ಮೋದಿ ಸರಕಾರದಲ್ಲಿ ಸಾಲದ ಮೊತ್ತ ಶೇ. 49ರಷ್ಟು ಹೆಚ್ಚಳ
Team Udayavani, Jan 20, 2019, 12:30 AM IST
ಹೊಸದಿಲ್ಲಿ: ಕಳೆದ ನಾಲ್ಕೂವರೆ ವರ್ಷಗಳಲ್ಲಿ ದೇಶದ ಒಟ್ಟು ಸಾಲದ ಪ್ರಮಾಣ ಶೇ. 49ರಷ್ಟು ಏರಿಕೆಯಾಗಿದ್ದು, 82 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿದೆ. ಸರಕಾರಿ ಸಾಲದ ಬಗೆಗಿನ ಸ್ಥಿತಿಗತಿ ವರದಿಯಲ್ಲಿ ಈ ದತ್ತಾಂಶ ನೀಡಲಾಗಿದೆ.
2018ರ ಸೆಪ್ಟಂಬರ್‌ವರೆಗಿನ ಒಟ್ಟು ಸಾಲದ ಪ್ರಮಾಣ 82,03,253 ಕೋಟಿ ರೂ. ಆಗಿದೆ. ಜೂನ್ 2014ರ ವರೆಗೆ ಕೇಂದ್ರ ಸರಕಾರದ ಒಟ್ಟು ಸಾಲದ ಪ್ರಮಾಣವು 54,90,763 ಕೋಟಿ ರೂ. ಆಗಿತ್ತು.
ಸಾರ್ವಜನಿಕ ಸಾಲದ ವಿಭಾಗದಲ್ಲಿ ಸಾಲದ ಪ್ರಮಾಣ ಶೇ. 51.7 ಆಗಿದ್ದು, ಈ ನಾಲ್ಕೂವರೆ ವರ್ಷಗಳಲ್ಲಿ 48 ಲಕ್ಷ ಕೋಟಿ ರೂ.ಗಳಿಂದ 73 ಲಕ್ಷ ಕೋಟಿ ರೂ. ಆಗಿದೆ. ಇದೇ ರೀತಿ ಮಾರುಕಟ್ಟೆ ಸಾಲಗಳ ಮೇಲಿನ ಅವಲಂಬನೆಯೂ ಇದೇ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಶೇ. 47.5 ಏರಿದೆ. ಈ ಅವಧಿಯಲ್ಲಿ ಇದು 52 ಲಕ್ಷ ಕೋಟಿ ರೂ. ಆಗಿದೆ. ಆದರೆ ಚಿನ್ನದ ಬಾಂಡ್‌ಗಳ ಮೂಲಕ ಸಂಗ್ರಹಿಸಿದ ಸಾಲದ ಪ್ರಮಾಣವು 2014ರ ಜೂನ್ ವೇಳೆಗೆ ಶೂನ್ಯವಾಗಿದ್ದು, ಈಗ ಇದು 9,089 ಕೋಟಿ ರೂ. ಆಗಿದೆ. 2010-11ರಿಂದಲೂ ಕೇಂದ್ರ ವಿತ್ತ ಸಚಿವಾಲಯವು ಸರಕಾರದ ಸಾಲದ ಪ್ರಮಾಣದ ಕುರಿತು ಸ್ಥಿತಿಗತಿ ವರದಿಯನ್ನು ಸಲ್ಲಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Amparu: ಬೈಕ್ ಸ್ಕಿಡ್; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು
KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್ ರಾಜ್ ಮೌರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.