ನಾನೊಬ್ಬ ಸಾಮಾನ್ಯ; ಶಿಷ್ಟಾಚಾರ ಗೊತ್ತಿಲ್ಲ: ಮೋದಿ hugplomacy
Team Udayavani, Jan 20, 2018, 10:48 AM IST
ಹೊಸದಿಲ್ಲಿ : ನಾನೊಬ್ಬ ಸಾಮಾನ್ಯ ಮನುಷ್ಯ; ನನಗೆ ಶಿಷ್ಟಾಚಾರ ಗೊತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಉತ್ತಮ ಬಾಂಧವ್ಯ ಹೊಂದಿರುವ ನಾಯಕರಿಗೆ ಅಪ್ಪುಗೆಯ ಸ್ವಾಗತ ನೀಡುವ ಮೂಲಕ “ಅಪ್ಪುಗೆ-ಮುತ್ಸದ್ದಿತನ’ವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಮಾಡಿರುವ ಲೇವಡಿಗೆ ಉತ್ತರವಾಗಿ ಮೋದಿ ಈ ಮಾತುಗಳನ್ನು ಹೇಳಿದರು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಪ್ರಧಾನಿ ಮೋದಿ ಆತ್ಮೀಯ ಅಪ್ಪುಗೆಯ ಸ್ವಾಗತ ನೀಡಿದ್ದರು. ಹಿಂದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕಾಣುವಾಗಲೂ ಮೋದಿ ಅಪ್ಪುಗೆಯ ಆತ್ಮೀಯತೆಯನ್ನು ತೋರಿದ್ದರು. ಕಾಂಗ್ರೆಸ್ ಪಕ್ಷ ಮೋದಿ ಅವರ ಈ ಪ್ರಚಾರ ತಂತ್ರವನ್ನು “ಅಪ್ಪುಗೆ ಮುತ್ಸದ್ದಿತನ’ದ ಪ್ರದರ್ಶನವೆಂದು ಲೇವಡಿ ಮಾಡಿತ್ತು.
ಒಂದು ವೇಳೆ ನನಗೂ ಇತರರಂತೆ “ತರಬೇತಿ’ ಸಿಕ್ಕಿರುತ್ತಿದ್ದರೆ ನಾನೂ ಶಿಷ್ಟಾಚಾರವನ್ನು ಅನುಸರಿಸುತ್ತಿದ್ದೆ; ಹಸ್ತಲಾಘವ ಮಾಡುತ್ತಿದ್ದೆ; ವಿಶ್ವ ನಾಯಕರೊಂದಿಗೆ ನಿಂತು ಎಡ ಬಲ ನೋಡುತ್ತಿದ್ದೆ’ ಎಂದು ಪ್ರಧಾನಿ ಮೋದಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.
“ನಾನೊಬ್ಬ ಸಾಮಾನ್ಯ ಮನುಷ್ಯ; ನನ್ನ ದೇಶಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ನಾನು ಯತ್ನಿಸುತ್ತೇನೆ’ ಎಂದು ಪ್ರಧಾನ ಮೋದಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.
“ನನ್ನ ಮೂಲ ಗುಣ ಏನೆಂದರೆ ಪ್ರತಿಕೂಲತೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸುವುದೇ ಆಗಿದೆ’ ಎಂದು ಮೋದಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
MUST WATCH
ಹೊಸ ಸೇರ್ಪಡೆ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.