ಮಾನಸಿಕ ಕ್ಷೋಭೆ: ಆತ್ಮಹತ್ಯೆಗೆ ಶರಣಾದ ಐಐಟಿ ಪದವೀಧರ
Team Udayavani, Sep 26, 2017, 11:58 AM IST
ಗುರುಗ್ರಾಮ : ಮಿಲೇನಿಯಂ ಸಿಟಿಯ ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ಅಪಾರ್ಟ್ಮೆಂಟ್ ಕಟ್ಟಡವೊಂದರ 23ನೇ ಮಹಡಿಯಿಂದ ಐಐಟಿ ಪದವೀಧರನೋರ್ವ ಕಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡಿರುವ ಐಐಟಿ ಪದವೀಧರನನ್ನು ಅಂಕಿತ್ ವಾಧ್ವಾ ಎಂದು ಗುರುತಿಸಲಾಗಿದೆ. ಈತ ಮೂಲತಃ ರಾಜಸ್ಥಾನದವ. ಎಂಬಿಎ ಪದವಿ ಶಿಕ್ಷಣಕ್ಕಾಗಿ ಗುರುಗ್ರಾಮಕ್ಕೆ ಬಂದಿದ್ದ ಈತ ಇಲ್ಲಿನ ಡಿಎಲ್ಎಫ್ ಅಪ್ ಸ್ಕೇಲ್ ಮ್ಯಾಗ್ನೊಲಿಯಾಸ್ ಅಪಾರ್ಟ್ಮೆಂಟ್ ಕಟ್ಟಡದ ಫ್ಲ್ಯಾಟ್ ಒಂದರಲ್ಲಿ ತನ್ನ ಚಿಕ್ಕಪ್ಪನ ಜತೆಗೆ ವಾಸಿಸಿಕೊಂಡಿದ್ದ.
ಸೋಮವಾರ ತಡರಾತ್ರಿ ಅಂಕಿತ್ ವಾಧ್ವಾ ಆತ್ಮಹತ್ಯೆ ಮಾಡಿಕೊಂಡನೆಂದು ಪೊಲೀಸರು ತಿಳಿಸಿದ್ದಾರೆ.
ಆರಂಭಿಕ ತನಿಖೆಗಳಿಂದ ತಿಳಿದುಬಂದಿರುವ ಪ್ರಕಾರ ಅಂಕಿತ್ ತೀವ್ರವಾದ ಮಾನಸಿಕ ಕ್ಷೋಭೆಯಿಂದ ಬಳಲುತ್ತಿದ್ದ. ಆತ ತನ್ನ ಹಾಲಿ ಉದ್ಯೋಗದಿಂದಲೂ ಅಸಂತುಷ್ಟನಾಗಿದ್ದ. ಪರಿಣಾಮವಾಗಿ ಆತ ಆತ್ಮಹತ್ಯೆಗೆ ಶರಣಾದ ಎಂದು ತಿಳಿದು ಬಂದಿದೆ.
ಪ್ರಕರಣದ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಎಲ್ಲ ಕೋನಗಳಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.