ಈ ಬಾರಿಯೂ ನಮೋಗೆ ಜಯಕಾರ
ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎನ್‌ಡಿಎಗೆ ಅಧಿಕಾರ
Team Udayavani, May 20, 2019, 6:00 AM IST
ಹೊಸದಿಲ್ಲಿ: ‘ದೇಶದ ಮತದಾರ ಪ್ರಧಾನಿ ನರೇಂದ್ರ ಮೋದಿ ಅವರ ಕೈಬಿಡಲು ತಯಾರಿಲ್ಲ.
– ಇದು ಹೆಚ್ಚು ಕಡಿಮೆ 14 ವಾಹಿನಿಗಳು ನಡೆಸಿದ ಮತಗಟ್ಟೆ ಸಮೀಕ್ಷೆಯ ಫಲಿತಾಂಶದ ಸಾರಾಂಶ. ಬಹುತೇಕ ಎಲ್ಲ ಸಮೀಕ್ಷೆಗಳ ಪ್ರಕಾರ, ಕೇಂದ್ರದಲ್ಲಿ ಮತ್ತೆ ಮೋದಿ ಅವರ ಸರಕಾರವೇ ಸ್ಥಾಪಿತಗೊಳ್ಳಲಿದೆ. ಕಳೆದ ಬಾರಿಯಂತೆಯೇ ಸುಮಾರು 300 ಸೀಟುಗಳನ್ನು ಎನ್‌ಡಿಎ ಗೆಲ್ಲಲಿದೆ. ಕರ್ನಾಟಕದಲ್ಲೂ ಬಿಜೆಪಿ ತನ್ನ ಕರಾಮತ್ತು ತೋರಿಸಲಿದ್ದು, ಹೆಚ್ಚು ಕಡಿಮೆ 20 ಸೀಟುಗಳಲ್ಲಿ ಜಯ ಸಾಧಿಸಲಿದೆ ಎಂದು ಈ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಈ ಎಲ್ಲ ಸಮೀಕ್ಷೆಗಳು ಹೇಳುವಂತೆ, ಉತ್ತರ ಭಾರತದಲ್ಲಿ ಮೋದಿ ಹವಾ ಕಿಂಚಿತ್ತೂ ಕಡಿಮೆಯಾಗಿಲ್ಲ. ಜತೆಗೆ ಒಡಿಶಾ, ಪಶ್ಚಿಮ ಬಂಗಾಲದಲ್ಲಿ ಬಿಜೆಪಿಗೆ ಕೆಲವು ಸೀಟುಗಳು ಲಾಭಕರವಾಗಿ ಸಿಗಲಿವೆ. ಆದರೆ ಉತ್ತರ ಪ್ರದೇಶದಲ್ಲಿ ಎನ್‌ಡಿಎ ಕೆಲವು ಸ್ಥಾನಗಳನ್ನು ಕಳೆದುಕೊಳ್ಳಲಿದ್ದರೂ ಈ ಕೊರತೆ ಈಶಾನ್ಯ ರಾಜ್ಯಗಳಲ್ಲಿ ತುಂಬಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಈ ನಡುವೆ, ನ್ಯೂಸ್ ಎಕ್ಸ್-ನೇತಾ ಸಮೀಕ್ಷೆ ಮಾತ್ರ ಎನ್‌ಡಿಎಗೆ ಹಿನ್ನಡೆಯಾಗಲಿದೆ ಎಂದಿದೆ. ಇದರ ಪ್ರಕಾರ, 242 ಸ್ಥಾನಗಳು ಸಿಗುವ ಸಂಭವವಿದೆ. ಇದನ್ನು ಬಿಟ್ಟರೆ ಉಳಿದೆಲ್ಲ ಸಮೀಕ್ಷೆಗಳು ಸರಳ ಬಹುಮತಕ್ಕೆ ಬೇಕಾದ 272 ಸ್ಥಾನಗಳನ್ನು ಎನ್‌ಡಿಎ ಸಲೀಸಾಗಿ ದಾಟಲಿದೆ ಎಂದೇ ತಿಳಿಸಿವೆ.
ಒಡಿಶಾದಲ್ಲಿ ಲಾಭ
ಒಡಿಶಾದಲ್ಲೂ ಬಿಜೆಪಿ ತನ್ನ ಸ್ಥಾನ ಹೆಚ್ಚು ಮಾಡಿಕೊಳ್ಳ ಲಿದೆ. ಇಲ್ಲೂ ಬಿಜೆಡಿ ಮತ್ತು ಬಿಜೆಪಿ ನಡುವೆ ನೇರಾ ನೇರ ಸ್ಪರ್ಧೆ ಇದೆ. ಇಂಡಿಯಾ ಟುಡೆ-ಆ್ಯಕ್ಸಿಸ್ ಅಂತೂ ಬಿಜೆ ಡಿಗೆ ಶೂನ್ಯ ಸೀಟು ನೀಡಿದೆ. ಈ ಮಧ್ಯೆ ದಿಲ್ಲಿ, ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ದಕ್ಷಿಣದಲ್ಲಿ ಬಿಜೆಪಿಗೆ ಹಿನ್ನಡೆ
ಕರ್ನಾಟಕ ಹೊರತುಪಡಿಸಿ, ದಕ್ಷಿಣ ಭಾರತದಲ್ಲಿ ಮತದಾರ ಬಿಜೆಪಿಯತ್ತ ಕೃಪೆ ತೋರಿಲ್ಲ. ಆದರೆ ಕರ್ನಾಟದಲ್ಲಿ ಹಿಂದಿನ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನ ಸಿಗಲಿವೆ ಎಂದು ಭವಿಷ್ಯ ನುಡಿದಿವೆ.
ಇಂಡಿಯಾ ಟುಡೆ-ಆ್ಯಕ್ಸಿಸ್, ನ್ಯೂಸ್ 24-ಚಾಣಕ್ಯ ಪ್ರಕಾರ ಬಿಜೆಪಿ 20ರಿಂದ 26ರ ವರೆಗೂ ಗೆಲ್ಲಬಹುದು ಎಂದಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕೂಟ ಇಲ್ಲಿ ನಷ್ಟ ಅನುಭ ವಿಸಲಿವೆ ಎಂದಿವೆ. ಇನ್ನು ಕೇರಳ,ಆಂಧ್ರ,ತೆಲಂಗಾಣದಲ್ಲಿ ಬಿಜೆಪಿ ತಲಾ ಒಂದು ಸ್ಥಾನ ಗೆಲ್ಲಬಹುದು. ಕೇರಳದಲ್ಲಿ ಶಬ ರಿಮಲೆ ವಿವಾದ ಬಿಜೆಪಿ ಕೈಹಿಡಿದಿಲ್ಲ ಎಂದು ವಿಶ್ಲೇಷಿಸಲಾ ಗಿದೆ. ಆದರೆ ತೆಲಂಗಾಣದಲ್ಲಿ ಟಿಆರ್‌ಎಸ್‌ಗೆ, ಆಂಧ್ರ ದಲ್ಲಿ ವೈಎಸ್‌ಆರ್‌ಪಿಗೆ ಗೆಲುವು ದಕ್ಕಲಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೇಲುಗೈ ಸಾಧಿಸಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಈಶಾನ್ಯ ರಾಜ್ಯಗಳಲ್ಲೂ ಮೇಲುಗೈ
ಈಶಾನ್ಯ ರಾಜ್ಯದ 25 ಸ್ಥಾನಗಳಲ್ಲಿ ಬಹುತೇಕ ಸ್ಥಾನಗ ಳನ್ನು ಎನ್ ಡಿಎ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಅದರಲ್ಲೂ ಅಸ್ಸಾಂನಲ್ಲಿ ಹೆಚ್ಚಿನ ಲಾಭವಾಗ ಲಿದೆ.ಮಣಿಪುರ, ಸಿಕ್ಕಿಂ,ತ್ರಿಪುರ,ನಾಗಾಲ್ಯಾಂಡ್‌ಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿಕೊಳ್ಳಲಿದೆ.
ಕಾಂಗ್ರೆಸ್-ಯುಪಿಎಗೆ ಹಿನ್ನಡೆ
ಬಡವರಿಗೆ ವಾರ್ಷಿಕ 72 ಸಾವಿರ ರೂ. ನೀಡುವ “ನ್ಯಾಯ್’ಯೋಜನೆ ಘೋಷಿಸಿದ್ದ ಕಾಂಗ್ರೆ ಸ್‌ಗೆ ಹೆಚ್ಚಿನ ಲಾಭವಾಗಿಲ್ಲ ಎಂದು ಎಲ್ಲ ಸಮೀಕ್ಷೆಗಳು ಹೇಳಿವೆ. ಆದರೆ ಹಿಂದಿ ಬೆಲ್ಟ್ ನಲ್ಲಿ ಕೆಲ ವೊಂದು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಪಂಜಾಬ್‌ನಲ್ಲಿ ಅಮ ರಿಂದರ್ ಸಿಂಗ್ ಅವರ ವರ್ಚಸ್ಸು ಕೆಲಸ ಮಾಡಲಿದೆ. ಇಲ್ಲೂ ಎನ್‌ಡಿಎಗೆ ಹಿನ್ನಡೆಯಾಗಲಿದೆ.
-ನ್ಯೂಸ್ ಎಕ್ಸ್-ನೇತಾ ನಡೆಸಿದ ಸಮೀಕ್ಷೆಯಲ್ಲಿ ಮಾತ್ರ ಎನ್‌ಡಿಎಗೆ ಹಿನ್ನಡೆ
-ಇಂಡಿಯಾ ಟುಡೆ-ಆ್ಯಕ್ಸಿಸ್‌ನಲ್ಲಿ ಬಿಜೆಪಿಗೆ 339-365 ಸ್ಥಾನ
-ಮೂರಂಕಿ ತಲುಪುವಲ್ಲಿ ವಿಫಲವಾಗಲಿರುವ ಕಾಂಗ್ರೆಸ್, ಯುಪಿಎಗೆ 150ಕ್ಕಿಂತ ಕಡಿಮೆ
-ಆಂಧ್ರದಲ್ಲಿ ನಾಯ್ಡುಗೆ ಮುಖಭಂಗ, ಟಿಎಂಸಿಗೆ ಬಿಜೆಪಿ ಭರ್ಜರಿ ಸ್ಪರ್ಧೆ
– ಹಿಂದಿ ಹಾರ್ಟ್‌ಲ್ಯಾಂಡ್‌ನಲ್ಲಿ ಬಿಜೆಪಿಯ ಪ್ರಾಬಲ್ಯ ಮುಂದುವರಿಕೆ
-ಮಹಾರಾಷ್ಟ್ರದಲ್ಲೂ ಬಿಜೆಪಿ ಮೈತ್ರಿಕೂಟಕ್ಕೇ ಗೆಲುವು
ರಾಜ್ಯದಲ್ಲಿ ಭಾರೀ ಮುನ್ನಡೆ
ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೇರಿ ಒಟ್ಟಾಗಿ ಚುನಾವಣೆ ಎದುರಿಸಿದ್ದರೂ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಹಳೇ ಮೈಸೂರು ಭಾಗದಲ್ಲೂ ಬಿಜೆಪಿ ಬಲ ವೃದ್ಧಿಸಿಕೊಂಡಿದೆ ಎಂದು ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ.
ಎಲ್ಲ ಸಮೀಕ್ಷೆಗಳನ್ನು ಸೇರಿಸಿ ಪೋಲ್ ಆಫ್ ಪೋಲ್ ಮಾಡುವುದಾದರೆ, ಬಿಜೆಪಿಗೆ 20, ಕಾಂಗ್ರೆಸ್-ಜೆಡಿಎಸ್‌ಗೆ 7 ಮತ್ತು ಇತರರಿಗೆ 1 ಸ್ಥಾನ ಸಿಗುವ ಸಂಭವವಿದೆ. ರಿಪಬ್ಲಿಕ್-ಸಿ ವೋಟರ್ ಪ್ರಕಾರ ಬಿಜೆಪಿಗೆ 18, ಕಾಂಗ್ರೆಸ್-ಜೆಡಿಎಸ್‌ಗೆ 9, ಇತರರಿಗೆ 1 ಸ್ಥಾನ ಸಿಗಲಿದೆ. ಟೈಮ್ಸ್ ನೌ-ವಿಎಂಆರ್ ಪ್ರಕಾರ ಬಿಜೆಪಿಗೆ 21, ಕಾಂಗ್ರೆಸ್-ಜೆಡಿಎಸ್‌ಗೆ 7, ಇತರರಿಗೆ ಶೂನ್ಯ ಸ್ಥಾನಗಳು ಸಿಗುವ ಸಂಭವವಿದೆ.
ಎರಡು ವಾಹಿನಿಗಳು ಮಂಡ್ಯದಲ್ಲಿ ಸುಮಲತಾ ಗೆಲ್ಲಬಹುದು ಎಂದು ಭವಿಷ್ಯ ನುಡಿದಿವೆ. ಆದರೆ ಉಳಿದ ಎಲ್ಲ ವಾಹಿನಿಗಳು ಇತರರಿಗೆ ಯಾವುದೇ ಸ್ಥಾನ ನೀಡಿಲ್ಲ.
ನೆಟ್‌ವರ್ಕ್ 18- ಐಪಿಎಸ್‌ಒಎಸ್ ಪ್ರಕಾರ ಬಿಜೆಪಿಗೆ 21-23, ಕಾಂಗ್ರೆಸ್ ಮೈತ್ರಿಕೂಟಕ್ಕೆ 5-7, ನ್ಯೂಸ್ 24-ಟುಡೇಸ್ ಚಾಣಕ್ಯ ಪ್ರಕಾರ ಬಿಜೆಪಿಗೆ 23, ಕಾಂಗ್ರೆಸ್ ಮೈತ್ರಿಕೂಟಕ್ಕೆ 5 ಸ್ಥಾನ ಸಿಗಲಿದೆ. ರಿಪಬ್ಲಿಕ್ ಟಿವಿ-ಜನ್ ಕಿಬಾತ್‌ನಂತೆ ಬಿಜೆಪಿಗೆ 18-20, ಕಾಂಗ್ರೆಸ್ ಮೈತ್ರಿಕೂಟಕ್ಕೆ 7-10, ಇತರರಿಗೆ 0-1 ಸ್ಥಾನ ಸಿಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.