ಉತ್ತರ ಪ್ರದೇಶದಲ್ಲಿ 6,400 ಆಮೆಗಳು ವಶ; ಕಿಂಗ್‌ಪಿನ್ ಅರೆಸ್ಟ್
Team Udayavani, Jan 11, 2017, 4:17 PM IST
ಲಕ್ನೋ : ದೇಶದಲ್ಲೇ ಅತೀ ದೊಡ್ಡ ವಶೀಕರಣ ಪ್ರಕರಣವೊಂದರಲ್ಲಿ ಉತ್ತರ ಪ್ರದೇಶ ಎಸ್‌ಟಿಎಫ್ ಸಿಬಂದಿಗಳು ಅಮೇಠಿಯಲ್ಲಿ 6,400 ಆಮೆಗಳನ್ನು ವಶಪಡಿಸಿಕೊಂಡು ಇವುಗಳ ಅಂತಾರಾಜ್ಯ ಕಳ್ಳಸಾಗಣೆ ಜಾಲದ ಕಿಂಗ್‌ಪಿನ್ ಖದೀಮನ್ನು ಬಂಧಿಸಿದ್ದಾರೆ.
ವಶಪಡಿಸಿಕೊಳ್ಳಲಾದ ಆಮೆಗಳು 440 ಕ್ವಿಂಟಲ್ ತೂಕದ್ದಾಗಿವೆ. ಇವುಗಳನ್ನು ಗೋಣಿ ಚೀಲದಲ್ಲಿ ತುರುಕಿ ತುಂಬಲಾಗಿತ್ತು. ಗೌರೀಗಂಜ್ ಪಟ್ಟಣದಲ್ಲಿನ ಆರೋಪಿಯ ಮನೆಯಂಗಳದ ತುಂಬೆಲ್ಲ ಹಲವು ಆಮೆಗಳು ಹರಿದಾಡುತ್ತಿದ್ದವು ಎಂದು ಎಸ್‌ಟಿಎಫ್ ವಕ್ತಾರರೋರ್ವರು ತಿಳಿಸಿದ್ದಾರೆ.
ಗ್ಯಾಂಗ್‌ಪಿನ್ ಖದೀಮನನ್ನು ರಾಜ್ ಬಹಾದ್ದೂರ್ ಸಿಂಗ್ ಎಂದು ಗುರುತಿಸಲಾಗಿದ್ದು ಆತನೀಗ ಪೊಲೀಸರ ವಶದಲ್ಲಿದ್ದಾನೆ. ಈತನ ಬಳಿ ಇದ್ದ ಮೆದು ಕೋಶದ ಭಾರತೀಯ ಆಮೆಗಳನ್ನು ಕೂಡ ಎಸ್‌ಟಿಎಫ್ ವಶಪಡಿಸಿಕೊಂಡಿದೆ.
ಆಮೆ ಕಳ್ಳಸಾಗಣೆ ಜಾಲದಲ್ಲಿ ಶಾಮೀಲಾಗಿರುವ ಉತ್ತರ ಪ್ರದೇಶ, ಪಶ್ಚಿಮ ಬಂಗಾಲ ಮತ್ತು ಒಡಿಶಾದಲ್ಲಿನ ಖದೀಮರ ಹೆಸರುಗಳನ್ನು ಸಿಂಗ್ ತನಿಖೆಯಲ್ಲಿ ಬಹಿರಂಗಪಡಿಸಿದ್ದಾನೆ. ಈ ಆಮೆಗಳನ್ನು ಬಾಂಗ್ಲಾದೇಶ, ಮ್ಯಾನ್‌ಮಾರ್, ಚೀನ, ಥಾಯ್ಲಂಡ್, ಹಾಂಕಾಂಗ್ ಮತ್ತು ಇತರ ಆಗ್ನೇಯ ದೇಶಗಳಿಗೆ ಕಳ್ಳಸಾಗಣೆ ಮಾಡಲು ಉದ್ದೇಶಿಸಲಾಗಿತ್ತು ಎಂದು ಸಿಂಗ್ ಬಾಯಿ ಬಿಟ್ಟಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್ ವಿರುದ್ಧ ವರ್ಮಾ
New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ
Thane; ಕ್ರಿಮಿನಲ್ ಕೇಸ್ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ
ಹಿರಿಯ ಪರಮಾಣು ವಿಜ್ಞಾನಿ ರಾಜಗೋಪಾಲ್ ಚಿದಂಬರಂ ವಿಧಿವಶ: ಪ್ರಧಾನಿ ಮೋದಿ ಸಂತಾಪ
Tamilnadu: ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ- ಆರು ಮಂದಿ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.