![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
![Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’](https://www.udayavani.com/wp-content/uploads/2025/02/Dubai1-415x234.jpg)
Team Udayavani, Jan 29, 2025, 3:22 PM IST
ನವದೆಹಲಿ: ರಾಷ್ಟ್ರ ರಾಜಧಾನಿಯ ನೀರು ಸರಬರಾಜಿಗೆ ಅಡ್ಡಿಪಡಿಸಲು ಹರಿಯಾಣವು ಯಮುನಾ ನದಿಯನ್ನು ವಿಷಪೂರಿತಗೊಳಿಸಿದೆ ಎಂಬ ಆಪ್ ನಾಯಕ,ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಗಂಭೀರ ಆರೋಪದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಬುಧವಾರ(ಜ29) ಕಿಡಿ ಕಾರಿದ್ದು, ಇಂತಹ ಅಗ್ಗದ ಹೇಳಿಕೆಗಳು ದೇಶಕ್ಕೆ ಮಾಡಿದ ಅವಮಾನ ಎಂದಿದ್ದಾರೆ.
ದೆಹಲಿಯ ಕರ್ತಾರ್ ನಗರದಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೇಜ್ರಿವಾಲ್ ಮೇಲಿನ ತಮ್ಮ AAP-da (disaster) ಆರೋಪವನ್ನು ಮತ್ತೆ ಪುನರುಚ್ಚರಿಸಿದರು. ಚುನಾವಣೆಯಲ್ಲಿ ಸೋಲುವ ಭಯದಿಂದಾಗಿ ಪಕ್ಷವು ಈ ರೀತಿ ಆರೋಪ ಮಾಡುತ್ತಿದೆ ಎಂದರು. ಆಪ್ ನಾಯಕರನ್ನು ಸರಣಿ ಹಂತ*ಕ ಚಾರ್ಲ್ಸ್ ಶೋಭ್ ರಾಜ್ ಗೆ ಹೋಲಿಸಿದರು.
”ಕೇಜ್ರಿವಾಲ್ ಹರಿಯಾಣದ ಜನರ ಮೇಲೆ ಅಸಹ್ಯಕರ ಆರೋಪಗಳನ್ನು ಮಾಡಿದ್ದಾರೆ. ಸೋಲುವ ಭಯದಿಂದ ಗಲಿಬಿಲಿಗೊಂಡಿದ್ದಾರೆ. ಹರಿಯಾಣದ ಜನರು ದೆಹಲಿಯಲ್ಲಿರುವವರಿಗಿಂತ ಭಿನ್ನವೇ? ಹರಿಯಾಣದಲ್ಲಿ ವಾಸಿಸುವವರ ಸಂಬಂಧಿಕರು ದೆಹಲಿಯಲ್ಲಿ ವಾಸಿಸುತ್ತಿಲ್ಲವೇ? ಹರಿಯಾಣದ ಜನರು ತಮ್ಮ ಸ್ವಂತ ಜನರು ಕುಡಿಯುವ ನೀರನ್ನು ವಿಷಪೂರಿತಗೊಳಿಸಬಹುದೇ?. ಇದು ಹರಿಯಾಣಕ್ಕೆ ಮಾತ್ರವಲ್ಲ, ಭಾರತೀಯರಿಗೆ ಮಾಡಿದ ಅವಮಾನ, ನಮ್ಮ ಮೌಲ್ಯಗಳಿಗೆ ಅವಮಾನ, ನಮ್ಮ ಚಾರಿತ್ರ್ಯಕ್ಕೆ ಅವಮಾನ, ನೀರು ನೀಡುವುದು ಒಳ್ಳೆಯ ಕೆಲಸ ಎಂದು ಪರಿಗಣಿಸುವ ದೇಶ ನಮ್ಮದು. ಈ ಬಾರಿ ಅಗ್ಗದ ಮಾತುಗಳನ್ನಾಡುವವರಿಗೆ ದೆಹಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ನನಗೆ ಖಾತ್ರಿಯಿದೆ ” ಎಂದು ಕಿಡಿ ಕಾರಿದರು.
”ಹರಿಯಾಣ ಕಳುಹಿಸಿದ ಯಮುನಾ ನೀರನ್ನು ನಾನೂ ಸೇರಿದಂತೆ ದೆಹಲಿಯಲ್ಲಿ ವಾಸಿಸುವ ಎಲ್ಲರೂ ಸೇವಿಸುತ್ತಾರೆ. “ಯಮುನಾ ನೀರನ್ನು ನ್ಯಾಯಾಧೀಶರು, ರಾಜತಾಂತ್ರಿಕರು ಸೇರಿ ಬಡವರೂ ಸೇವಿಸುತ್ತಾರೆ, ಮೋದಿಯನ್ನು ಕೊಲ್ಲಲು ಹರಿಯಾಣ ಅದನ್ನು ವಿಷಪೂರಿತಗೊಳಿಸುತ್ತದೆ ಎಂದು ಭಾವಿಸಬಹುದೇ” ಎಂದು ಪ್ರಶ್ನಿಸಿದರು.
ಹರಿಯಾಣವು ಯಮುನಾ ನೀರಿನಲ್ಲಿ “ವಿಷ ಬೆರೆಸುತ್ತಿದೆ” ಎಂಬ ಆರೋಪಗಳಿಗೆ ಚುನಾವಣ ಆಯೋಗ ಕೇಜ್ರಿವಾಲ್ ಅವರ ಬಳಿ ಪುರಾವೆ ಕೇಳಿದ್ದು ಬುಧವಾರ(ಜ29) ರಾತ್ರಿ 8 ಗಂಟೆಯೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್ ಪತ್ರಿಕೆ
ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ
Earthquake: ಪ್ರಬಲ ಭೂಕಂಪ: ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ದೆಹಲಿ ಜನ.. 4.0ತೀವ್ರತೆ ದಾಖಲು
Delhi Stampede: ನನ್ನ ಪತ್ನಿ ತಾರಾ ಎಲ್ಲಿ?..ನಾಪತ್ತೆಯಾದ ಪತ್ನಿಗಾಗಿ ಪತಿಯ ಹುಡುಕಾಟ!
Anandapura:ಮನೆಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ; ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ
Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’
ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
Udupi: ಡಾ| ಟಿಎಂಎ ಪೈ ಆಸ್ಪತ್ರೆ; ಫೆ.20ರಂದು ಲಿಂಫೆಡೆಮಾ ತಪಾಸಣೆ ಶಿಬಿರ
You seem to have an Ad Blocker on.
To continue reading, please turn it off or whitelist Udayavani.