IMD; ದೇಶದಲ್ಲಿ ಈ ಬಾರಿ ಮುಂಗಾರಿನಲ್ಲಿ ಹೆಚ್ಚು ಮಳೆ: ಹವಾಮಾನ ಇಲಾಖೆ
Team Udayavani, Apr 16, 2024, 6:40 AM IST
ಹೊಸದಿಲ್ಲಿ: ಕಳೆದ ಮುಂಗಾರಿನಲ್ಲಿ ಮಳೆಯ ಕೊರತೆ ಯಿಂದ ಪರಿತಪಿಸಿದ ಜನರಿಗೆ ಈ ಬಾರಿ ಭಾರತೀಯ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದೆ. ಭಾರತದಲ್ಲಿ ಪ್ರಸಕ್ತ ವರ್ಷ ಮುಂಗಾರಿನಲ್ಲಿ ವಾಡಿ ಕೆಗಿಂತ ಹೆಚ್ಚೇ ಮಳೆ ಸುರಿಯಲಿದೆ ಎಂದು ಇಲಾಖೆ ಹೇಳಿದೆ.
ಆದರೆ ದೇಶಾದ್ಯಂತ ಮಳೆಯ ಹಂಚಿಕೆ ಸಮಾನವಾಗಿರುವ ಸಾಧ್ಯತೆ ಕಡಿಮೆಯಿದ್ದು, ಈಶಾನ್ಯ, ವಾಯವ್ಯ ಮತ್ತು ಪೂರ್ವದ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತಮ ಮಳೆಗೆ ಕಾರಣವಾಗು ವಂಥ ಲಾ ನಿನಾ ಸ್ಥಿತಿಯು ಆಗಸ್ಟ್- ಸೆಪ್ಟಂಬರ್ ಅವಧಿಯಲ್ಲಿ ಆರಂಭವಾಗಲಿದೆ. 1951ರಿಂದ 2023ರವರೆಗಿನ ದತ್ತಾಂಶಗಳನ್ನು ನೋಡಿದರೆ, ಎಲ್ ನಿನೋ ಬಳಿಕ ಲಾ ನಿನಾ ಸ್ಥಿತಿ ಬಂದಾಗ ಅಂದರೆ ಸುಮಾರು 9 ಬಾರಿ ಭಾರತದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಆಗಿದೆ ಎಂದೂ ಹವಾಮಾನ ಇಲಾಖೆಯ ಮುಖ್ಯಸ್ಥ ಮೃತ್ಯುಂಜಯ ಮೊಹಾ ಪಾತ್ರ ಹೇಳಿದ್ದಾರೆ.
ಈ ಬಾರಿ 4 ತಿಂಗಳ ಮುಂಗಾರು ಋತುವಿನಲ್ಲಿ (ಜೂನ್ನಿಂದ ಸೆಪ್ಟಂಬರ್) ಸಾಮಾನ್ಯ ಕ್ಕಿಂತ ಹೆಚ್ಚು ಅಂದರೆ ದೀರ್ಘಾವಧಿ ಸರಾಸರಿ(87 ಸೆ.ಮೀ.)ಯ ಶೇ.106ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.