Elephant attacks; 5 ವರ್ಷದಲ್ಲಿ ಆನೆ ದಾಳಿಗೆ ರಾಜ್ಯದ 160 ಮಂದಿ ಸಾವು
Team Udayavani, Jul 27, 2024, 1:47 AM IST
ಹೊಸದಿಲ್ಲಿ: ಮಾನವ-ಆನೆಗಳ ಸಂಘ ರ್ಷದಿಂದ ಕಳೆದ 5 ವರ್ಷಗಳಲ್ಲಿ ಕರ್ನಾಟಕದ 160 ಮಂದಿ ಸೇರಿದಂತೆ ದೇಶಾದ್ಯಂತ 2,853 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸರಕಾರದ ಅಂಕಿ-ಅಂಶಗಳು ಹೇಳಿವೆ. ಅದರಲ್ಲೂ 2023ರಲ್ಲಿ ಅತೀ ಹೆಚ್ಚು ಅಂದರೆ 628 ಮಂದಿ ಮೃತಪಟ್ಟಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್, ಮಾನವ -ಆನೆಗಳ ಸಂಘರ್ಷದಿಂದ 2019ರಲ್ಲಿ 587 ಮಂದಿ, 2020ರಲ್ಲಿ 471, 2021 ರಲ್ಲಿ 557, 2022ರಲ್ಲಿ 610 ಹಾಗೂ 2023ರಲ್ಲಿ 628 ಮಂದಿ ಸಾವಿಗೀಡಾಗಿ ದ್ದಾರೆ. ಈ ಅವಧಿಯಲ್ಲಿ ಒಡಿಶಾ 624 ಸಾವಿನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಝಾರ್ಖಂಡ್‌ನಲ್ಲಿ 474, ಪ.ಬಂಗಾಲ ದಲ್ಲಿ 436, ಅಸ್ಸಾಂನಲ್ಲಿ 383, ಛತ್ತೀಸ್‌ಗಢದಲ್ಲಿ 303, ತಮಿಳುನಾಡಿನಲ್ಲಿ 256, ಕರ್ನಾಟಕದಲ್ಲಿ 160 ಹಾಗೂ ಕೇರಳದಲ್ಲಿ 124 ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ.
628 ಹುಲಿಗಳ ಸಾವು: ಬೇಟೆ ಸೇರಿ ಇತರ ನೈಸರ್ಗಿಕ ಕಾರಣಗಳಿಂದ 5 ವರ್ಷಗಳ ಅವಧಿಯಲ್ಲಿ 628 ಹುಲಿ ಗಳು ಸಾವಿಗೀಡಾಗಿದ್ದರೆ, ಹುಲಿ ದಾಳಿ ಯಿಂದ 349 ಮಂದಿ ಮೃತಪಟ್ಟಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.