ಅಂಡಮಾನ್ ನಲ್ಲಿ ನುಸುಳುಕೋರರ ವಿರುದ್ಧ ಸೇನೆಯ ಸ್ಪೆಷಲ್ ಫೋರ್ಸ್ ನಿಂದ ವಾರ್ ಗೇಮ್
Team Udayavani, Oct 18, 2019, 7:10 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸಶಸ್ತ್ರ ಪಡೆಗಳ ವಿಶೇಷ ಕಾರ್ಯಾಚರಣೆ ವಿಭಾಗ (AFSOD) ಅಂಡಮಾನ್ ದ್ವೀಪ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಇಲ್ಲಿನ ಜನವಸತಿ ಇಲ್ಲದಿರುವ ದ್ವೀಪಗಳಲ್ಲಿ ನುಸುಳಿ ಕುಳಿತಿರಬಹುದಾದ ನುಸುಳುಕೋರರನ್ನು ಹಾಗೂ ಉಗ್ರರನ್ನು ಮಟ್ಟಹಾಕುವ ಉದ್ದೇಶದಿಂದ ಈ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಡಿ.ಎ.ಎನ್.ಎಕ್ಸ್. 2019 ಎಂಬ ಕೋಡ್ ನೇಮ್ ಇಟ್ಟುಕೊಂಡು ಈ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದು ಇದರಲ್ಲಿ ಸೇನಾಪಡೆಯ ಅರೆ ವಿಶೇಷ ಪಡೆಗಳು, ನೌಕಾಪಡೆಯ ಸಾಗರ ಕಮಾಂಡೋಗಳು ಮತ್ತು ವಾಯುಪಡೆಯ ಗಾರ್ಡ್ ಕಮಾಂಡೋಗಳು ಭಾಗವಹಿಸುತ್ತಿದ್ದಾರೆ.
ದೆಹಲಿ, ಆಗ್ರಾ, ಬೆಂಗಳೂರು ಮತ್ತು ಕಲೈಕುಂಡ ಭಾಗಗಳಿಂದ ತುಕಡಿಗಳನ್ನು ಅಕ್ಟೋಬರ್ 10ರಂದು ಹೊರಡಿಸುವ ಮೂಲಕ ಈ ಕಾರ್ಯಾಚರಣೆ ಪ್ರಾರಂಭಗೊಂಡಿದೆ. ಇದೀಗ ಈ ಕಾರ್ಯಾಚರಣೆ ಪ್ರಮುಖ ಘಟ್ಟವನ್ನು ತಲುಪಿದೆ. 1987ರಲ್ಲಿ ಮಾಲ್ಡೀವ್ಸ್ ರಾಜಧಾನಿ ಮಾಲೆಯನ್ನು ತಮಿಳು ಉಗ್ರರಿಂದ ತೆರವುಗೊಳಿಸಲು ಕೈಗೊಳ್ಳಲಾಗಿದ್ದ ವಿಶೇಷ ಸೇನಾ ಕಾರ್ಯಾಚರಣೆಯ ಮಾದರಿಯಲ್ಲಿಯೇ ಈ ಕಾರ್ಯಾಚರಣೆಯೂ ನಡೆಯುತ್ತಿರುವುದು ವಿಶೇಷವಾಗಿದೆ.
ದೇಶದ ಸಾರ್ವಭೌಮತೆಗೆ ಅಪಾಯ ಒದಗಿದ ಸಂದರ್ಭಗಳಲ್ಲಿ ಜಂಟಿ ಕಾರ್ಯಾಚರಣೆಯನ್ನು ನಡೆಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ಭಾರತೀಯ ಸೇನೆಯ ಈ ವಿಶೇಷ ವಿಭಾಗವು ಸ್ಥಾಪನೆಗೊಂಡ ಬಳಿಕ ನಡೆಸಲಾಗುತ್ತಿರುವ ಎರಡನೇ ಪ್ರಮುಖ ಕಾರ್ಯಾಚರಣೆಯೂ ಇದಾಗಿದೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಪ್ರಥಮ ಕಾರ್ಯಾಚರಣೆಯನ್ನು ಗುಜರಾತಿನಲ್ಲಿರುವ ನಾಲಿಯಾ ಪಟ್ಟಣದಲ್ಲಿ ಪಾಕಿಸ್ಥಾನ ಗಡಿಗೆ ಸಮೀಪದಲ್ಲಿ ‘ಎಕ್ಸ್ ಸ್ಮೆಲ್ಲಿಂಗ್ ಫೀಲ್ಡ್ಸ್’ ಎಂಬ ಕೋಡ್ ನೇಮ್ ನಡಿಯಲ್ಲಿ ನಡೆಸಲಾಗಿತ್ತು.
ಈ ವಿಶೇಷ ಕಾರ್ಯಪಡೆಯನ್ನು ಅರೆ ವಿಶೇಷ ಪಡೆಗಳ ಮೇಜರ್ ಜನರಲ್ ಅವರು ಮುನ್ನಡೆಸುತ್ತಾರೆ. ಸಶಸ್ತ್ರದಳದ ವಿಶೇಷ ಕಾರ್ಯಪಡೆ ವಿಭಾಗದ ಮೊದಲ ಮುಖ್ಯಸ್ಥರಾಗಿ ಮೇಜರ್ ಜನರಲ್ ಅಶೋಕ್ ಧಿಂಗ್ರಾ ಅವರು ನೇಮಕಗೊಂಡಿದ್ದರು. ಇದು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಉದ್ಧವ್ ಸೇನೆ ಪ್ರಣಾಳಿಕೆ: ಬಾಲಕರಿಗೂ ಉಚಿತ ಶಿಕ್ಷಣ!
Fight Terrorism: ಶೀಘ್ರವೇ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ನೀತಿ ಬಿಡುಗಡೆ: ಅಮಿತ್ ಶಾ
Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ
CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!
Supreme Court: ಟ್ರೈನಿ ವೈದ್ಯೆ ಹತ್ಯೆ ಕೇಸು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ನಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.