![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jun 2, 2020, 8:01 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೇಶದಲ್ಲಿ ಕೋವಿಡ್ ಸೋಂಕು ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದೆ. ದೇಶದಲ್ಲಿ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಸೋಮವಾರ ಒಂದೇ ದಿನ 2,361 ಪ್ರಕರಣಗಳು ದೃಢಪಡುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 70 ಸಾವಿರ ದಾಟಿದೆ.
ಸೋಂಕಿತರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 1,162 ಹೊಸ ಪ್ರಕರಣಗಳು ದೃಢಪಡುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 23 ಸಾವಿರ ದಾಟಿದೆ ಮತ್ತು 11 ಮಂದಿ ಕೊನೆಯುಸಿರೆಳೆದಿದ್ದಾರೆ. ಇದೇ ವೇಳೆ ದಿಲ್ಲಿಯಲ್ಲಿ ಒಂದು ದಿನದ ಅವಧಿಯಲ್ಲಿ 990 ಕೇಸುಗಳು ದೃಢಪಡುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 20 ಸಾವಿರ ದಾಟಿದೆ. ಹಾಗೆಯೇ ಸಾವಿನ ಸಂಖ್ಯೆ 523ಕ್ಕೆ ಏರಿಕೆಯಾಗಿದೆ. ರವಿವಾರ ಒಂದೇ ದಿನ ರಾಷ್ಟ್ರ ರಾಜಧಾನಿಯಲ್ಲಿ 1,295 ಕೇಸುಗಳು ದೃಢಪಟ್ಟಿದ್ದವು. ಗುಜರಾತ್‌ನಲ್ಲಿ ಸೋಂಕು ಪೀಡಿತರ ಸಂಖ್ಯೆ 17 ಸಾವಿರ ದಾಟಿದೆ. 423 ಹೊಸ ಪ್ರಕರಣಗಳು ಮತ್ತು 25 ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಪೈಕಿ ಅಹ್ಮದಾಬಾದ್ ಒಂದರಲ್ಲಿಯೇ 314 ಪ್ರಕರಣಗಳು ದೃಢಪಟ್ಟರೆ, 22 ಮಂದಿ ಅಸುನೀಗಿದ್ದಾರೆ.
ಒಂದೇ ದಿನ 8,392 ಪ್ರಕರಣ: ದೇಶದ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮತ್ತೂಂದು ದಾಖಲೆ ಸೃಷ್ಟಿಯಾಗಿದೆ. ರವಿವಾರದಿಂದ ಸೋಮವಾರಕ್ಕೆ ಒಂದೇ ದಿನ 230 ಮಂದಿ ಸೋಂಕಿಗೆ ಬಲಿಯಾಗಿದ್ದು, ಇದೇ ಮೊದಲ ಬಾರಿಗೆ 8,392 ಹೊಸ ಪ್ರಕರಣ ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ.
You seem to have an Ad Blocker on.
To continue reading, please turn it off or whitelist Udayavani.