ನೀರಿನ ಅವಘಡ ಹೆಚ್ಚಳ
Team Udayavani, Feb 10, 2020, 6:55 AM IST
ದೇಶದಲ್ಲಿ ಪ್ರತಿದಿನ ಸಾರ್ವಜನಿಕ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ 83 ಜನ ಸಾವನ್ನಪ್ಪುತ್ತಿದ್ದಾರೆ ಎಂದು ಭಾರತದ ಆಕಸ್ಮಿಕ ಸಾವು ಮತ್ತು ಆತ್ಮಹತ್ಯೆ ವರದಿ-2020 ಹೇಳಿದೆ. ನದಿ, ಸಮುದ್ರ, ಸರೋವರಗಳಲ್ಲಿ ಮುಳುಗಿ ಸಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ಅಧಿಕವಾಗಿ ದಾಖಲಾಗುತ್ತಿವೆ. ಆದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ, ಸರಕಾರ ಮಾತ್ರ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ವರದಿ ಹೇಳಿದೆ.
30,187 ಸಾವುಗಳು
2018ರ ಅಂಕಿ-ಅಂಶದ ಪ್ರಕಾರ ದೇಶದಲ್ಲಿ 30,187 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಂತಹ ಹಲವು ಪ್ರಕರಣಗಳು ನಡೆದಿರ ಬಹುದಾಗಿದ್ದು, ಎಲ್ಲ ಪ್ರಕರಣಗಳು ದಾಖಲಾಗಿಲ್ಲ ಎಂದಿದೆ.
3ನೇ ಪ್ರಮುಖ ಕಾರಣ
ಆಕಸ್ಮಿಕ ಸಾವು ಘಟನೆಗಳ ಪೈಕಿ ನೀರಿನಿಂದ ಸಂಭವಿಸುವ ಅವಘಡಗಳ ಪ್ರಮಾಣ ಹೆಚ್ಚಿದ್ದು, ಆಕಸ್ಮಿಕ ಸಾವಿನಲ್ಲಿ ನೀರಿನಲ್ಲಿ ಮುಳುಗಿ ಸಾಯುವುದು ಮೂರನೇ ಪ್ರಕರಣವಾಗಿದೆ. ಅಂದರೆ ಪ್ರತಿವರ್ಷ ನೀರಿನಲ್ಲಿ ಮುಳುಗಿ ಶೇ. 7ರಷ್ಟು, ಅಪಘಾತಗಳಿಂದ ಶೇ. 43ರಷ್ಟು ಮತ್ತು ಹಠಾತ್ ಸಾವಿನಿಂದ ಶೇ. 11ರಷ್ಟು ಸಾವನ್ನಪ್ಪುತ್ತಿದ್ದಾರೆ.
3.60 ಲಕ್ಷ
2015ರಲ್ಲಿ ವಿಶ್ವಾದ್ಯಂತ ಸುಮಾರು 3,60,000 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಉದ್ದೇಶ ಪೂರ್ವಕವಲ್ಲದ ಸಂಬಂಧಿತ ಸಾವುಗಳಿಗೆ ವಿಶ್ವದಲ್ಲಿಯೇ ಇದು ಮೂರನೇ ಪ್ರಮುಖ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರದಿ ಮಾಡಿತ್ತು.
ಕಾರಣಗಳೇನು ?
– ಸರಕಾರದ ನಿರ್ದಿಷ್ಟ ಯೋಜನೆ ಇಲ್ಲದೆ ಇರುವುದು.
– ಈಜುವಿಕೆ ಬಾರದೇ ಇರುವುದು.
– ಅಸುರಕ್ಷತೆ. ಅಪಾಯ ಸ್ಥಳಗಳಲ್ಲಿ ಕಾವಲುಗಾರರು ಇಲ್ಲದೆ ಇರುವುದು.
– ಜಾಗೃತಿ ಅಭಾವ, ತಡೆಗಟ್ಟುವಿಕೆ ಸುರಕ್ಷತೆಯ ಕುರಿತು ನೀತಿ ರೂಪಿಸದೆ ಇರುವುದು.
ರಾಜ್ಯ 3ನೇ ಸ್ಥಾನದಲ್ಲಿ
ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವು ಸಂಭವಿಸಿರುವ ಪ್ರಕರಣಗಳಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ಕರ್ನಾಟದಲ್ಲಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 866ರ ಷ್ಟಿದ್ದು, ಕರ್ನಾಟಕ 2ನೇ ಸ್ಥಾನ ಮತ್ತು ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ.
ಅನಿರ್ದಿಷ್ಟ ಕಾರಣ
ಆಯತಪ್ಪಿ ಅಥವಾ ಆಕಸ್ಮಿಕವಾಗಿ ನೀರಿಗೆ ಬೀಳುತ್ತಿರುವುದು ಸಾವಿಗೆ ಪ್ರಮುಖ ಕಾರಣವಾಗಿದ್ದು, ಶೇ. 66ರಷ್ಟು ಅಂದರೆ 19,939 ಜನರು ಮರಣ ಹೊಂದಿದ್ದಾರೆ. ಜತೆಗೆ ದೋಣಿ ಮಗುಚುವಿಕೆಯಿಂದ ಶೇ. 1ರಷ್ಟು ಅಂದರೆ 258 ಮಂದಿ ಹಾಗೂ ಮೂರನೇ ಒಂದು ಭಾಗದಷ್ಟು ಅಂದರೆ 9,990 ಅನಿರ್ದಿಷ್ಟ ಕಾರಣಗಳಿಂದಾಗಿ ಸಾವು ಸಂಭವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.