ಜಪಾನ್ ಜತೆ ರಕ್ಷಣೆ ಇನ್ನಷ್ಟು ವೃದ್ಧಿ
Team Udayavani, Sep 8, 2017, 8:05 AM IST
ನವದೆಹಲಿ/ಟೋಕಿಯೋ: ಡೋಕ್ಲಾಂನಲ್ಲಿ ಬಿಕ್ಕಟ್ಟು ಕುರಿತಂತೆ ಕ್ಸಿಯಾಮೆನ್‌ನಲ್ಲಿ ಪ್ರಧಾನಿ ಮೋದಿ- ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜತೆಗೆ ಶಾಂತಿ ಮಂತ್ರ ಪಠಿಸಿದ್ದಾಗಿದೆ. ಇದೀಗ ಜಪಾನ್ ಜತೆ ಹೊಂದಿರುವ ರಕ್ಷಣಾ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಟೋಕಿಯೋದಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾನವ ರಹಿತ ಯುದ್ಧ ವಿಮಾನ ಮತ್ತು ರೋಬೋಟಿಕ್ ತಂತ್ರಜ್ಞಾನದ ಬಗ್ಗೆ ಎರಡೂ ದೇಶಗಳು ಹೊಂದಬೇಕಾದ ಸಹಭಾಗಿತ್ವದ ಬಗ್ಗೆ ಚರ್ಚಿಸಿದರು. ಏಕೆಂದರೆ ಈ ತಂತ್ರಜ್ಞಾನದಲ್ಲಿ ಚೀನಾ ಪಾರಮ್ಯ ಸಾಧಿಸಿದೆ. ಇದರ ಜತೆಗೆ ಸಬ್‌ಮೆರಿನ್ ವಿರೋಧಿ ತಂತ್ರಜ್ಞಾನ ಅಭಿವೃದ್ಧಿ ಮಾಡುವ ಬಗ್ಗೆಯೂ ಅಬೆ-ಜೇಟ್ಲಿ ಚರ್ಚಿಸಿದ್ದಾರೆ. ಈ ತಿಂಗಳಲ್ಲೇ ಅಬೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
ಎರಡು ಯುದ್ಧ ಸಂಭವ: ಇದೇ ವೇಳೆ ಮಹತ್ವದ ಬೆಳವಣಿಗೆಯಲ್ಲಿ ಚೀನಾ ಭಾರತದ ವಿರುದ್ಧ ಪ್ರಚೋದನೆ ಮುಂದುವರಿಸಿದರೆ ಉತ್ತರ ಭಾಗದಲ್ಲಿ ಚೀನಾ ಜತೆ ಮತ್ತು ಪಶ್ಚಿಮದಲ್ಲಿ ಚೀನಾ ಜತೆ ಯುದ್ಧವಾಗುವ ಸಾಧ್ಯತೆ ಇದೆ. ಹೀಗೆಂದು ಭೂಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ ಹೇಳಿದ್ದಾರೆ. ಇದರಿಂದಾಗಿ ಇತ್ತೀಚಿನ ವರ್ಷಗಳಲ್ಲಿಯೇ ಕಠಿಣ ಎನ್ನಬಹುದಾದ ಪರಿಸ್ಥಿತಿ ಎದುರಿಸಬೇಕಾದಿತು ಎಂದು ಎಚ್ಚರಿಸಿದ್ದಾರೆ.
ಆದರೆ ಪಶ್ಚಿಮದಲ್ಲಿ ಉಂಟಾಗುವ ಅಂದರೆ ಪಾಕಿಸ್ತಾನದ ವಿರುದ್ಧ ಉಂಟಾಗುವ ಯುದ್ಧ ದೀರ್ಘ ಕಾಲದ ವರೆಗೆ ನಡೆಯಲಿದೆ. ಏಕೆಂದರೆ ಅದಕ್ಕೆ ಚೀನಾ ನೆರವಾಗಲಿದೆ ಎಂದು ಭೂಸೇನಾ ಮುಖ್ಯಸ್ಥರು ಹೇಳಿದ್ದಾರೆ. ಚೀನಾ ಜತೆಗೆ ಮುಕ್ತಾಯವಾದದ್ದು ಪಾಕ್ ಜತೆಗಿನ ಸಂಘರ್ಷದ ಜತೆ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ ಅವರು. ಈ ಹಿಂದೆ ಕೂಡ ಭೂಸೇನಾ ಮುಖ್ಯಸ್ಥರು ಈ ಮಾತುಗಳನ್ನಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!
Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.