ಮೊದಲ ಬಾರಿಗೆ ಕಾಶಿ ದೇಗುಲದೊಳಗೆ ಇಳಯರಾಜ ಸಂಗೀತ ರಸದೌತಣ
ಕನ್ನಡ, ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಭಕ್ತಿಗೀತೆ
Team Udayavani, Dec 16, 2022, 7:18 PM IST
ಚೆನ್ನೈ: ಉತ್ತರಪ್ರದೇಶದ ವಾರಾಣಸಿಯಲ್ಲಿ ನಡೆಯುತ್ತಿರುವ “ಕಾಶಿ-ತಮಿಳ್ ಸಂಗಮಮ್’ನಲ್ಲಿ ಸಂಗೀತ ಮಾಂತ್ರಿಕ ಇಳಯರಾಜ ಅವರು ಗುರುವಾರ ಮತ್ತೆ ಸಂಗೀತದ ರಸದೌತಣ ನೀಡಿದ್ದಾರೆ.
ವಿಶೇಷವೆಂದರೆ, ಕಾಶಿ ವಿಶ್ವನಾಥನ ದೇಗುಲದ ಇತಿಹಾಸದಲ್ಲೇ ಮೊದಲ ಬಾರಿಗೆ ದೇವಾಲಯದ ಆವರಣದೊಳಗೆ ಮಹಾದೇವನ ಮುಂದೆಯೇ ಇಳಯರಾಜ ಅವರು ಹಾಡಿದ್ದಾರೆ.
ವಿಶ್ವನಾಥನ ಸನ್ನಿಧಿಯಲ್ಲಿ ಭಾವಪರವಶರಾದ ಇಳಯರಾಜ ಅವರು, “ಇದು ನನ್ನ ಬದುಕಿನಲ್ಲೇ ಅತ್ಯಂತ ಶ್ರೇಷ್ಠ ಕ್ಷಣ. ಮಹಾದೇವನ ಮುಂದೆ ನಾನು ಖಾಲಿ ಕೈಯ್ಯಲ್ಲಿ ನಿಂತಿದ್ದೇನೆ. ಈ ನೆಲದಲ್ಲಿ ನಿಲ್ಲುವುದಕ್ಕಿಂತ ದೊಡ್ಡ ಸಾಧನೆ ಬೇರೊಂದಿಲ್ಲ’ ಎಂದು ಉದ್ಗರಿಸಿದ್ದಾರೆ.
ತಮಿಳು ಮಾತ್ರವಲ್ಲದೇ, ಕನ್ನಡ, ಮಲಯಾಳಂ, ತೆಲುಗು, ಮರಾಠಿ ಹಾಗೂ ಹಿಂದಿ ಭಾಷೆಯ ಭಕ್ತಿಗೀತೆಗಳನ್ನೂ ಅವರು ಹಾಡಿರುವುದಾಗಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.
History made in Kashi Vishwanath Temple today!
Maestro @ilaiyaraaja performs live in front of Lord Mahadeva inside the temple premises for the very first time in the temple’s history
Illayaraja avl sang devotional songs in Tamil, Malayalam, Kannada, Telugu, Marathi & Hindi
1/3 pic.twitter.com/7mMweo4eOa
— K.Annamalai (@annamalai_k) December 15, 2022
ಇದೇ ವೇಳೆ, ಶುಕ್ರವಾರ ಕಾರ್ಯಕ್ರಮದ ಸಮಾರೋಪದಲ್ಲಿ ಭಾಗವಹಿಸಿದ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಕಾಶಿ-ತಮಿಳು ಸಂಗಮಮ್ ಆಯೋಜನೆ ಮೂಲಕ ಪ್ರಧಾನಿ ಮೋದಿಯವರು ಭಾರತದ ಸಾಂಸ್ಕೃತಿಕ ಏಕತೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದ್ದಾರೆ. ಈ ಕಾರ್ಯಕ್ರಮವು ದೇಶದ ಸಂಸ್ಕೃತಿಯ ಎರಡು ಶಿಖರಗಳ ನಡುವಿನ ಸೇತುವಾಗಿ ಕೆಲಸ ಮಾಡಿತು’ ಎಂದು ಹೇಳಿದ್ದಾರೆ.
4 ವಾರಗಳ ಹಿಂದೆ ಪ್ರಧಾನಿ ಮೋದಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ವೇಳೆಯೂ ಇಳಯರಾಜ ಅವರು ಸಂಗೀತ ಕಾರ್ಯಕ್ರಮ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Naxal Surrender: ಮುಂಡಗಾರು ಲತಾ ಸೇರಿ 6 ನಕ್ಸಲರು ನಾಳೆ ಶರಣಾಗತಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.