ಸಿಕ್ಕಿ ಬಿದ್ದ 2 ಪತ್ನಿಯರ ಎಂಜಿನಿಯರ್
Team Udayavani, Jun 10, 2018, 6:00 AM IST
ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಜಿನಿಯರ್ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಐದು ಐಷಾರಾಮಿ ಕಾರುಗಳು, ಕನಿಷ್ಠ 25 ಸ್ವತ್ತು ಗಳು, 8 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ 59 ವರ್ಷದ ಚೌಧರಿ ಬ್ರಿಜ್‌ಪಾಲ್ ಸಿಂಗ್‌ಗೆ ಇಬ್ಬರು ಹೆಂಡತಿಯರಿದ್ದು, ತಲಾ ಎರಡು ಗಂಡು ಮತ್ತು ಒಂದು ಹೆಣ್ಣು ಮಗುವಿದೆ. ಸ್ವತ್ತು ವಹಿವಾಟು ನಡೆಸುವುದು ಸುಲಭವಾಗಲಿ ಎಂಬ ಕಾರಣಕ್ಕೆ ಇಬ್ಬರೂ ಹೆಂಡತಿಯರ ಮಕ್ಕಳಿಗೆ ಒಂದೇ ಹೆಸರನ್ನಿಟ್ಟಿದ್ದಾರೆ. ಒಂದು ಕುಟುಂಬ ನೋಯ್ಡಾದ ಸೆಕ್ಟರ್ 27ರಲ್ಲಿ ವಾಸ ವಿದ್ದರೆ, ಇನ್ನೊಂದು ಕುಟುಂಬ ಫರೀದಾಬಾದ್‌ನಲ್ಲಿ ವಾಸವಿದೆ. ಸ್ವತ್ತುಗಳನ್ನು ಜಪ್ತಿ ಮಾಡಲಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UP bypolls; ನಿಯಮ ಉಲ್ಲಂಘನೆ: 7 ಪೊಲೀಸರನ್ನು ಅಮಾನತುಗೊಳಿಸಿದ ಚುನಾವಣ ಆಯೋಗ
Kallakurichi ಕಳ್ಳಭಟ್ಟಿ ದುರಂತ: ಪ್ರಕರಣ ಸಿಬಿಐಗೆ ನೀಡಿದ ಮದ್ರಾಸ್ ಹೈಕೋರ್ಟ್
Tragedy: ಶಾಲಾ ಆವರಣದಲ್ಲೇ ಶಿಕ್ಷಕಿಯ ಬರ್ಬರ ಹತ್ಯೆ… ಮದುವೆ ನಿರಾಕರಿಸಿದ್ದೆ ಮುಳುವಾಯಿತು
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.