ಭಾರತ ಮಾನವತೆಗೆ ತಗುಲಿರುವ ಕ್ಯಾನ್ಸರ್: ಕಿಡಿ ಕಾರಿದ ಲಷ್ಕರ್
Team Udayavani, Jun 17, 2017, 11:13 AM IST
ಜಮ್ಮು ಕಾಶ್ಮೀರ : ತೀವ್ರವಾಗಿ ನಂಜು ಕಾರುವ ಹೊಸ ಹೇಳಿಕೆಯೊಂದರಲ್ಲಿ ಲಷ್ಕರ್ ಎ ತಯ್ಯಬ ಉಗ್ರ ಸಂಘಟನೆ ಭಾರತವನ್ನು ಕಟುವಾಗಿ ದೂಷಿಸಿದ್ದು “ಭಾರತವು ಮಾನವತೆಗೆ ತಗುಲಿರುವ ಕ್ಯಾನ್ಸರ್’ ಎಂದು ಹೇಳಿದೆ. ಭಾರತವು ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಅಗ್ರಗಣ್ಯ ದೇಶವಾಗಿದೆ ಎಂದೂ ಅದು ಜರೆದಿದೆ.
ಲಷ್ಕರ್ ಎ ತಯ್ಯಬ ಇದರ ಈ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಉಗ್ರ ಸಂಘಟನೆಯ ವಕ್ತಾರ ಡಾ. ಅಬ್ದುಲ್ಲ ಘಜ್‌ನವಿ, ಭಾರತೀಯ ಮಾಧ್ಯಮದ ಬಗ್ಗೆಯೂ ಕಿಡಿ ಕಾರಿದ್ದು “ಭಾರತೀಯ ಮಾಧ್ಯಮ ನಿರಾಧಾರ ಅಪಪ್ರಚಾರದಲ್ಲಿ ತೊಡಗಿಕೊಂಡು ದೇಶವನ್ನು ತಪ್ಪುದಾರಿಗೆ ಕೊಂಡೊಯ್ಯತ್ತಿದೆ’ ಎಂದು ಹೇಳಿದೆ.
ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ಲ್ಲಿ ಲಷ್ಕರ್ ಕಮಾಂಡರ್ ಜುನೇದ್ ಮತ್ತೂ ಹತನಾಗಿರುವುದನ್ನು ದೃಢೀಕರಿಸಲು ಹೊರಡಿಸಲಾಗಿರುವ ಈ ಹೇಳಿಕೆಯಲ್ಲಿ ಲಷ್ಕರ್ ಸಂಘಟನೆ, ಭಾರತವನ್ನು ಕಟುವಾಗಿ ಹೀಯಾಳಿಸಿದೆ.
ಲಷ್ಕರ ಎ ತಯ್ಯಬ ಸಂಘಟನೆಯ ಮುಖ್ಯಸ್ಥನಾಗಿರುವ ಮೊಹಮ್ಮದ್ ಶಾ ಹತ ಜುನೇದ್ ಮತ್ತೂ ಗೆ ಶ್ರದ್ಧಾಂಜಲಿ ಅರ್ಪಿಸಿರುವುದಾಗಿ ಲಷ್ಕರ್‌ನ ಈ ಹೇಳಿಕೆ ತಿಳಿಸಿದೆ.
“ಜುನೇದ್ ನಂತಹ ಜೆಹಾದಿ ಹೋರಾಟಗಾರರ ಬಲಿದಾನ ವ್ಯರ್ಥವಾಗುವುದಿಲ್ಲ; ಬಲಿದಾನಗೈದಿರುವ ಜೆಹಾದಿಗಳ ಪರಿಶುದ್ಧ ಮತ್ತು ಗೌರವದ ರಕ್ತ ಮುಂದೆ ಭಾರತದ ವಿನಾಶಕ್ಕೆ ಕಾರಣವಾಗಲಿದೆ’ ಎಂದು ಲಷ್ಕರ್ ಹೇಳಿಕೆ ತಿಳಿಸಿದೆ. “ಭಾರತಕ್ಕೆ ತಾನೇ ಹಚ್ಚಿರುವ ಬೆಂಕಿಯ ಬಗ್ಗೆ ಎಚ್ಚರವಿರಲಿ; ಅದು ಭಾರತದ ಪ್ರತಿಯೊಂದು ಇಟ್ಟಿಗೆ ಮತ್ತು ಕಲ್ಲುಗಳನ್ನು ಪುಡಿಗುಟ್ಟಲಿದೆ’ ಎಂದು ಹೇಳಿಕೆಯಲ್ಲಿ ಲಷ್ಕರ್ ಅಬ್ಬರಿಸಿದೆ.
ಜಮ್ಮು ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಆರು ಮಂದಿ ಪೊಲೀಸರನ್ನು ಹೊಂಚು ದಾಳಿಯಲ್ಲಿ ಕೊಂದ ಬಳಿಕ ನಡೆದ ಎನ್‌ಕೌಂಟರ್‌ಗೆ ಲಷ್ಕರ್ ಕಮಾಂಡರ್ ಜುನೇದ್ ಮತ್ತೂ ಹಾಗೂ ಇನ್ನೊಬ್ಬ ಬಲಿಯಾದುದನ್ನು ಅನುಸರಿಸಿ ಲಷ್ಕರ್ ಎ ತಯ್ಯಬ ಈ ಹೇಳಿಕೆಯನ್ನು ಹೊರಡಿಸಿರುವುದು ಗಮನಾರ್ಹವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway; 2 ವರ್ಷದಲ್ಲಿ 50 ಅಮೃತ್ ಭಾರತ ರೈಲು ಉತ್ಪಾದನೆ: ಅಶ್ವಿನಿ ವೈಷ್ಣವ್
Cardiac arrest: ಗುಜರಾತ್ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿ ಸಾ*ವು
Chhattisgarh: ನಕ್ಸಲರು ಇಟ್ಟಿದ್ದ ಐಇಡಿ ಸ್ಫೋ*ಟ, ವ್ಯಕ್ತಿ ಸಾ*ವು
Industrial production ಕಳೆದ ನವೆಂಬರ್‌ನಲ್ಲಿ ಹೆಚ್ಚು: ಕೇಂದ್ರ ಸರ್ಕಾರ
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.