![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Feb 14, 2020, 6:48 AM IST
ಗುವಾಹಾಟಿ: ಸರಕಾರಿ ಪ್ರಾಯೋಜಕತ್ವದಲ್ಲಿ ಸಂಸ್ಕೃತ ಸಂಸ್ಥೆಗಳನ್ನು ಮತ್ತು ಮದ್ರಸಗಳನ್ನು ನಡೆಸದೇ ಇರಲು ಅಸ್ಸಾಂ ಸರಕಾರ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಒಟ್ಟು 614 ಸಂಸ್ಥೆಗಳನ್ನು ಮುಚ್ಚಲಾಗುತ್ತದೆ. ಧಾರ್ಮಿಕ ಶಿಕ್ಷಣಕ್ಕಾಗಿ ಸರಕಾರಿ ಹಣಬಳಕೆ ಬೇಡ ಮತ್ತು ಧರ್ಮ ಬೋಧನೆ ಸರಕಾರದ ಕೆಲಸವೇ ಅಲ್ಲವೆಂದು ಶಿಕ್ಷಣ ಸಚಿವ ಹಿಮಾಂತ ಶರ್ಮ ಬಿಸ್ವಾ ಹೇಳಿದ್ದಾರೆ. ‘ಇದೊಂದು ಜಾತ್ಯತೀತ ರಾಷ್ಟ್ರ. ಅರೆಬಿಕ್ ಮತ್ತು ಇತರ ಧಾರ್ಮಿಕ ವಿಚಾರ ಗಳನ್ನು ಬೋಧಿಸುವುದು ಸರಕಾ ರದ ಕೆಲಸವಲ್ಲ’ ಎಂದಿದ್ದಾರೆ.
ರಾಜ್ಯ ಸರಕಾರದ ವ್ಯಾಪ್ತಿಯಲ್ಲಿರುವ 614 ಶಿಕ್ಷಣ ಸಂಸ್ಥೆಗಳನ್ನು ಇತರ ಸಾಮಾನ್ಯ ಶಿಕ್ಷಣ ಸಂಸ್ಥೆಗಳಂತೆ ಮಾರ್ಪಾಡು ಮಾಡಲಿದೆ. ಸದ್ಯ ಅಲ್ಲಿ ಕೆಲಸ ಮಾಡುತ್ತಿರುವವರು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ನಿವೃತ್ತಿಯಾಗುವ ವರೆಗೆ ಅವರಿಗೆ ಸಿಗಬೇಕಾದ ವೇತನ ಮತ್ತು ಸವಲತ್ತುಗಳನ್ನು ಸರಕಾರ ನೀಡಲಿದೆ ಎಂದು ಬಿಸ್ವಾ ಹೇಳಿದ್ದಾರೆ.
ಸದ್ಯ ಮದ್ರಸಗಳಿಗೆ ವಾರ್ಷಿಕವಾಗಿ 3-4 ಕೋಟಿ ರೂ., ಸಂಸ್ಕೃತ ಸಂಸ್ಥೆಗಳಿಗೆ 1 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಜಮೀಯತ್ ಉಲೇಮಾ ನೇತೃತ್ವದಲ್ಲಿ ಕಾರ್ಯಾ ಚರಿಸುವ 900 ಮದ್ರಸಗಳು, ಖಾಸಗಿ ವ್ಯಾಪ್ತಿಯಲ್ಲಿ ಇರುವ ಸಂಸ್ಕೃತ ಸಂಸ್ಥೆಗಳು ಮುಂದುವರಿಯಲಿವೆ.
ಈ ಬಗ್ಗೆ ಜಮೀಯತ್ ಉಲೇಮಾದ ಸಂಚಾಲಕ ಮಸೂದ್ ಅಖ್ತರ್ ‘ಸರಕಾರಿ ಮದ್ರಸ ಮುಚ್ಚಿದರೆ ಖಾಸಗಿ ಮದ್ರಸಗಳಿಗೆ ಸಮಸ್ಯೆಯಾಗಲಾರದು. ಒಂದೇ ಒಂದು ರೂಪಾಯಿಯನ್ನು ನಾವು ಸರಕಾರದಿಂದ ಪಡೆಯುತ್ತಿಲ್ಲ’ ಎಂದಿದ್ದಾರೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.