ಪಶ್ಚಿಮ ಘಟ್ಟಗಳಲ್ಲಿ 12 ಹೊಸ ಪ್ರಭೇದದ ಹಲ್ಲಿಗಳು ಪತ್ತೆ
ಬೆಂಗಳೂರು, ಮುಂಬಯಿಯ ಜೀವ ವಿಜ್ಞಾನ ತಜ್ಞರ ತಂಡದ ಸಂಶೋಧನೆ | ಹೆಚ್ಚು ಬಲಿಷ್ಠವಾದ, ಮಿಂಚಿನ ವೇಗದಲ್ಲಿ ಓಡಬಲ್ಲಂಥ ಹಲ್ಲಿಗಳು
Team Udayavani, Oct 4, 2021, 4:15 PM IST
ಪಶ್ಚಿಮ ಘಟ್ಟಗಳಲ್ಲಿ ಅನಾದಿ ಕಾಲದಿಂದ ಜೀವಿಸುತ್ತಿರುವ ಸುಮಾರು 12 ಜಾತಿಯ ಹಲ್ಲಿಗಳನ್ನು ಬೆಂಗಳೂರು ಹಾಗೂ ಮುಂಬಯಿಯ ಜೀವ ವಿಜ್ಞಾನ ತಜ್ಞರ ತಂಡವೊಂದು ಪತ್ತೆ ಹಚ್ಚಿದೆ. ಸಾಮಾನ್ಯ ಹಲ್ಲಿಗಳಿಂದ ಹೆಚ್ಚು ಬಲಿಷ್ಠವಾದ, ಮಿಂಚಿನ ವೇಗದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಬಲ್ಲಂಥ ಹಲ್ಲಿಗಳು ಇವಾಗಿದ್ದು, ಪಶ್ಚಿಮ ಘಟ್ಟಗಳಲ್ಲಿ ಇನ್ನೂ 18 ಹಲ್ಲಿಗಳು ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಬೆಂಗಳೂರಿನ ಎರಡು ಸಂಸ್ಥೆ ಭಾಗಿ
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ (ಐಐಎಸ್ಸಿ) ಅಧೀನದಲ್ಲಿರುವ ಸೆಂಟರ್ ಫಾರ್ ಎಕಾಲಜಿಕಲ್ ಸೈನ್ಸಸ್ (ಸಿಇಎಸ್), ನ್ಯಾಶನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ (ಎನ್‌ಸಿಬಿಎಸ್) ಹಾಗೂ ಮುಂಬಯಿಯ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್) ಸಂಸ್ಥೆಯ ತಜ್ಞರ ತಂಡ 2009ರಿಂದ 2014ರವರೆಗೆ ನಡೆಸಲಾಗಿದ್ದ ಸಂಶೋಧನೆ ವೇಳೆ ಈ ಪ್ರಭೇದ ಗಳನ್ನು ಪತ್ತೆ ಹಚ್ಚಿದ್ದಾಗಿ ತಿಳಿಸಿದೆ.
6 ಕೋಟಿ ವರ್ಷಗಳ ಇತಿಹಾಸ
ಇವು ಆಫ್ರಿಕಾ, ಭಾರತ-ಶ್ರೀಲಂಕಾ ಹಾಗೂ ದಕ್ಷಿಣ ಏಷ್ಯಾದಲ್ಲಿ ಮಾತ್ರ ಕಂಡುಬರುವಂಥ ಪ್ರಾಣಿಗಳು. ಭಾರತದಲ್ಲಿ ಸುಮಾರು 6 ಕೋಟಿ ವರ್ಷಗಳಿಂದ ಜೀವಿಸುತ್ತಿರುವ ಇವು, ಪಶ್ಚಿಮ ಹಾಗೂ ಪೂರ್ವ ಘಟ್ಟಗಳು, ಈಶಾನ್ಯ ವಲಯ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ ಗಳಲ್ಲಿ ಕಂಡುಬರುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ:ಕಳೆದ ಐದು ವರ್ಷಗಳಲ್ಲಿ 813 ಹೊಸ ರೈಲು
ಹೊಸ ಪ್ರಭೇದಗಳ ವಿಶೇಷ
ಇದು ರಾತ್ರಿ ವೇಳೆ ಹೆಚ್ಚು ಚಟುವಟಿಕೆಯಿಂದಿರುವ ಪ್ರಾಣಿ. ಪಾದಗಳಲ್ಲಿ ಅಂಟಿನ ಅಂಶವಿದ್ದು ಅದರ ಸಹಾಯದಿಂದ ಅತೀ ಎತ್ತರದ ಪರ್ವತಗಳನ್ನೂ ಏರಬಲ್ಲದು. ಕ್ಷಣಾರ್ಧದಲ್ಲಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಚಲಿಸಬಲ್ಲ ಇದು, ಒಂದು ಕಡೆ ಕುಳಿತಿರದೆ ಚುರುಕಾಗಿ ಓಡಾಡುತ್ತಿರುವಂಥದ್ದು. ಇಡೀ ಮೈ ಮೇಲೆ ಬಣ್ಣ ಬಣ್ಣದ ಚಿತ್ತಾರಗಳಿರುತ್ತವೆ.
ಹೊಸ ಪ್ರಭೇದಕ್ಕೆ ಜಾಕಿಚಾನ್ ಹೆಸರು!
ಜಗದ್ವಿಖ್ಯಾತ ನಟರಾದ ಜಾಕಿಚಾನ್, ತಮ್ಮ ಸಿನೆಮಾಗಳಲ್ಲಿ ತಾವೇ ಖುದ್ದಾಗಿ ಮಾಡುವ ಸ್ಟಂಟ್‌ಗಳನ್ನು ಅತ್ಯಂತ ಚುರುಕಾಗಿ ನಿಭಾಯಿಸು ತ್ತಾರೆ. ಕ್ಷಣಾರ್ಧದಲ್ಲಿ ದೊಡ್ಡ ಕಟ್ಟಡಗಳನ್ನು ಏರಿ, ಕ್ಷಣಾರ್ಧಲ್ಲಿ ಇಳಿಯಬಲ್ಲಂಥ ವಿಶೇಷ ಪ್ರತಿಭೆಯುಳ್ಳವರು ಅವರು. ಹೊಸದಾಗಿ ಪತ್ತೆಯಾಗಿರುವ 12 ಪ್ರಭೇದಗಳ ಹಲ್ಲಿಗಳು ಚಾಕಿಚಾನ್‌ರಂತೆಯೇ ವರ್ತಿಸುವುದರಿಂದ ಅವುಗಳಿಗೆ ಸಂಶೋಧಕರು ಸಿನೆಮಾಪ್ಸಿಸ್ ಜಾಕೇಲಿ ಅಥವಾ ಜಾಕೀಸ್ ಡೇ ಗಿಕೋ ಎಂದು ನಾಮಕರಣ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.