Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
ನ್ಯಾಯಪೀಠದಿಂದ 7:2 ಬಹುಮತದ ತೀರ್ಪು
Team Udayavani, Nov 6, 2024, 7:11 AM IST
ಹೊಸದಿಲ್ಲಿ: ಸಮುದಾಯದ ಅಭಿವೃದ್ಧಿಗಾಗಿ ಖಾಸಗಿ ಮಾಲಕತ್ವದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಅಧಿಕಾರ ಸರಕಾರಗಳಿಗೆ ಇಲ್ಲ ಎಂದು ಮಂಗಳವಾರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆದರೆ ನಿರ್ದಿಷ್ಟ ಆಸ್ತಿಯ ಮಹತ್ವ ಹಾಗೂ ಅದನ್ನು ವಶಪಡಿಸಿಕೊಂಡಿದ್ದರಿಂದ ಸಾರ್ವಜನಿಕರಿಗೆ ಒಳಿತಾಗಲಿದೆ ಎಂದು ಕಂಡುಬಂದಲ್ಲಿ ಮಾತ್ರ ಸರಕಾರ ಅಂಥ ಆಸ್ತಿ ಯನ್ನು ವಶಪಡಿಸಿಕೊಳ್ಳಬಹುದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ 9 ಸದಸ್ಯರ ನ್ಯಾಯಪೀಠ 7:2ರ ಅನುಪಾತದಲ್ಲಿ ತೀರ್ಪು ನೀಡಿದೆ.
ಮಹಾರಾಷ್ಟ್ರದಲ್ಲಿ ಅಪಾರ್ಟ್‌ಮೆಂಟ್‌ಗಳ ಸಹಿತ ಅವಧಿ ಮೀರಿದ ಕಟ್ಟಡಗಳನ್ನು ವಶಪಡಿಸಿ ಕೆಡವಿ ಹಾಕುವುದರ ವಿರುದ್ಧ ಮುಂಬಯಿ ಪ್ರಾಪರ್ಟಿ ಓನರ್ಸ್ ಅಸೋಸಿಯೇಶನ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅದರ ಜತೆಗೆ ಇದೇ ರೀತಿಯ ಒಟ್ಟು 16 ಅರ್ಜಿಗಳು ಸಲ್ಲಿಕೆಯಾಗಿದ್ದವು.
ಈ ಅರ್ಜಿಗಳ ವಿಚಾರಣೆ ನಡೆಸಿ ಮಂಗಳವಾರ ತೀರ್ಪು ಪ್ರಕಟಿಸಿರುವ ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ಖಾಸಗಿ ಆಸ್ತಿಯನ್ನು ಸರಕಾರ ವಶಪಡಿಸಿ ಸಾರ್ವಜನಿಕರಿಗಾಗಿ ಬಳಕೆ ಮಾಡುವ ದಿನಗಳಿಂದ ದೇಶ ಬಹಳಷ್ಟು ದೂರ ಸಾಗಿ ಬಂದಿದೆ. ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಬಂಡವಾಳ ಹೂಡಿಕೆ ಮಾಡಿ ಅಭಿ ವೃದ್ಧಿ ಮಾಡಲು ಈಗ ಸಾಕಷ್ಟು ಅವಕಾಶಗಳು ಇವೆ. ಹೀಗಾಗಿ ಈ ಹಿಂದೆ ಸಮಾಜವಾದಿ ಸಿದ್ಧಾಂತದ ಅಡಿ ನೀಡಲಾಗಿದ್ದ ತೀರ್ಪನ್ನು ರದ್ದು ಮಾಡುತ್ತಿದ್ದೇವೆ ಎಂದಿದೆ.
ಈ ಮೂಲಕ ಸಂವಿಧಾನದ 39 (ಬಿ) ವಿಧಿಯಡಿ ಸರಕಾರವು ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿ ಸಾರ್ವಜನಿಕರ ಹಿತಕ್ಕಾಗಿ ವಿತರಿಸಬಹುದು ಎಂದು 1977ರಲ್ಲಿ ಕರ್ನಾಟಕ ಸರಕಾರ ಮತ್ತು ರಂಗನಾಥ ರೆಡ್ಡಿ ಪ್ರಕರಣದಲ್ಲಿ ನ್ಯಾ| ಕೃಷ್ಣ ಅಯ್ಯರ್ ನೇತೃತ್ವದ ನ್ಯಾಯಪೀಠ ನೀಡಿದ್ದ ತೀರ್ಪು ರದ್ದಾದಂತಾಗಿದೆ.
ಆದರೆ ಕೆಲವು ಅನಿವಾರ್ಯ ಸಂದರ್ಭಗಳಲ್ಲಿ, ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಖಾಸಗಿ ಸೊತ್ತುಗಳನ್ನು ವಶಪಡಿಸಿಕೊಳ್ಳಲು ಸರಕಾರಕ್ಕೆ ಅವ ಕಾಶ ಇದೆ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.
ನ್ಯಾ| ನಾಗರತ್ನಾ ಆಕ್ಷೇಪ
ನ್ಯಾಯಪೀಠದಲ್ಲಿದ್ದ ನ್ಯಾ| ಬಿ.ವಿ. ನಾಗರತ್ನಾ ಅವರು ನ್ಯಾ| ಕೃಷ್ಣ ಅಯ್ಯರ್ ನೀಡಿದ್ದ 1977ರ ತೀರ್ಪಿನ ಬಗ್ಗೆ ಈಗ ಸಿಜೆಐ ಮಾಡಿರುವ ವ್ಯಾಖ್ಯಾನ ಆಕ್ಷೇಪಾರ್ಹ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಖಾಸಗಿ ಅಥವಾ ಸರಕಾರದ ಆಸ್ತಿಯೇ ಆಗಿದ್ದರೂ ಅದು ಎಲ್ಲರ ಒಳಿತಿಗಾಗಿಯೇ ಇರ ಬೇಕು. ಆರ್ಥಿಕ ನೀತಿ ರೂಪಿಸುವುದು ಕೋರ್ಟ್‌ಗಳ ಕೆಲಸವಲ್ಲ ಎಂದು ಹೇಳಿದ್ದಾರೆ. ಇದೇ ವೇಳೆಸಂಪೂರ್ಣ ವ್ಯತಿರಿಕ್ತ ತೀರ್ಪು ನೀಡಿರುವ ನ್ಯಾ| ಸುಧಾಂಶು ಧುಲಿಯಾ, ಮುಖ್ಯ ನ್ಯಾಯಮೂರ್ತಿ ಗಳು ವ್ಯಕ್ತಪಡಿಸಿದ ಅಭಿಪ್ರಾಯ ಕಠೊರವಾಗಿವೆ. ಅದನ್ನು ವ್ಯಕ್ತಪಡಿಸುವ ಅಗತ್ಯ ಇರಲಿಲ್ಲ ಎಂದಿದ್ದಾರೆ.
ಏನಿದು ರಂಗನಾಥ ರೆಡ್ಡಿ ಪ್ರಕರಣ?
1976ರಲ್ಲಿ ಕರ್ನಾಟಕದ ರಸ್ತೆಗಳಲ್ಲಿ ಸಂಚರಿಸು ತ್ತಿದ್ದ ಖಾಸಗಿ ಬಸ್‌ಗಳನ್ನು ರಾಜ್ಯ ಸರಕಾರ ಸ್ವಾಧೀನಪಡಿಸಿಕೊಂಡು ರಾಷ್ಟ್ರೀಕರಣಗೊಳಿಸಿತ್ತು. ಅದನ್ನು ಪ್ರಶ್ನಿಸಿ ರಂಗನಾಥ ರೆಡ್ಡಿ ಎಂಬವರು 1977ರಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ರಾಜ್ಯ ಸರಕಾರ ಕೈಗೊಂಡಿದ್ದ ತೀರ್ಮಾನದ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿದ್ದರು. ಬಸ್ ಕಂಪೆನಿಗಳನ್ನು ವಶಪಡಿಸಿಕೊಳ್ಳುವ ಮೂಲಕ ರಾಜ್ಯ ಸರಕಾರವು ಸಂವಿಧಾನದ ಮೂಲಭೂತ ಹಕ್ಕಿನಂತೆ ಯಾವುದೇ ಉದ್ಯೋಗ ಕೈಗೊಳ್ಳುವ ಹಕ್ಕನ್ನು ಕಸಿದುಕೊಂಡಿದೆ ಎಂದು ಅರ್ಜಿಯಲ್ಲಿ ವಾದಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ವೇಳೆ 7 ನ್ಯಾಯಮೂರ್ತಿಗಳಿದ್ದ ನ್ಯಾಯಪೀಠವು 4:3 ಅನುಪಾತದಲ್ಲಿ ತೀರ್ಪು ನೀಡಿತ್ತು. ಈ ಪೈಕಿ ನ್ಯಾ| ಕೃಷ್ಣ ಅಯ್ಯರ್ ಅವರು ರಾಜ್ಯ ಸರಕಾರವು ಜನರ ಅಭಿವೃದ್ಧಿಗಾಗಿ ಯಾವುದೇ ಆಸ್ತಿಯನ್ನು ವಶಪಡಿಸಿಕೊಳ್ಳಬಹುದು ಎಂದಿದ್ದರು.
ಏನಿದು ಪ್ರಕರಣ?
– ಬಾಳಿಕೆ ಅವಧಿ ಮೀರಿದ ಕಟ್ಟಡಗಳನ್ನು ವಶಪಡಿಸಿಕೊಳ್ಳುವ ಮಹಾರಾಷ್ಟ್ರ ಸರಕಾರದ ಕ್ರಮದ ವಿರುದ್ಧ ಆಕ್ಷೇಪ
– ಆಸ್ತಿ ಹೊಂದುವ ಹಕ್ಕುಗಳ ಉಲ್ಲಂಘನೆ ಎಂದು ಮುಂಬಯಿ ಆಸ್ತಿ ಮಾಲಕರ ಸಂಘದ ವಾದ
– ಕೋರ್ಟ್‌ಗಳ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮುಂಬಯಿ ಆಸ್ತಿ ಮಾಲಕರ ಸಂಘದಿಂದ ಅರ್ಜಿ
– ಸುದೀರ್ಘ 32 ವರ್ಷಗಳ ವಿಚಾರಣೆ ಮುಗಿದು ಈಗ ಅಂತಿಮ ತೀರ್ಪು
ಸುಪ್ರೀಂ ಕೋರ್ಟ್ ಹೇಳಿದ್ದೇನು?
– ಸಾರ್ವಜನಿಕರ ಹಿತಕ್ಕಾಗಿ ಖಾಸಗಿಸೊತ್ತು ವಶಪಡಿಸಿಕೊಳ್ಳುವ ಅಧಿಕಾರ ಸರಕಾರಕ್ಕೆ ಇಲ್ಲ
– ಸಮಾಜವಾದಿ ಸಿದ್ಧಾಂತದ ಅರ್ಥ ವ್ಯವಸ್ಥೆಯಿಂದ ನಮ್ಮು ದೇಶ ಬಹುದೂರ ಸಾಗಿ ಬಂದಿದೆ
– ಜನರ ಅಭಿವೃದ್ಧಿಗೆ ಸರಕಾರ, ಖಾಸಗಿ ಸಂಸ್ಥೆಗಳು ಜತೆಗೂಡಿ ಕೆಲಸ ಮಾಡಬಹುದು
– ಎಲ್ಲ ಖಾಸಗಿ ಆಸ್ತಿಗಳನ್ನು ಸಮುದಾಯದ ಸಂಪನ್ಮೂಲ ಎಂದು ಪರಿಗಣಿಸಲು ಆಗದು
– ಈ ನಿಟ್ಟಿನಲ್ಲಿ ಕೃಷ್ಣ ಅಯ್ಯರ್ ತೀರ್ಪು ಸಹಿತ ಹಿಂದಿನ ಎಲ್ಲ ತೀರ್ಪುಗಳೂ ರದ್ದು
ಕರ್ನಾಟಕ ಮೂಲದ ಪ್ರಕರಣ ರದ್ದು
– 1977ರಲ್ಲಿ ಖಾಸಗಿ ಬಸ್‌ಗಳನ್ನು ವಶಪಡಿಸಿಕೊಂಡು ರಾಷ್ಟ್ರೀಕರಣಗೊಳಿಸಿದ್ದ ಕರ್ನಾಟಕ ರಾಜ್ಯ ಸರಕಾರ
– ಸರಕಾರದ ಕ್ರಮ ಪ್ರಶ್ನಿಸಿ ರಂಗನಾಥ ರೆಡ್ಡಿ ಎಂಬವರಿಂದ ಸುಪ್ರೀಂನಲ್ಲಿ ದಾವೆ
– ಯಾವುದೇ ಉದ್ಯೋಗ ಕೈಗೊಳ್ಳುವ ಹಕ್ಕನ್ನು ಕಸಿದುಕೊಂಡಿದೆ ಎಂಬ ವಾದ ಮಂಡನೆ
– ಜನರ ಒಳಿತಿಗಾಗಿ ಖಾಸಗಿ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು ಸರಿ ಎಂದು ತೀರ್ಪು ಕೊಟ್ಟಿದ್ದ ನ್ಯಾ| ಕೃಷ್ಣ ಅಯ್ಯರ್
– ಆಗ 7 ನ್ಯಾಯಮೂರ್ತಿಗಳಿದ್ದ ನ್ಯಾಯ ಪೀಠದಿಂದ 4:3 ಅನುಪಾತದ ತೀರ್ಪು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.