿದೆ. ಈ ಉಪಕರಣವನ್ನು ಬಳಸಿದಾಗ ಅದು ಒಡನೆಯೇ ವಿಷಾಂಶಯುಕ್ತ ನೀರಿನ ಬಣ್ಣ ಬದಲಾಗುವುದನ್ನು ತೋರಿಸುತ್ತದೆ ಎಂದು ಡಾ. ರಾಜಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.