11 ವರ್ಷಗಳಿಂದ ನಾಪತ್ತೆ; ಅರ್ಧ ಕಿ.ಮೀ.ನಲ್ಲೇ ಪತ್ತೆ!
Team Udayavani, Jun 11, 2021, 7:10 AM IST
ಪಾಲಕ್ಕಾಡ್: “ಕೆಲವೊಮ್ಮೆ ಸತ್ಯವು ಕಲ್ಪನೆಗಿಂತಲೂ ವಿಚಿತ್ರವಾಗಿರುತ್ತದೆ’ ಎಂಬ ಮಾತು ಈ ಪ್ರಕರಣದಲ್ಲಿ ನಿಜವಾಗಿದೆ. ಬರೋಬ್ಬರಿ 11 ವರ್ಷಗಳಿಂದ ನಾಪತ್ತೆಯಾಗಿದ್ದ ಕೇರಳದ ಯುವತಿ, ಈಗ ಆಕೆಯ ಮನೆಯಿಂದ ಅರ್ಧ ಕಿ.ಮೀ. ದೂರದಲ್ಲಿ ತನ್ನ ಪ್ರಿಯಕರನೊಂದಿಗೆ ರಹಸ್ಯವಾಗಿ ವಾಸಿಸುತ್ತಿದ್ದ ವಿಚಾರ ಬಹಿರಂಗಗೊಂಡಿದೆ!
ಪಾಲಕ್ಕಾಡ್ ಆಯಲೂರ್ ಗ್ರಾಮದಿಂದ 2010 ರಲ್ಲಿ ಸಜಿತಾ (18) ನಾಪತ್ತೆಯಾಗಿದ್ದಳು. ಎಷ್ಟೇ ಹುಡುಕಿದರೂ ಪತ್ತೆಯಾಗಿರಲಿಲ್ಲ. ಅಚ್ಚರಿಯೆಂದರೆ, ಮನೆಯಿಂದ 500 ಮೀ. ದೂರದ ರೆಹಮಾನ್ ಎಂಬಾತನ ಮನೆಯಲ್ಲಿ ಆಕೆ 11 ವರ್ಷದಿಂದ ವಾಸಿಸುತ್ತಿದ್ದಳು; ಈ ವಿಷಯ ಆತನ ಮನೆಯವರಿಗೇ ಗೊತ್ತಿರಲಿಲ್ಲ!
ಕೋಣೆಯಲ್ಲೇ ವಾಸ :
ರೆಹಮಾನ್- ಸಜಿತಾ ಪರಸ್ಪರ ಪ್ರೀತಿಸುತ್ತಿದ್ದರು. ಮನೆ ಬಿಟ್ಟು ಬಂದಿದ್ದ ಸಜಿತಾ, ರೆಹಮಾನ್‌ನ ಮನೆಯ 1 ಕೋಣೆಯಲ್ಲಿ ವಾಸ ಆರಂಭಿಸಿದಳು. ರೆಹಮಾನ್ ರೂಮಿಗೆ ಬೀಗ ಹಾಕಿ ಮಾಮೂಲಿಯಂತೆ ಕೆಲಸಕ್ಕೆ ಹೋಗಿ ಬರುತ್ತಿದ್ದ. ಯಾರಿಗೂ ಆತನ ಮೇಲೆ ಅನುಮಾನ ಬಂದಿರಲಿಲ್ಲ. ಆತನ ಕೋಣೆ ಬಳಿ ಯಾರಾದರೂ ಬಂದರೆ ಸಿಟ್ಟಿನಿಂದ ಅರಚುತ್ತಿದ್ದ. ಹೀಗಾಗಿ ಎಲ್ಲರೂ ಅವನಿಗೆ ಮಾನಸಿಕ ಸಮಸ್ಯೆಯಿದೆ ಎಂದು ಭಾವಿಸಿದ್ದರು.
ಸರಳು ಮುರಿದರು :
ರೆಹಮಾನ್ ತನ್ನ ಕೋಣೆಯ ಕಿಟಕಿಯ ಸರಳುಗಳನ್ನು ಮುರಿದಿದ್ದ. ಟಾಯ್ಲೆಟ್‌ಗೆ ಹೋಗಬೇಕೆಂದಿದ್ದರೆ ಸಜಿತಾ ಆ ಕಿಟಕಿ ಮೂಲಕ ಹೊರಹೋಗುತ್ತಿದ್ದಳು. ಬಟ್ಟೆ ಬರೆಗಳನ್ನು ಕೋಣೆಯೊಳಗೇ ಒಣಗಿಸಲು ಹಾಕುತ್ತಿದ್ದಳು. ಅಲ್ಲದೆ ಸಜಿತಾ ಇಯರ್‌ಫೋನ್ ಹಾಕಿಕೊಂಡು ಟಿವಿಯನ್ನೂ ವೀಕ್ಷಿಸುತ್ತಿದ್ದಳು.
ಗೊತ್ತಾಗಿದ್ದು ಹೇಗೆ? :
3 ತಿಂಗಳ ಹಿಂದೆ ರೆಹಮಾನ್ ಮತ್ತು ಸಜಿತಾ ರಹಸ್ಯವಾಗಿ ಬೇರೊಂದು ಗ್ರಾಮಕ್ಕೆ ತೆರಳಿ ಅಲ್ಲಿ ಬಾಡಿಗೆ ಮನೆಯಲ್ಲಿ ವಾಸ ಆರಂಭಿಸಿದರು. ರೆಹಮಾನ್‌ನನ್ನು ಕಾಣದಾದಾಗ ಮನೆಯವರು ಪೊಲೀಸರಿಗೆ ದೂರು ನೀಡಿ, ಹುಡುಕಾಟ ನಡೆಸಿದಾಗ ಬೇರೊಂದು ಗ್ರಾಮದಲ್ಲಿ ಇಬ್ಬರೂ ಪತ್ತೆಯಾಗಿದ್ದಾರೆ. ಸ್ಥಳೀಯ ಕೋರ್ಟ್ ಕೂಡ ದಂಪತಿ ಪರ ತೀರ್ಪು ನೀಡಿ, ಒಟ್ಟಿಗೆ ಬಾಳಲು ಅವಕಾಶ ಕಲ್ಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…