![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Oct 30, 2019, 4:18 PM IST
ಜಗತ್ತಿನ ಹಲವು ಪ್ರಮುಖ ನಗರಗಳಿಗೆ ಸಂಚಕಾರ
ಹೊಸದಿಲ್ಲಿ: ತಾಪಮಾನ ಬದಲಾವಣೆ ಮತ್ತು ಏರುತ್ತಿರುವ ಸಮುದ್ರ ಮಟ್ಟದಿಂದಾಗಿ ಮುಂಬಯಿ, ಕೋಲ್ಕತಾ ಸೇರಿದಂತೆ ಜಗತ್ತಿನ ಹಲವು ನಗರಗಳು 2050ರ ವೇಳೆಗೆ ನಾಶವಾಗಲಿದೆ ಎಂದು ಸಂಶೋಧನೆಯೊಂದು ಹೇಳಿದೆ.
ಜಗತ್ತಿನ ಮೂರನೇ ಒಂದು ಭಾಗದಷ್ಟು ಜನರಿಗೆ ಇದರಿಂದ ಸಮಸ್ಯೆಯಾಗಲಿದೆ. ಗರಿಷ್ಠ ಪ್ರಮಾಣದಲ್ಲಿ ಚೀನ, ಭಾರತ, ಬಾಂಗ್ಲಾದೇಶ, ವಿಯೆಟ್ನಾಂ, ಇಂಡೋನೇಷ್ಯಾ, ಥೈಲೆಂಡ್ ದೇಶಗಳ ಜನರು ಇದರಿಂದ ಸಂಕಷ್ಟ ಪಡಲಿದ್ದಾರೆ ಎಂದು ಸಂಶೋಧನೆ ಹೇಳಿದೆ.
ಅಮೆರಿಕದ ನ್ಯೂಜೆರ್ಸಿ ಮೂಲಕ ಕ್ಲೈಮೇಟ್ ಸೆಂಟ್ರಲ್ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು, ನಾಶವಾಗಲಿರುವ ನಗರಗಳ ಬಗ್ಗೆ ಬೆಳಕು ಚೆಲ್ಲಿದೆ. ಸಮುದ್ರವು ನಗರಗಳನ್ನು ಆಪೋಷನ ತೆಗೆದುಕೊಳ್ಳುವುದರಿಂದ ಸುಮಾರು 1.50 ಕೋಟಿ ಮಂದಿ ನೆಲೆ ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದೆ.
ಇದಲ್ಲದೆ ಸದ್ಯ ಜಗತ್ತಿನಾದ್ಯಂತ 3 ಕೋಟಿ ಮಂದಿ ಪ್ರವಾಹ ಪೀಡಿತ ಪ್ರದೇಶದಲ್ಲಿ ವಾಸಿಸುತ್ತಿದ್ದು, ವರ್ಷದಲ್ಲಿ ಒಂದು ಬಾರಿಯಾದರೂ ಸಮಸ್ಯೆ ಅನುಭವಿಸುತ್ತಾರೆ ಎಂದು ಹೇಳಿದೆ. ಸರಕಾರಗಳು ತಾಪಮಾನ ಬದಲಾವಣೆ ಹಿನ್ನೆಲೆಯಲ್ಲಿ ಹಲವು ಉಪಕ್ರಮಗಳನ್ನು ಕಂಡುಕೊಂಡರೂ ಅದು ಪ್ರಯೋಜನವಾಗುತ್ತಿಲ್ಲ ಎಂದಿದೆ. ಈ ಮೊದಲು ಸಮುದ್ರ ಮಟ್ಟ ಏರಿಕೆಯಿಂದ 80 ಲಕ್ಷ ಮಂದಿಗೆ ಸಮಸ್ಯೆಯಾಗಲಿದೆ ಎಂದು ಹೇಳಲಾಗಿತ್ತು.
ಸಂಶೋಧನೆ ವರದಿ ಪ್ರಕಾರ ದಕ್ಷಿಣ ವಿಯೆಟ್ನಾಂ ಮುಳುಗಲಿದೆ ಮತ್ತು ಥೈಲೆಂಡ್‌ನ ಶೇ.10ರಷ್ಟು ಭೂಮಿ ಮುಳುಗಲಿದೆ. ಶಾಂಘೈಗೆ ಕೂಡ ಮುಳುಗುವ ಭೀತಿ ಹೊಂದಿದೆ.
ಕಳೆದ ತಿಂಗಳಷ್ಟೇ ಹವಾಮಾನ ಬದಲಾವಣೆ ಕುರಿತ ಅಂತರ್ ಸರಕಾರಿ ಸಮಿತಿಯೊಂದು ಜಾಗತಿಕವಾಗಿ ಸಮುದ್ರ ಮಟ್ಟ ಏರುತ್ತಿರುವ ಬಗ್ಗೆ ಎಚ್ಚರಿಸಿತ್ತು. ಆ ಪ್ರಕಾರ ವಿಶ್ವದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆಗೊಳಿಸದೇ ಇದ್ದಲ್ಲಿ 2100ರ ವೇಳೆಗೆ 1 ಮೀ. ಸಮುದ್ರ ಏರಲಿದೆ ಎಂದು ಹೇಳಲಾಗಿತ್ತು. ಇದರಿಂದ ನೂರಾರು ನಗರಗಳು ಮುಳುಗಲಿವೆ ಎಂದು ಹೇಳಿತ್ತು.
ಇದಷ್ಟೇ ಅಲ್ಲದೇ ಕೇವಲ 50 ಸೆ.ಮೀ. ನಷ್ಟು ಸಮುದ್ರ ಮಟ್ಟ ಏರಿದರೂ ಹಲವು ಪ್ರಮುಖ ಬಂದರು ನಗರಿಗಳು ಮುಳುಗಲಿದ್ದು 1.50 ಕೋಟಿ ಮಂದಿಗೆ ಇದರಿಂದ ಸಮಸ್ಯೆಯಾಗಲಿದೆ ಎಂದು ವಿಶ್ವಸಂಸ್ಥೆ ವರದಿಯೊಂದು ಹೇಳಿತ್ತು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.