2024ರಲ್ಲಿ ಕಾಲೇಜಿಂದ ಹೊರಗುಳಿದವರಿಗೆ ಜೆಇಇ ಪರೀಕ್ಷೆಗೆ ಸಮ್ಮತಿ
Team Udayavani, Jan 11, 2025, 12:37 AM IST
ನವದೆಹಲಿ: 2024ರ ನ.5ರಿಂದ ನ.18ರ ನಡುವೆ ಕಾಲೇಜುಗಳಿಂದ ಹೊರಗುಳಿದವರಿಗೆ 3 ಬಾರಿ ಜೆಇಇ ಅಡ್ವಾನ್ಸ್ಡ್
ಪರೀಕ್ಷೆ ಬರೆಯಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ನ.5ರಂದು ಪ್ರಕಟಣೆ ಹೊರಡಿಸಿದ್ದ ಜಂಟಿ ಪ್ರವೇಶಾತಿ ಮಂಡಳಿ(ಜೆಎಬಿ) 2023, 2024 ಮತ್ತು 2025ರಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಘೋಷಿಸಿತ್ತು. ಆದರೆ, ಕೇವಲ 13 ದಿನಗಳ ನಂತರ ಪರೀಕ್ಷೆಯ ಅರ್ಹತೆಯನ್ನು 2024 ಮತ್ತು 2025ರ ಬ್ಯಾಚ್ಗಳಿಗೆ ಮಾತ್ರವೇ ಎಂದು ಪರಿಷ್ಕರಿಸಲಾಯಿತು. ಇದರಿಂದ ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅರ್ಹತೆ ಸಿಕ್ಕಿರಲಿಲ್ಲ. ಈ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.