Act; ಜು.1ರಂದು ದೇಸಿ ಕ್ರಿಮಿನಲ್ ಕಾಯ್ದೆ ಜಾರಿ: ವಂಚನೆ ಇನ್ನು 420 ಅಲ್ಲ
Team Udayavani, Feb 25, 2024, 6:20 AM IST
ಹೊಸದಿಲ್ಲಿ: ವಸಹಾತು ಶಾಹಿ ಅಪರಾಧ ನ್ಯಾಯ ವ್ಯವಸ್ಥೆ ಯನ್ನು ಸಂಪೂರ್ಣವಾಗಿ ಬದಲಿಸಲಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯು ಜುಲೈ 1ರಂದು ದೇಶಾದ್ಯಂತ ಜಾರಿಯಾಗ ಲಿದೆ ಎಂದು ಕೇಂದ್ರ ಸರಕಾರ ಶನಿವಾರ ಘೋಷಿಸಿದೆ.
ಕೇಂದ್ರ ಗೃಹ ಸಚಿವಾಲಯವು ಈ ಸಂಬಂಧಿಸಿದಂತೆ ಅಧಿಸೂಚನೆಗಳನ್ನು ಹೊರಡಿಸಿದೆ. ಆ ಪ್ರಕಾರ ವಸಾಹಾತು ಶಾಹಿ ಕಾಲದ ಕಾನೂನುಗಳಾದ 1860ರ ಭಾರತೀಯ ದಂಡ ಸಂಹಿತೆ, 1973ರ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಹಾಗೂ 1872ರ ಭಾರತೀಯ ಸಾಕ್ಷಿ ಕಾಯ್ದೆಗಳನ್ನು ನೂತನ ಕಾನೂನುಗಳು ಬದಲಿಸಲಿವೆ.
ವಿವಿಧ ಅಪರಾಧಗಳು ಮತ್ತು ಅವುಗಳ ಶಿಕ್ಷೆಗಳಿಗೆ ವ್ಯಾಖ್ಯಾನ ನೀಡುವ ಮೂಲಕ ದೇಶದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯನ್ನು ಕೂಲಂಕಷವಾಗಿ ಪರೀಶೀಲಿಸುವ ಗುರಿಯನ್ನು ಈ 3 ನೂತನ ಶಾಸನಗಳು ಒಳಗೊಂಡಿವೆ ಎಂದು ಪ್ರಟಕನೆಯಲ್ಲಿ ಹೇಳಲಾಗಿದೆ. ಇದಲ್ಲದೇ, ಈ 3 ಕಾನೂನುಗಳಲ್ಲಿ ವಿವಿಧ ವೈಶಿಷ್ಟéಗಳಿದ್ದು, ಭಾರತೀಯ ನ್ಯಾಯ ಸಂಹಿತೆಯಲ್ಲಿ ಮೊದಲ ಬಾರಿಗೆ ಭಯೋತ್ಪಾದನೆ ಪದದ ಅರ್ಥವನ್ನು ವ್ಯಾಖ್ಯಾನಿಸಲಾಗಿದೆ.
ಪ್ರತ್ಯೇಕತಾ ವಾದ, ಶಸ್ತ್ರಾಸ್ತ್ರದಂಗೆ, ವಿಧ್ವಂಸಕ ಚಟು ವಟಿಕೆ ಹಾಗೂ ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಅಡ್ಡಿ ಪಡಿಸುವ ಅಂಶಗಳನ್ನು ಪಟ್ಟಿ ಮಾಡಲಾಗಿದೆ. ಜತೆಗೆ ರಾಜ್ಯದ ವಿರುದ್ಧದ ಅಪರಾಧಗಳು ಎನ್ನುವ ಹೊಸ ವಿಭಾಗ ವನ್ನೂ ಈ ಕಾನೂನುಗಳಲ್ಲಿ ಪ್ರಸ್ತಾವಿಸಲಾಗಿದೆ. ಇದರೊಂದಿಗೆ ದೇಶದ್ರೋಹ ಎಂಬ ಪದದ ಬದಲಿಗೆ ರಾಜ ದ್ರೋಹ್ ಎಂಬ ಪದ ಪರಿಚಯಿಸಲಾಗಿದ್ದು, ಭಾರತದ ಯಾವುದೇ ನಾಗರಿಕನು ವಿದೇಶಗಳಲ್ಲಿದ್ದುಕೊಂಡೇ ಭಾರತದ ವಿರುದ್ಧ ಅಪರಾಧ ಎಸಗಿದರೂ ಅವುಗಳನ್ನು ಈ ಪರಿಗಣನೆಗೆ ತೆಗೆದುಕೊಳ್ಳಲಿದೆ. ಹಿಟ್ ಆ್ಯಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಮಾತ್ರ ಸದ್ಯದ ಮಟ್ಟಿಗೆ ಜಾರಿಗೊಳಿಸದೇ ಇರಲು ಸರಕಾರ ನಿರ್ಧರಿಸಿದೆ.
ಈ ಮೂರೂ ಹೊಸ ಕಾನೂನುಗಳಿಗೆ ಕಳೆದವರ್ಷ ಡಿ. 21ರಂದು ಸಂಸತ್‌ನಲ್ಲಿ ಅನುಮೋದನೆ ದೊರೆತಿತ್ತು. ಈ ಹೊಸ ಕಾನೂನುಗಳು ದೇಶದ ಜನರನ್ನು ವಸಾಹಾತು ಮನಃಸ್ಥಿತಿಯಿಂದ ಹೊರ ತರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದರು. ಡಿ. 25ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಸೂದೆಗಳಿಗೆ ಅಂಕಿತ ಹಾಕಿದ್ದರು.
ಭಾರತೀಯ ನ್ಯಾಯ ಸಂಹಿತೆ- 2023
ಪ್ರಸ್ತುತ ಅಸ್ತಿತ್ವದಲ್ಲಿರುವ 1860ರ ಭಾರತೀಯ ದಂಡ ಸಂಹಿತೆ (ಐಪಿಸಿ)ಯನ್ನು ಭಾರತೀಯ ನ್ಯಾಯ ಸಂಹಿತೆ ಬದಲಿಸಿದೆ. ಇದು ದೇಶದ್ರೋಹದ ಬದಲಿಗೆ ಪ್ರತ್ಯೇಕವಾದ, ಸಾರ್ವಭೌಮತ್ವಕ್ಕೆ ಧಕ್ಕೆ ತರುವಂಥ ಅಪರಾಧ, ಭಯೋತ್ಪಾದಕ ಚಟುವಟಿಕೆಗಳಿಗೆ ವಿಭಿನ್ನ ವಿಭಾಗವನ್ನೇ ಗುರುತಿಸಿದೆ. ಗುಂಪು ಹತ್ಯೆ, ಅಪ್ರಾಪ್ತ ವಯಸ್ಕರ ಸಾಮೂಹಿಕ ಅತ್ಯಾಚಾರದಂಥ ಪ್ರಕರಣಗಳಿಗೆ ಮರಣದಂಡನೆ ವಿಧಿಸಲು ನಿಬಂಧನೆ ರೂಪಿಸಲಾಗಿದೆ. ಜತೆಗೆ ವ್ಯಭಿಚಾರ, ಆತ್ಮಹತ್ಯೆ ಪ್ರಕರಣಗಳು, ಸಲಿಂಗ ಕಾಮವನ್ನು ಈ ಹೊಸ ಕಾನೂನಿನ ಅನ್ವಯ ಪರಿಗಣಿಸಲಾಗುವುದಿಲ್ಲ.
ಭಾರತೀಯ ಸಾಕ್ಷ್ಯ ಕಾಯ್ದೆ-2023
1872ರ ಭಾರತೀಯ ಸಾಕ್ಷಿ ಕಾಯ್ದೆಯನ್ನು ಹೊಸ ಕಾಯ್ದೆ ಬದಲಿಸಲಿದೆ. ಹೊಸ ಕಾಯ್ದೆಯು ಅಪರಾಧಗಳಿಗೆ ಸಂಬಂಧಿಸಿದಂತೆ ವಿದ್ಯುನ್ಮಾನ ಮಾದರಿಯ ಸಾಕ್ಷ್ಯಗಳನ್ನು ಒಪ್ಪಿಕೊಳ್ಳುತ್ತದೆ ಹಾಗೂ ಎಲ್ಲ ದಾಖಲೆಗಳ ಡಿಜಿಟಲೀಕರಣಕ್ಕೆ ಒತ್ತು ನೀಡುತ್ತದೆ.
ಭಾರತೀಯ ನಾಗರಿಕ ಸುರಕ್ಷತಾ ಸಂಹಿತಾ -2023
1973ರ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸ್ಥಾನದಲ್ಲಿ ಈ ಕಾನೂನು ಜಾರಿಯಾಗಲಿದೆ. ಯಾವುದೇ ಗಂಭೀರ ಪ್ರಕರಣಗಳಿಗೆ ಸಂಬಂ ಧಿಸಿದಂತೆ 30 ದಿನಗಳಲ್ಲಿ ತನಿಖೆ ಮತ್ತು ವಿಚಾರಣೆ ಖಚಿತಪಡಿಸುತ್ತದೆ. ಸಂತ್ರಸ್ತರ ವೀಡಿಯೋ ರೆಕಾರ್ಡಿಂಗ್ ಕಡ್ಡಾಯಗೊಳಿಸಿದೆ.
ಅಪರಾಧಗಳು ಐಪಿಸಿ ಸೆಕ್ಷನ್‌ಗಳು ಬಿಎನ್‌ಎಸ್ ಸೆಕ್ಷನ್‌ಗಳು
ಕೊಲೆ (302) 101
ವರದಕ್ಷಿಣೆ ಕಿರುಕುಳದಿಂದ ಸಾವು 304(ಬಿ) 79
ಅತ್ಯಾಚಾರ (376) 63,64
ವಂಚನೆ (420) 316
ಲೈಂಗಿಕ ಕಿರುಕುಳ (354)(ಎ) 74
ಮಹಿಳೆ ಮೇಲೆ ಹಲ್ಲೆ (354)(ಬಿ) 75
ಕಳ್ಳತನ (378) 301
ಮಾನನಷ್ಟ ಮೊಕದ್ದಮೆ (499) 354
ಭಯೋತ್ಪಾದನ ಕಾಯ್ದೆ 111
ದೇಶದ್ರೋಹ/ಇದೇ ಮಾದರಿ ಇತರೆ (124(ಎ) 150
ಮಾನವ ಕಳ್ಳಸಾಗಣೆ (370) 141
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.