ಯುಪಿಎಸ್ಸಿ ಫಲಿತಾಂಶ | ಸೈಕಲ್ನಲ್ಲಿ ಬಟ್ಟೆ ಮಾರುವವನ ಪುತ್ರನಿಗೆ 45ನೇ ರ್ಯಾಂಕ್
Team Udayavani, Sep 26, 2021, 1:12 PM IST
ಬಿಹಾರ್ : ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎನ್ನುವುದು ಮತ್ತೊಂದು ಸಾರಿ ಸಾಬೀತಾಗಿದೆ. ಸೈಕಲ್ ಮೇಲೆ ಬಟ್ಟೆ ಮಾರುವ ಬಡ ವ್ಯಾಪಾರಿಯ ಪುತ್ರನೋರ್ವ ಇದೀಗ ಯುಪಿಎಸ್ಸಿ ಪಾಸ್ ಮಾಡಿ ಇತರರಿಗೆ ಮಾದರಿಯಾಗಿದ್ದಾನೆ.
ಸೈಕಲ್ನಲ್ಲಿ ಬಟ್ಟೆಯ ಮೂಟೆ ಹೊತ್ತುಕೊಂಡು, ಊರೂರು ತಿರುಗಿ ಬಟ್ಟೆ ಮಾರಿ ಬದುಕುತ್ತಿರುವ ಬಿಹಾ ರದ ವ್ಯಾಪಾರಿಗೆ ಶುಕ್ರವಾರ ಸಂಭ್ರಮವೋ ಸಂಭ್ರಮ. ಎಲ್ಲಕಡೆಗಳಿಂದಲೂ ಅಭಿನಂದನೆಗಳ ಮಹಾ ಪೂರ. ಕಾರಣ ವೇನು ಗೊತ್ತೇ? ಈ ವ್ಯಾಪಾರಿಯ ಮಗ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಡೆದಿದ್ದು 45ನೇ ರ್ಯಾಂಕ್.
2018ರಲ್ಲಿ ದೆಹಲಿ ಐಐಟಿ ಪದವಿ ಪಡೆದಿರುವ ಅನಿಲ್ ಬೋಸಕ್ ತಮ್ಮ 3ನೇ ಪ್ರಯತ್ನದಲ್ಲಿ ಯುಪಿಎ ಸ್ಸಿ ರ್ಯಾಂಕ್ ಪಡೆದಿದ್ದಾರೆ. ತಮ್ಮ ಪುತ್ರನ ಸಾಧನೆ ಕುರಿತು ಮಾತನಾಡಿರುವ ಬಿನೋದ್ ಬೋಸಕ್, “ನಾನೇನೂ ಕಲಿತಿಲ್ಲ. ಆದರೆ, ಈ ಪರೀಕ್ಷೆ ನನ್ನ ಮಗನ ಕನಸಾಗಿತ್ತು. ಎಲ್ಲರೂ ತಮ್ಮ ಮಕ್ಕಳಿಗೆ ಉತ್ತೇ ಜನ ಕೊಟ್ಟರೆ ಅವರೂ ಈ ರೀತಿಯ ಸಾಧನೆ ಮಾಡುತ್ತಾರೆ’ ಎಂದಿದ್ದಾರೆ.
ಐಐಟಿ ಮುಗಿಸಿ ಕೆಲಸಕ್ಕೆ ಸೇರಬಹುದೆಂದು ನಾವು ಅಂದುಕೊಂಡಿದ್ದೇವು. ಆದರೆ ಆತ ಯುಪಿಎಸ್ಸಿಗೆ ತಯಾರಿ ನಡೆಸುವುದಾಗಿ ಹೇಳಿದ. ಅವನ ಕನಸಿಗೆ ನಾವು ಅಡ್ಡಿಯಾಗಲಿಲ್ಲ. ಆತನ ಶಿಕ್ಷಕರು ಅವನಿಗೆ ಎಲ್ಲ (ಆರ್ಥಿಕವಾಗಿಯೂ) ರೀತಿಯಲ್ಲಿ ಸಹಾಯ ಮಾಡಿದರು. ಎಲ್ಲರ ಬೆಂಬಲ ಹಾಗೂ ಆತನ ಶ್ರಮದಿಂದ ಯುಪಿಎಸ್ಸಿ ಪಾಸ್ ಆಗಿದ್ದಾನೆ. ಇಡೀ ಊರಿನ ಜನ ಮನೆಗೆ ಬಂದು ಶುಭಾಶಯ ಕೋರುತ್ತಿರುವುದು ನೋಡಿದರೆ ನನಗೆ ಖುಷಿಯಾಗುತ್ತಿದೆ ಎಂದು ಮಗನ ಸಾಧನೆ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಬಿನೋದ್ ಬೋಸಕ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.