ಜಿಡಿಪಿಯಲ್ಲಿ ಭಾರತವನ್ನು ಹಿಂದಿಕ್ಕಿದ ಬಾಂಗ್ಲಾದೇಶ ! ಐಎಂಎಫ್ ಹೇಳಿದ್ದೇನು?


Team Udayavani, Oct 14, 2020, 8:24 PM IST

GDP

ಮಣಿಪಾಲ: ಹಿಂದುಳಿದ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಳ್ಳುವ ಬಾಂಗ್ಲಾದೇಶದ ಜಿಡಿಪಿ ಈ ಕ್ಯಾಲೆಂಡರ್ ವರ್ಷದಲ್ಲಿ (ಜನವರಿಯಿಂದ ಡಿಸೆಂಬರ್ ವರೆಗೆ) ಭಾರತದ ಕ್ಯಾಪಿಟಾ ಜಿಡಿಪಿಗಿಂತ ಹೆಚ್ಚಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಮಾಹಿತಿಯನ್ನು ಸ್ವತಃ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಈ ನೀಡಿದೆ. ಐಎಂಎಫ್ ಬಾಂಗ್ಲಾದೇಶದ ತಲಾ ಜಿಡಿಪಿ 1,888 ಡಾಲರ್‌ (ಸುಮಾರು 1,38,400 ರೂ.) ಆಗಿದ್ದರೆ, ಭಾರತದಲ್ಲಿ ಅದು 1,877 ಡಾಲರ್‌ (ಸುಮಾರು 1,37,594 ರೂ.) ಆಗಿರಬಹುದು ಎಂದು ಹೇಳಿದೆ.

2021ರ ವೇಳೆಗೆ ಭಾರತ ಇದರಲ್ಲಿ ಮುನ್ನಡೆ ಸಾಧಿಸಲಿದೆ ಎಂದು ಐಎಂಎಫ್ ಹೇಳಿದೆ. 2021ರಲ್ಲಿ ಭಾರತದಲ್ಲಿ ತಲಾ ಜಿಡಿಪಿ 1,48,190 ರೂ. ಆಗಿರಲಿದ್ದು, ಬಾಂಗ್ಲಾದೇಶದ ಜಿಡಿಪಿ 1,45,270 ರೂಪಾಯಿಗಳಾಗಿರಲಿದೆ. ಇದೀಗ ಭಾರತವು 1,037,21 ರೂಪಾಯಿಗಳನ್ನು ಹೊಂದಿದ್ದರೆ, ಬಾಂಗ್ಲಾದೇಶವು ತಲಾ ಜಿಡಿಪಿಯಲ್ಲಿ 1,37,824 ರೂಪಾಯಿಗಳನ್ನು ಹೊಂದಿದೆ. ಈ ಅಂಕಿ ಅಂಶವು ಒಂದು ಡಾಲರ್‌ಗೆ 73 ರೂಪಾಯಿಗಳನ್ನು ಆಧರಿಸಿದೆ.

ಮೊದಲ ತ್ರೈಮಾಸಿಕದ ಕೆಲವು ಬೆಳವಣಿಗೆಗಳು ಭಾರತದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ ಎಂದು ಐಎಂಎಫ್ ಹೇಳಿದೆ. ಮುಂದಿನ ದಿನಗಳಲ್ಲಿ ಅವುಗಳು ಕಡಿಮೆಯಾಗುವ ಯಾವುದೇ ಸಾಧ್ಯತೆ ಕಾಣುತ್ತಿಲ್ಲ ಎಂದು ಹೇಳಿದೆ. ಭಾರತದ ಆರ್ಥಿಕತೆಗೆ ಮುಂದಿನ ಹಾದಿ ಸಾಕಷ್ಟು ಸವಾಲಿನದ್ದಾಗಿದೆ. ಐಎಂಎಫ್ ವರದಿಯ ಪ್ರಕಾರ ದೇಶದ ಸ್ಥಿತಿ ಬಾಂಗ್ಲಾದೇಶಕ್ಕಿಂತ ಕೆಟ್ಟದಾಗಿದ್ದು, ತಲಾ ಜಿಡಿಪಿಯೂ ಬಾಂಗ್ಲಾದೇಶಕ್ಕಿಂತ ಕೆಳಗೆ ಇದೆ ಎಂದಿದೆ. ಇದಕ್ಕೆ ಲಾಕ್‌ಡೌನ್‌ ನೇರ ಕಾರಣ ಎಂದು ಹೇಳಲಾಗಿದೆ.

ಈ ವರ್ಷ ಜಿಡಿಪಿ 10% ಕುಸಿದಿದೆ
ಈ ವರ್ಷ ಭಾರತದ ತಲಾ ಜಿಡಿಪಿ 10% ರಷ್ಟು ಕುಸಿದಿದೆ. ಆದರೆ ಬಾಂಗ್ಲಾದೇಶದ ತಲಾ ಜಿಡಿಪಿಯು ಶೇ. 4ರ ಬೆಳವಣಿಗೆಯನ್ನು ಕಂಡಿದೆ. ತಲಾ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ವಿಷಯದಲ್ಲಿ ಕೆಲವು ವರ್ಷಗಳ ಹಿಂದಿನ ವರೆಗೂ ಭಾರತ ಬಾಂಗ್ಲಾದೇಶಕ್ಕಿಂತಲೂ ಮೇಲಿತ್ತು. ಆದರೆ ದೇಶದಲ್ಲಿ ತ್ವರಿತ ರಫ್ತಿನಿಂದಾಗಿ, ಅದರ ಬೆಳವಣಿಗೆ ಗಮನಾರ್ಹವಾಗಿ ಬದಲಾಗಿದೆ. ಅಲ್ಲದೆ ಭಾರತದ ಉಳಿತಾಯ ಮತ್ತು ಹೂಡಿಕೆ ಕಡಿಮೆಯಾಗಿದೆ.

ಪಾಕಿಸ್ಥಾನ ಮತ್ತು ನೇಪಾಳಕ್ಕಿಂತ ಭಾರತ ಮುಂದೆ
ಐಎಂಎಫ್ ನ ಅಂದಾಜು ಲೆಕ್ಕಾಚಾರಗಳ ಪ್ರಕಾರ ಭಾರತವು ಪಾಕಿಸ್ಥಾನ ಮತ್ತು ನೇಪಾಳಕ್ಕಿಂತ ಮುಂದೆ ಇದೆ. ಆದರೆ ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ದಕ್ಷಿಣ ಏಷ್ಯಾ ಭಾರತಕ್ಕಿಂತ ಮುಂದೆ ಇದೆ. ಭಾರತದ ಸಾಧನೆ ಕುಸಿಯಬಹುದು ಎಂದಿರುವ ವರದಿ ನೇಪಾಳ ಮತ್ತು ಭೂತಾನ್ ಆರ್ಥಿಕತೆಗಳು ಈ ವರ್ಷ ಬೆಳೆಯುವ ನಿರೀಕ್ಷೆಯಿದೆ ಎಂದು ಹೇಳಿದೆ. 2021ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಯಲ್ಲಿ 9.6% ಕುಸಿತ ಕಾಣಲಿದೆ ಎಂದು ವಿಶ್ವ ಬ್ಯಾಂಕ್ ಮುನ್ಸೂಚನೆ ನೀಡಿದೆ. ಸ್ಪೇನ್ ಮತ್ತು ಇಟಲಿಯ ಅನಂತರ ಭಾರತದ ಜಿಡಿಪಿಯಲ್ಲಿ 10.3% ರಷ್ಟು ಇಳಿಕೆ ಕಂಡುಬಂದಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆಗಳ ನಡುವಿನ ದೊಡ್ಡ ಕುಸಿತವಾಗಲಿದೆ ಎಂದು ಐಎಂಎಫ್ ವರದಿಯಲ್ಲಿ ತಿಳಿಸಿದೆ. ಚೀನ 2020 ರಲ್ಲಿ ಶೇ. 5.7ರಷ್ಟು ಕೊರತೆ ಕಾಣಲಿದೆ ಎಂದಿದೆ. ಭಾರತ ಮತ್ತು ಇಂಡೋನೇಷ್ಯಾದಂತಹ ದೇಶಗಳಲ್ಲಿ ಮುಂಬರುವ ದಿನಗಳಲ್ಲಿ ವೈರಸ್ ಹರಡುವ ಪ್ರಮಾಣ ಹೆಚ್ಚಾಗಲಿದ್ದು, ಇದು ಆರ್ಥಿಕ ಚೇತರಿಕೆಗೆ ಅಪಾಯ ತಂದೊಡ್ಡಲಿದೆ ಎಂದು ಹೇಳಿದೆ. ಈ ದೇಶಗಳ ಆರ್ಥಿಕತೆಯು ಪ್ರವಾಸೋದ್ಯಮ ಮತ್ತು ರಫ್ತನ್ನು ಅವಲಂಬಿಸಿದೆ.

1990-91ರ ಬಿಕ್ಕಟ್ಟಿನ ಬಳಿಕ 2020ರಲ್ಲಿ ಭಾರತೀಯ ಆರ್ಥಿಕತೆಯು ಹೆಚ್ಚು ಪರಿಣಾಮ ಬೀರಬಹುದು ಎಂದು ವರದಿ ಹೇಳಿದೆ. ಶ್ರೀಲಂಕಾದ ಬಳಿಕ ಭಾರತವು ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಕೆಟ್ಟ ಆರ್ಥಿಕತೆಯಾಗುವ ಸಾಧ್ಯತೆಯಿದೆ ಎಂದು ಅದು ವರದಿ ಕಳವಳ ವ್ಯಕ್ತಪಡಿಸಿದೆ. ಆದಾಗ್ಯೂ 2021ರಲ್ಲಿ ಭಾರತದಲ್ಲಿ ಚೇತರಿಕೆ ಕಾಣಲಿದೆ ಎಂದು ಐಎಂಎಫ್ ವರದಿ ತಿಳಿಸಿದೆ.

 

 

 

 

 

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌ ಶಾ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.