ನಟ ಶರತ್ ಕುಮಾರ್, ನಟಿ ರಾಧಿಕಾ ನಿವಾಸದ ಮೇಲೆ ಐಟಿ ದಾಳಿ
Team Udayavani, Apr 11, 2017, 4:13 PM IST
ಚೆನ್ನೈ : ಆದಾಯ ತೆರಿಗೆ ಇಲಾಧಿಕಾರಿಗಳು ಇಂದು ಮಂಗಳವಾರ ಎಐಎಡಿಂಕೆ ಮುಖ್ಯಸ್ಥೆ ಹಾಗೂ ಈಗ ಜೈಲುಪಾಲಾಗಿರುವ ಶಶಿಕಲಾ ನಟರಾಜನ್ ಅವರ ಬೆಂಬಲಿಗರಾದ ತಮಿಳು ನಾಡು ಚಿತ್ರ ನಟ ಶರತ್ ಕುಮಾರ್ ಮತ್ತು ಅವರ ಪತ್ನಿ ರಾಧಿಕಾ ಅವರ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.
ಇದೇ ವೇಳೆ, ವರದಿಗಳ ಪ್ರಕಾರ ಐಟಿ ಅಧಿಕಾರಿಗಳು ತಮಿಳು ನಾಡಿನ ಹಲವಾರು ವಿವಿಐಪಿಗಳ ನಿವಾಸದ ಮೇಲೆ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ.
ಈ ಹಿಂದೆಯೇ ಐಟಿ ಅಧಿಕಾರಿಗಳ ಸ್ಕ್ಯಾನರ್‌ಗೆ ಒಳಪಟ್ಟಿದ್ದ ಶರತ್ ಕುಮಾರ್ – ರಾಧಿಕಾ ಅವರ ನಿವಾಸವನ್ನು ಇಂದು ಐಟಿ ಅಧಿಕಾರಿಗಳು ಶೋಧಿಸುತ್ತಿದ್ದಾರೆ.
ಕಳೆದ ವಾರದಲ್ಲಿ ತಮಿಳು ನಾಡು ಆರೋಗ್ಯ ಮಂತ್ರಿ ವಿಜಯಭಾಸ್ಕರ್, ಮಾಜಿ ಸಂಸದ ಸಿ ರಾಜೇಂದ್ರನ್ ಮತ್ತು ಎಂಜಿಆರ್ ಮೆಡಿಕಲ್ ಯುನಿವರ್ಸಿಟಿ ವಿಸಿ ಡಾ. ಗೀತಾಲಕ್ಷೀ ಅವರ ನಿವಾಸಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಆರ್ ನಗರ ಉಪಚುನಾವಣೆಯಲ್ಲಿ ಶಶಿಕಲಾ ಬಣದ ಎಐಎಡಿಎಂಕೆ ಅಭ್ಯರ್ಥಿ ಟಿ ಟಿ ವಿ ದಿನಕರನ್ ಅವರ ಪರವಾಗಿ ಅಪಾರ ಮೊತ್ತದ ಹಣವನ್ನು ಬಳಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಆಧರಿಸಿ ಐಟಿ ಅಧಿಕಾರಿಗಳು ತಮಿಳು ನಾಡಿನ ವಿವಿಐಪಿ ಗಳ ನಿವಾಸಗಳ ಮೇಲೆ ದಾಳಿ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ತಮಿಳು ನಾಡಿನ ಆರೋಗ್ಯ ಸಚಿವರ ನಿವಾಸದಲ್ಲಿ ಹಾಗೂ ಶರತ್ ಕುಮಾರ್ ಅವರ ನಿವಾಸದಲ್ಲಿ ಅಪಾರ ಮೊತ್ತದ ಹಣ ಪತ್ತೆಯಾಗಿರುವುದಾಗಿ ಎಚ್‌ಟಿ ವರದಿ ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.