ಪುಲ್ವಾಮಾ ದಾಳಿ ಪರಿಣಾಮ ಐಎಸ್‌ಐ ಮುಖ್ಯಸ್ಥ ಬದಲು
Team Udayavani, Jun 18, 2019, 5:35 AM IST
ಇಸ್ಲಾಮಾಬಾದ್: ಪುಲ್ವಾಮಾ ದಾಳಿ ನಂತರದಲ್ಲಿ ಗುಪ್ತಚರ ದಳದಲ್ಲಿ ಮಹತ್ವದ ಬದಲಾವಣೆಗೆ ಕೈಹಾಕಿರುವ ಪಾಕಿಸ್ತಾನ ಐಎಸ್‌ಐ ಮುಖ್ಯಸ್ಥ ನನ್ನೇ ಬದಲಿಸಿದೆ. ಲೆ.ಜ ಅಸಿಮ್ ಮುನೀರ್ ಬದಲಿಗೆ ಲೆ. ಜ ಫೈಜ್ ಹಮೀದ್‌ರನ್ನು ಈ ಹುದ್ದೆಗೆ ನೇಮಿಸಲಾಗಿದೆ. ಕಾಶ್ಮೀರದ ವಿಚಾರದಲ್ಲಿ ವಿಶೇಷ ಪರಿಣಿತಿ ಹೊಂದಿರುವ ಅಸಿಮ್ ಮುನೀರ್‌ರನ್ನು ಐಎಸ್‌ಐ ಹುದ್ದೆ ಯಿಂದ ತೆಗೆದುಹಾಕಿದ್ದು, ಅತ್ಯಂತ ಅಚ್ಚರಿಯ ಬೆಳವಣಿಗೆಯಾಗಿದೆ. ಅಲ್ಲದೆ, ಅಸಿಮ್ ಕೇವಲ 8 ತಿಂಗಳ ಅವಧಿಗೆ ಈ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ.
ಮೂಲಗಳ ಪ್ರಕಾರ, ಪುಲ್ವಾಮಾ ದಾಳಿಗೂ ಮೊದಲಿನ ಹಾಗೂ ನಂತರದ ಸನ್ನಿವೇಶಗಳನ್ನು ನಿರ್ವಹಿಸಲು ಐಎಸ್‌ಐ ವಿಫಲವಾಗಿದೆ ಎಂದು ಪಾಕ್ ಸೇನೆ ಭಾವಿಸಿದೆ. ಆ ಅವಧಿಯಲ್ಲಿ ಐಎಸ್‌ಐ ಮುಖ್ಯಸ್ಥ ರಾಗಿದ್ದ ಅಸಿಮ್ ಅವರೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಪುಲ್ವಾಮಾ ದಾಳಿ ನಂತರದಲ್ಲಿ ಅಂತಾರಾಷ್ಟ್ರೀಯ ಒತ್ತಡ ವ್ಯಾಪಕವಾಗಿದ್ದು, ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವುದು ಪಾಕ್‌ಗೆ ಅನಿವಾರ್ಯ ಎಂಬ ಸ್ಥಿತಿ ತಂದಿಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.