ಲವ್ ಜೆಹಾದ್: ಯುವಕನಿಗೆ 10 ವರ್ಷ ಜೈಲು, ದಂಡ
Team Udayavani, Dec 23, 2021, 6:40 AM IST
ಲಕ್ನೋ: ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆಯ ಜಾರಿ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿರುವಂತೆಯೇ ಉತ್ತರ ಪ್ರದೇಶದಲ್ಲಿ ಜಾರಿಯಾಗಿರುವ ಮದುವೆಯಾಗುವುದಕ್ಕಾಗಿ ಮತಾಂತರ ಕಾಯ್ದೆಯಡಿ ಮೊದಲ ಶಿಕ್ಷೆ ವಿಧಿಸಲಾಗಿದೆ.
ಯುವಕನೊಬ್ಬನಿಗೆ 10 ವರ್ಷ ಕಠಿನ ಸಜೆ ಮತ್ತು 30 ಸಾವಿರ ರೂ. ದಂಡ ವಿಧಿಸಲಾಗಿದೆ. ಕಳೆದ ವರ್ಷ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ಈ ಕಾಯ್ದೆ ಜಾರಿಗೊಳಿಸಿತ್ತು. ಉತ್ತರ ಪ್ರದೇಶದಲ್ಲಿ ಮದುವೆಯಾಗುವ ಉದ್ದೇಶದಿಂದಾಗಿ ಮತಾಂತರ ನಿಷೇಧ ಅಧ್ಯಾದೇಶ ಅನ್ವಯ ಕಾನ್ಪುರದಲ್ಲಿ ಈ ಪ್ರಕರಣ ದಾಖಲಾಗಿತ್ತು.
2017ರಲ್ಲಿ ಅಪ್ರಾಪೆ¤ಯೊಬ್ಬಳ ಬಳಿ ತನ್ನನ್ನು ಮುನ್ನಾ ಎಂದು ಪರಿಚಯಿಸಿಕೊಂಡು ಆತ ಪ್ರೇಮಿಸುವ ನಾಟಕವಾಡಿದ್ದ ಎಂದು ಆರೋಪಿಸಲಾಗಿತ್ತು. ಆಕೆಯನ್ನು ಮನೆಗೆ ಕರೆದುಕೊಂಡು ಹೋದ ಬಳಿಕ ಯುವಕ ನೈಜ ಹೆಸರು ಹಾಗೂ ಧರ್ಮವನ್ನು ತಿಳಿಸಿ, ನಿಖಾಕ್ಕೆ (ಮದುವೆಗೆ) ಒತ್ತಾಯಿಸಿದ್ದ. ಅದನ್ನು ಆಕೆ ನಿರಾಕರಿಸಿ, ಪೊಲೀಸರಿಗೆ ದೂರು ನೀಡಿದ್ದಳು. ಅದರ ವಿಚಾರಣೆಯಾಗಿ ಯುವಕನಿಗೆ 10 ವರ್ಷ ಕಠಿನ ಸಜೆ ಮತ್ತು 30 ಸಾವಿರ ರೂ. ದಂಡ ವಿಧಿಸಲಾಗಿದೆ.
ಇದನ್ನೂ ಓದಿ:“ಪ್ರಳಯ್’ ಪರೀಕ್ಷೆ ಯಶಸ್ವಿ : ಪಯಣದ ಮಧ್ಯೆಯೇ ಪಥ ಬದಲಿಸುವ ಹೊಸ ತಲೆಮಾರಿನ ಕ್ಷಿಪಣಿ
ಅಧ್ಯಾದೇಶದಲ್ಲಿ ಏನಿದೆ?-
-ಯಾರೇ ಆಗಲಿ ಧಾರ್ಮಿಕ ಮೂಲ ಮರೆಮಾಚಿ ಪ್ರಭಾವ, ಬಲವಂತ ದಿಂದ ಮತಾಂತರ ಮಾಡುವಂತಿಲ್ಲ
-ಆಕರ್ಷಣೆ, ಕಪಟ ಮಾರ್ಗಗಳಿಂದ ಮದುವೆ ಮಾಡಿ, ಅನಿವಾರ್ಯತೆಯ ಮತಾಂತರ ಶಿಕ್ಷಾರ್ಹ ಅಪರಾಧ
ಶಿಕ್ಷೆಯ ಪ್ರಮಾಣವೆಷ್ಟು?
-ಬಲವಂತದ ಮತಾಂತರ: ಕನಿಷ್ಠ 1ರಿಂದ 5 ವರ್ಷ ಜೈಲು; ಕನಿಷ್ಠ 15,000 ರೂ.ವರೆಗೆ ದಂಡ.
-ಅಪ್ರಾಪ್ತರು, ಎಸ್ಸಿ, ಎಸ್ಟಿ ಮಹಿಳೆಯರ ಮತಾಂತರ: 3-10ವರ್ಷ ಜೈಲು
-ಸಾಮೂಹಿಕ ಮತಾಂತರ- 3 ರಿಂದ 10 ವರ್ಷ ಜೈಲು; 50 ಸಾವಿರ ರೂ.ದಂಡ
-ಮತಾಂತರದ ಉದ್ದೇಶದಿಂದ ಮಾತ್ರ ಆಗಿರುವ ಮದುವೆಗಳನ್ನು “ಅಸಿಂಧು’ ಎಂದು ಘೋಷಿಸಲು ಅವಕಾಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್ಟಿ ಸಭೆ ತೀರ್ಮಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.