ನ್ಯಾಯದ ನಿರೀಕ್ಷೆಯಲ್ಲಿ


Team Udayavani, Aug 22, 2017, 12:57 PM IST

22-STATE-3.jpg

ಇಡೀ ದೇಶದಲ್ಲೇ ಚರ್ಚೆಗೆ ಕಾರಣವಾಗಿರುವ ತ್ರಿವಳಿ ತಲಾಖ್‌ ಬಗ್ಗೆ ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಂವಿಧಾನ
ಪೀಠ ತೀರ್ಪು ನೀಡಲು ಸಿದ್ಧವಾಗಿದೆ. ಮಂಗಳವಾರ ನೀಡುವ ತೀರ್ಪು ಇಡೀ ದೇಶವಷ್ಟೇ ಅಲ್ಲ, ಇಡೀ ಜಗತ್ತಿಗೆ ಮಾದರಿಯಾಗಿ ನಿಲ್ಲಲಿದೆ ಎಂದೇ
ಹೇಳಲಾಗುತ್ತಿದೆ. ಇದಕ್ಕೆ ಕಾರಣ ತೀರ್ಪು ನೀಡುತ್ತಿರುವ ವಿಷಯ. ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೆಹರ್‌ ನೇತೃತ್ವದ ನ್ಯಾಯಪೀಠ ತೀರ್ಪು
ನೀಡುವಾಗ ಯಾವ ವಿಷಯಗಳ ಬಗ್ಗೆ ಗಮನಹರಿಸಬಹುದು, ವಿಚಾರಣೆ ವೇಳೆ ಯಾವ್ಯಾವ ವಿಚಾರ ಚರ್ಚೆಗೆ ಬಂತು ಎಂಬ ಬಗ್ಗೆ ಪುಟ್ಟ ನೋಟ.

ತಲಾಖ್‌ ಎ ಬಿದ್ದತ್‌
ಇದು ಒಂದೇ ಬಾರಿಗೆ ನೀಡುವ ವಿಚ್ಛೇದನ. ಕೋರ್ಟ್‌ ಏಳು ದಿನಗಳ ವಿಚಾರಣೆ ಅವಧಿಯಲ್ಲಿ ಈ ಬಗ್ಗೆಯೇ ಹೆಚ್ಚು ಗಮನ ಹರಿಸಿತ್ತು. ಉಮರ್‌ ಖರೀಫ‌ ಪರಿಚಯಿಸಿದ ಈ ಪದದ ಬಗ್ಗೆ ಕುರಾನ್‌ನಲ್ಲಿ ಬಳಕೆ ಮಾಡಲಾಗಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಯಿತು. ಆದರೆ ಕುರಾನ್‌ನಲ್ಲಿ ಎಲ್ಲೂ ಈ ಬಗ್ಗೆ ಉಲ್ಲೇಖವಿಲ್ಲ ಎಂದು ಗೊತ್ತಾದ ಮೇಲೆ, ವಕೀಲ ಕಪಿಲ್‌ ಸಿಬಲ್‌ ವಿವಿಧ ಇಸ್ಲಾಮಿಕ್‌ ವಿಧಿ ವಿಧಾನಗಳಲ್ಲಿ ಇದರ ಬಳಕೆ ಇದೆ ಎಂದು
ವಾದಿಸಿದರು. ಆದರೂ ಕಡೇ ದಿನದ ವಿಚಾರಣೆ ವೇಳೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕುರಾನ್‌ನಲ್ಲಿ ಉಲ್ಲೇಖವಿಲ್ಲ ಎಂದು ಒಪ್ಪಿಕೊಂಡಿತು. ಅಲ್ಲದೆ ಇದೊಂದು ಒಪ್ಪಿತವಲ್ಲದ ಹಾಗೂ ಪಾಪಕ್ಕೆ ಸಮನಾದದ್ದು ಎಂದೂ ಹೇಳಿತು. ಆಗ ನ್ಯಾ. ಜೋಸೆಫ್ ಅವರು ದೇವರ ಕಣ್ಣಿನಲ್ಲಿ
ಪಾಪವೆಂದು ಕಂಡದ್ದು, ಜನರ ದೃಷ್ಟಿಯಲ್ಲಿ ಕಾನೂನಂತೆ ಕಾಣಿಸಬಹುದೇ ಎಂಬ ಪ್ರಶ್ನೆ ಹಾಕಿದರು. 

ತ‌ಲಾಖ್‌ ಎ ಹಸನ್‌ ಮತ್ತು ಎಹ್ಸಾನ್‌
ಡೈವೋರ್ಸ್‌ ನೀಡುವ ಮುನ್ನ ಸಂಧಾನ ಮತ್ತು ಮಧ್ಯಸ್ಥಿಕೆಗೆ ನೀಡಲಾಗುವ ಅವಧಿ. ಐದನೇ ದಿನದ ವಿಚಾರಣೆ ವೇಳೆ ಸ್ವತಃ ಸಿಜೆಐ ಅವರೇ ಕುರಾನ್‌ನಲ್ಲಿ ಈ ಎರಡು ಪದಗಳ ಬಳಕೆ ಇರುವ ಬಗ್ಗೆ ಓದಿ ತಿಳಿಸುತ್ತಾರೆ. ನಂತರ ಅರ್ಜಿದಾರರ ಪರ ವಕೀಲರಾದ ವಿವಿ ಗಿರಿ ಅವರೂ ಹೌದು ಎನ್ನುತ್ತಾರೆ. ಶಯರಾ ಬಾನೋ ಅವರ ವಕೀಲರು ಮತ್ತು ಕಪಿಲ್‌ ಸಿಬಲ್‌ ಕೂಡ ಕುರಾನ್‌ನಲ್ಲಿ ಪ್ರಸ್ತಾಪವಿರುವ ಬಗ್ಗೆ ಒಪ್ಪಿಕೊಳ್ಳುತ್ತಾರೆ. 

ಇಸ್ಲಾಮಿಕ್‌
ಮೊದಲನೇ ದಿನದ ವಿಚಾರಣೆ ವೇಳೆಯೇ ಸಿಜೆಐ ಜೆ.ಎಸ್‌. ಖೆಹರ್‌ ಅವರೇ ವಿಚಾರವೊಂದನ್ನು ಸ್ಪಷ್ಟವಾಗಿ ಹೇಳುತ್ತಾರೆ; ಈ ವಿಚಾರಣೆ ಕೇವಲ ತಲಾಖ್‌ ಕುರಿತಾದದ್ದೇ ಹೊರತು ಇಸ್ಲಾಮಿಕ್‌ ಕಾನೂನಿನ ಕುರಿತಾಗಿ ಅಲ್ಲ. ಆದರೆ ಎಲ್ಲ ಐವರು ನ್ಯಾಯಮೂರ್ತಿಗಳೂ ಏಳು ದಿನದ ವಿಚಾರಣೆಯಲ್ಲಿ ಇಸ್ಲಾಮಿಕ್‌ ಪದದ ಅರ್ಥ ಹುಡುಕಲು ಯತ್ನಿಸುತ್ತಾರೆ. ಇಸ್ಲಾಮಿಕ್‌ ಪದ ಕುರಾನ್‌ನಿಂದ ಬಂದಧ್ದೋ ಅಥವಾ ಹದೀಸ್‌(ಪ್ರವಾದಿ ಮಹಮ್ಮದ್‌ ಅನುಸರಿಸಿಕೊಂಡು ಬಂದ ವಿಧಾನ)ನಿಂದ ಬಂದಧ್ದೋ ಎಂದೂ ಕೇಳುತ್ತಾರೆ.  

ವ್ಯಾಪ್ತಿ
ಕಪಿಲ್‌ ಸಿಬಲ್‌ ಕೋರ್ಟ್‌ಗೆ ಈ ವಿಷಯ ಬಗೆಹರಿಸುವ ಅಧಿಕಾರವಿಲ್ಲ ಎಂದು ವಾದಿಸುತ್ತಾರೆ. ಇದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಇರುವ ಅಧಿಕಾರ ಮಾತ್ರ ಎಂದು ಹೇಳು¤ತಾರೆ. ಆದರೆ ಇದಕ್ಕೆ ಒಪ್ಪದ ಇಂದಿರಾ ಜೈಸಿಂಗ್‌, ಸುಪ್ರೀಂಕೋರ್ಟ್‌ಗೆ ಈ ವಿಷಯದ ಕುರಿತಂತೆ
ವಾದ ಮಾಡುವ ಹಕ್ಕಿದೆ ಎಂದು ಹೇಳುತ್ತಾರೆ. 

ಮಹಿಳೆ
ಇಡೀ ವಿಚಾರಣೆಯಲ್ಲಿ ಮಹಿಳೆ ಮತ್ತು ಆಕೆಯ ಸ್ಥಾನಮಾನದ ಬಗ್ಗೆ ಚರ್ಚೆಯಾಗಿದೆ. ಎಜಿ ಮುಕುಲ್‌ ರೋಹrಗಿ ಮಹಿಳೆಯರು ಅದರಲ್ಲೂ 
ಮುಸ್ಲಿಂ ಮಹಿಳೆಯರು ಅಲ್ಪಸಂಖ್ಯಾತರಲ್ಲೇ ಅಲ್ಪಸಂಖ್ಯಾತರಾಗಿದ್ದಾರೆ ಎಂದು ಹೇಳುತ್ತಾರೆ. ಇಂದಿರಾ ಜೈಸಿಂಗ್‌ ಕೂಡ ಇದಕ್ಕೆ ದನಿಗೂಡಿ
ಸುತ್ತಾರೆ. ಕಪಿಲ್‌ ಸಿಬಲ್‌ ಮಧ್ಯ ಪ್ರವೇಶಿಸಿ ಮುಸ್ಲಿಂ ಮಹಿಳೆಯರೂ ತ್ರಿವಳಿ ತಲಾಖ್‌ ಅನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದಾಗ, ಕೋಟ್‌
ìನಲ್ಲಿದ್ದ ಮುಸ್ಲಿಂ ಮಹಿಳೆಯರು ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಕಡೇ ದಿನದ ವಿಚಾರಣೆಯಲ್ಲಿ ಮದುವೆ ವೇಳೆಯಲ್ಲೇ ತ್ರಿವಳಿ ತಲಾಖ್‌
ಬಗ್ಗೆ ಒಪ್ಪಂದವೊಂದನ್ನು ಮಾಡಿಸಲಾಗುವುದು ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕೋರ್ಟ್‌ಗೆ ಹೇಳುತ್ತದೆ. 

ಡೈವೋರ್ಸ್‌
ಇಡೀ ವಿಚಾರಣೆಯ ಕೇಂದ್ರ ಬಿಂದು ಇದೇ ಆಗಿದೆ. ವಕೀಲರಾದ ಇಂದಿರಾ ಜೈಸಿಂಗ್‌ ಅವರು, ತ್ರಿವಳಿ ತಲಾಖ್‌ ಎಂಬುದು ಪುರುಷರಿಗೆ ನೀಡಿದ ಹೆಚ್ಚುವರಿ ಕಾನೂನಿನ ಬಲ ಎನ್ನುತ್ತಾರೆ. ಆದರೆ ಮಹಿಳೆಗೆ ಮಾತ್ರ ಖುಲಾ(ಡೈವೋರ್ಸ್‌) ಗೆ ಸೀಮಿತ ಮಾಡಲಾಗಿದೆ ಎಂದು ಹೇಳುತ್ತಾರೆ. ನ್ಯಾ.
ಜೋಸೆಫ್ ಅವರು, ಒಂದೊಮ್ಮೆ ಕೋರ್ಟ್‌ ತ್ರಿವಳಿ ತಲಾಖ್‌ ನಿಷೇಧಿಸಿದರೆ ಆಗ ಡೈವೋರ್ಸ್‌ಗೆ ಮಾರ್ಗವಿದೆಯೇ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಕಪಿಲ್‌ ಸಿಬಲ್‌, ತ್ರಿವಳಿ ತಲಾಖ್‌ ಅನ್ನು ಮುಸ್ಲಿಮರಲ್ಲಿ ಶೇ.0.37 ಮಂದಿಯಷ್ಟೇ ಉಪಯೋಗಿಸುತ್ತಾರೆ. ಉಳಿದವರು
ಡೈವೋರ್ಸ್‌ನ ಬೇರೆ ವಿಧಾನಗಳ ಬಳಕೆ ಮಾಡುತ್ತಾರೆ ಎಂಬ ಉತ್ತರ ಕೊಡುತ್ತಾರೆ. 

ಲೆಜಿಸ್ಲೆಚರ್‌
ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ಆಗಿನ ಅಟಾರ್ನಿ ಜನರಲ್‌ ಮುಕುಲ್‌ ರೋಹrಗಿ ಅವರು, ಮುಸ್ಲಿಮರಲ್ಲಿ ಇರುವ ತಲಾಖ್‌ ಪದ್ಧತಿಯನ್ನು ತೆಗೆದು, ಇತರೆ ಧರ್ಮದಲ್ಲಿ ಇರುವಂತೆಯೇ ಕಾನೂನಿನ ಬಲ ನೀಡುವಂತೆ ವಾದಿಸುತ್ತಾರೆ. ಕೋರ್ಟ್‌ ಕೂಡ 1937ರಲ್ಲಿ ರಚನೆಯಾದ
ಶರಿಯಾತ್‌ ಅಪ್ಲಿಕೇಶನ್‌ ಆ್ಯಕ್ಟ್‌ನಲ್ಲಿ ಇದೆಯೇ ಎಂದು ಪರಿಶೀಲಿಸಿ, ಕಡೆಗೆ ಇದೆ ಎಂದು ಒಪ್ಪಿಕೊಳ್ಳುತ್ತದೆ. 

ಖುಲಾ
ಇದು ವಿಚ್ಛೇದನ ನೀಡಲು ಮಹಿಳೆಯರಿಗಷ್ಟೇ ಇರುವ ಅವಕಾಶ. ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಖುಲಾ ಪದ್ಧತಿ ಸಾಕೇ ಎಂಬ ಬಗ್ಗೆಯೂ
ಕೋರ್ಟ್‌ ಪರಿಶೀಲನೆ ನಡೆಸಿದೆ. ಆದರೆ, ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿಯ ವಕೀ ಲರು, “ಖುಲಾ ಇರುವುದು ಕೇವಲ ಕಾಗದ ದಲ್ಲಷ್ಟೆ. ಸಾಮಾಜಿಕ ಒತ್ತಡದಿಂದಾಗಿ ಮಹಿಳೆಯರು ಈ ಪದ್ಧತಿಯನ್ನು ಅನುಸರಿಸಲು ಹೆದರುತ್ತಾರೆ’ ಎಂದರು. ಅದಕ್ಕೆ ಪ್ರತಿಯಾಗಿ ಮಾತನಾಡಿದ ಸಲ್ಮಾನ್‌ ಖುರ್ಷಿದ್‌, “ಖಾಜಿಯನ್ನು ಭೇಟಿಯಾದ ಬೆನ್ನಲ್ಲೇ ವಿಚ್ಛೇದನಕ್ಕೆ ಸೂಕ್ತ ಕಾರಣ ನೀಡಿದರೆ ಆ ಮಹಿಳೆ ಖುಲಾವನ್ನು ಬಳಸಿಕೊಳ್ಳುವ
ಅವಕಾಶವಿದೆ’ ಎಂದರು.

ಮುಸ್ಲಿಂ ವಿವಾಹ ಕಾಯ್ದೆ 1939
ಮುಸ್ಲಿಂ ಮಹಿಳೆಯರಿಗೆ ಕೆಲವು ಕಾರಣಗಳನ್ನು ಹೇಳಿ ತನ್ನ ಪತಿಗೆ ವಿಚ್ಛೇದನ ನೀಡುವ ಹಕ್ಕು ಇದೊಂದೇ ಕಾಯ್ದೆಯಲ್ಲಿ ಇರುವ ಕಾರಣ ಈ ಕಾಯ್ದೆ ಚರ್ಚೆಗೆ ಬಂತು. ಪುರುಷರಿಗಷ್ಟೇ ತತ್‌ಕ್ಷಣ ತಲಾಖ್‌ ನೀಡುವ ಅವಕಾಶವಿದೆ. ಆದರೆ, ಮಹಿಳೆಯನಿಗೆ ಅಂಥ ಅವಕಾಶವಿಲ್ಲ ಎಂದು ವಕೀಲ ಅಮಿತ್‌ ಸಿಂಗ್‌ ವಾದಿಸಿದ್ದರು. ನ್ಯಾಯವಾದಿ ಇಂದಿರಾ ಜೈಸಿಂಗ್‌ ಅವರು ತತ್‌ಕ್ಷಣವೇ ತ್ರಿವಳಿ ತಲಾಖ್‌ ಕ್ರಮ ರದ್ದುಗೊಳಿಸುವಂತೆ ಹೇಳಿದರು.

ವಿಶೇಷ ವಿವಾಹ ಕಾಯ್ದೆ
ಇದು ಎರಡು ಭಿನ್ನ ಧರ್ಮಗಳಿಗೆ ಸೇರಿದವರು ವಿವಾಹವಾಗಲು ಇರುವಂಥ ಕಾಯ್ದೆ. ಈ ಕಾಯ್ದೆಯನ್ನು ಪ್ರಸ್ತಾಪಿಸಿದ್ದ ಕಪಿಲ್‌ ಸಿಬಲ್‌, “ಯಾವ ಮುಸ್ಲಿಂ ಹೆಣ್ಣು ಮಗಳಿಗೆ ತ್ರಿವಳಿ ತಲಾಖ್‌ನ ಹಿಂಸೆಯಿಂದ ಹೊರಬರ ಬೇಕು ಎಂದನಿಸುತ್ತದೋ, ಆಕೆ ಈ ಕಾಯ್ದೆಯನ್ವಯ ವಿವಾಹ ಆಗಬಹುದಲ್ಲವೇ’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಇಂದಿರಾ ಜೈಸಿಂಗ್‌, “ಇದು ಮಹಿಳೆಯರನ್ನು ಧಾರ್ಮಿಕ ವ್ಯವಸ್ಥೆಯಿಂದಲೇ ಹೊರನೂಕುವ ಯತ್ನ. ಇದರ ಬದಲು, ಆಕೆಗೆ ತನ್ನ ಧರ್ಮದಲ್ಲೇ ಇದ್ದು ಕೊಂಡು, ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾದ ಪದ್ಧತಿ ಯಿಂದ ಹೊರಬರುವಂತೆ ಮಾಡಬೇಕಿದೆ,’ ಎಂದಿದ್ದರು.

ಟಾಪ್ ನ್ಯೂಸ್

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.