ವರದಕ್ಷಿಣೆ ಕುಮ್ಮಕ್ಕಿನ ಜಾಲ
Team Udayavani, May 31, 2018, 6:00 AM IST
ಭೋಪಾಲ್: ನೀವು ಬೆಳ್ಳಗಿದ್ದೀರಾ, ಸುಂದರ ಪುರುಷರಾಗಿದ್ದಾರಾ? ಜತೆಗೆ, ಉನ್ನತ ಹುದ್ದೆಯಲ್ಲಿದ್ದು ಕೈತುಂಬಾ ಸಂಬಳ ಪಡೆಯುತ್ತಿದ್ದೀರಾ? ಹಾಗಿದ್ದರೆ, ನಿಮಗೆ 1 ಕೋಟಿ ರೂ. ವರದಕ್ಷಿಣೆ ಖಾತ್ರಿ. ಇದರ ಜತೆಗೆ, ವಧು ಮನೆಯವರ ಕಡೆಯಿಂದ ವೈಭವೋಪೇತ ಮದುವೆ, ಆಸ್ತಿ ಪಾಸ್ತಿ, ದುಬಾರಿ ಆಭರಣ. ಅಲ್ಲದೆ, ವಧು ಮನೆಯವರ ಪ್ರಾಯೋಜಕತ್ವದಲ್ಲಿ ವಿದೇಶ ಪ್ರಯಾಣ!
ಭಾರತದಲ್ಲಿ ಸೇವೆ ಸಲ್ಲಿಸುತ್ತಿರುವ ಮ್ಯಾಟ್ರಿಮೊನಿ ವೆಬ್ ಸೈಟ್ ಒಂದು, ಯುವಕರನ್ನು ಹೀಗೆ ಕಾನೂನು ಬಾಹಿರವಾಗಿ ಪ್ರೇರೇಪಿಸುತ್ತಿರುವುದನ್ನು, ಕಾಂಗ್ರೆಸ್‌ನ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ, ಟ್ವೀಟರ್ ಮೂಲಕ ಈ ವೆಬ್ ಸೈಟ್ ಬಗ್ಗೆ ಪ್ರಧಾನಿ ಕಚೇರಿಗೆ ಹಾಗೂ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಗಮನಕ್ಕೆ ತಂದಿದ್ದಾರೆ. “ವರದಕ್ಷಿಣೆ’ ನೀಡುವುದು, ಕೊಡುವುದು ಅಪರಾಧ ಎಂಬ ಕಾನೂನು ಜಾರಿಯಲ್ಲಿದ್ದರೂ, ಈ ವೆಬ್ ಸೈಟ್ ಕಾನೂನು ಬಾಹಿರವಾಗಿ ಯುವಕರನ್ನು ವರದಕ್ಷಿಣೆಗೆ ಪ್ರಚೋದಿಸುತ್ತಿದೆ ಎಂದು ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಈ ವೆಬ್ ಸೈಟ್, ವರದಕ್ಷಿಣೆಗೆ ಹುಡುಗರ ಬಣ್ಣವನ್ನೂ ಮಾನದಂಡವಾಗಿರಿಸಿಕೊಂಡಿರುವುದನ್ನು ಕೂಡಾ ಸಿಂಧಿಯಾ ಆಕ್ಷೇಪಿಸಿದ್ದಾರೆ. 35 ದಾಟಿದ, ಸಾಧಾರಣ ಸಂಪಾದನೆ ಇರುವ ಯುವಕರಿಗೆ 35 ಲಕ್ಷ ರೂ. ವರದಕ್ಷಿಣೆ ಫಿಕ್ಸ್ ಮಾಡಲಾಗಿದೆ. ಇಂಥವರಿಗೆ, ಪರಿಪೂರ್ಣತೆಗಾಗಿ ಕೆಲವಾರು ಸಲಹೆಗಳನ್ನು ನೀಡಿರುವ ವೆಬ್ ಸೈಟ್, ತಮ್ಮ ಸಲಹೆ ಪಾಲಿಸಿದರೆ ವರದಕ್ಷಿಣೆ ಹೆಚ್ಚು ಡಿಮ್ಯಾಂಡ್ ಮಾಡಬಹುದು ಎಂದೂ ಹೇಳಿದೆಯೆಂದು ಸಿಂಧಿಯಾ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
Election: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಪ್ರಚಾರಕ್ಕೆ ತೆರೆ: ನಾಳೆ ಮತದಾನ
Scientists: ಕೋಳಿ ಮೊದಲಾ, ಮೊಟ್ಟೆ ಮೊದಲಾ?: ಇಲ್ಲಿದೆ ಉತ್ತರ!
MUST WATCH
ಹೊಸ ಸೇರ್ಪಡೆ
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
IPL-2025: ಓಂಕಾರ್ ಸಾಳ್ವಿ ಆರ್‌ಸಿಬಿ ಬೌಲಿಂಗ್ ಕೋಚ್
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.