ನಕ್ಸಲ್ ನೆಲದಲ್ಲಿ ಬಾಹುಬಲಿ
Team Udayavani, Oct 1, 2018, 8:55 AM IST
ರಾಯ್ಪುರ: ನಕ್ಸಲರ ಆಡಂಬೊಲವಾಗಿರುವ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಅಭುಜ್ಮಾದ್ ಪ್ರಾಂತ್ಯದಲ್ಲಿನ ಜನರನ್ನು ನಕ್ಸಲರ ಪ್ರಭಾವದಿಂದ ತಪ್ಪಿಸಿ ಅವರನ್ನು ಬಾಹ್ಯ ಪ್ರಪಂಚದ ಜತೆಗೆ ನಂಟು ಕಲ್ಪಿಸುವ ಉದ್ದೇಶದಿಂದ ಈ ಭಾಗದಲ್ಲಿ ಮಿನಿ ಥಿಯೇಟರ್‌ಗಳನ್ನು ನಿರ್ಮಿಸುವ ಕಾರ್ಯಕ್ಕೆ ಛತ್ತೀಸ್‌ಗಢ ಪೊಲೀಸರು ಕೈಹಾಕಿದ್ದಾರೆ. ಇದರನ್ವಯ, ಈ ಪ್ರಾಂತ್ಯದ ಬಾಸಿಂಗ್ ಎಂಬ ಹಳ್ಳಿಯಲ್ಲಿ ಮೊದಲ ಥಿಯೇಟರ್ ನಿರ್ಮಾಣವಾಗಿದ್ದು, ಸದ್ಯದಲ್ಲೇ ನಕ್ಸಲ್ ಬಾಧಿತ ಎಲ್ಲಾ ಪ್ರಾಂತ್ಯಗಳಲ್ಲೂ ಇಂಥ ಮಿನಿ ಥಿಯೇಟರ್‌ಗಳನ್ನು ನಿರ್ಮಿಸಲಾಗುತ್ತದೆ. ಎಲ್ಲರಿಗೂ ಉಚಿತ ಪ್ರವೇಶವಿದ್ದು, ಸಿನಿಮಾ, ಕೆಲ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲು ಯೋಜಿಸಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ.
ಬಾಸಿಂಗ್ ಹಳ್ಳಿಯಲ್ಲಿ ಗುರುವಾರ ಉದ್ಘಾಟನೆಗೊಂಡ ಮಿನಿ ಥಿಯೇಟರ್‌ಗೆ ಸ್ಥಳೀಯ ಗೊಂಡಿ ಭಾಷೆಯಲ್ಲಿ ‘ಬಾಸಿಂಗ್ ಸಿಲೇಮ’ (ಬಾಸಿಂಗ್ ಸಿನಿಮಾ) ಎಂದು ಹೆಸರಿಡಲಾಗಿದ್ದು, ಮೊದಲ ಚಿತ್ರವಾಗಿ ‘ಬಾಹುಬಲಿ’ ಪ್ರದರ್ಶನಗೊಂಡಿದೆ. ಈ ಬಗ್ಗೆ ವಿವರಣೆ ನೀಡಿರುವ ನಾರಾಯಣಪುರ ಜಿಲ್ಲೆಯ ಎಸ್‌ಪಿ ಜಿತೇಂದ್ರ ಶುಕ್ಲಾ, ‘ವಾರಕ್ಕೊಮ್ಮೆ ಸಂತೆಗಾಗಿ ಈ ಜನ ಒಂದೆಡೆ ಸೇರುವುದು ಬಿಟ್ಟರೆ ಮಿಕ್ಕ ಯಾವ ಸಂದರ್ಭಗಳಲ್ಲೂ ಸೇರುವುದಿಲ್ಲ. ಇವರನ್ನು ಆಗಾಗ ಒಂದೆಡೆ ಸೇರಿಸಿ, ಕ್ರಾಂತಿಯ ಹಾದಿ, ನಕ್ಸಲರನ್ನು ಹೊರತುಪಡಿಸಿದ ಮತ್ತೂಂದು ಜಗತ್ತು ಇದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್ ವಿರುದ್ಧ ವರ್ಮಾ
New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ
Thane; ಕ್ರಿಮಿನಲ್ ಕೇಸ್ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ
ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್ ಚಿದಂಬರಂ ವಿಧಿವಶ: ಪ್ರಧಾನಿ ಮೋದಿ ಸಂತಾಪ
Tamilnadu: ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ- ಆರು ಮಂದಿ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.