![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Nov 30, 2019, 5:30 AM IST
ಹೊಸದಿಲ್ಲಿ: ಶ್ರೀಲಂಕಾದ ನೂತನ ಅಧ್ಯಕ್ಷ ಗೊಟಬಯ ರಾಜಪಕ್ಷೆ, ಶುಕ್ರವಾರ ಭಾರತದ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್‌ರನ್ನು ಭೇಟಿ ಮಾಡಿದ್ದಾರೆ. ದ್ವಿಪಕ್ಷೀಯ ಮಾತು ಕತೆ ಬಳಿಕ ಪ್ರಧಾನಿ ಮೋದಿ ಅವರು ಶ್ರೀಲಂಕಾಕ್ಕೆ 3223 ಕೋಟಿ ರೂ. ಆರ್ಥಿಕ ನೆರವನ್ನು ಘೋಷಣೆ ಮಾಡಿದ್ದಾರೆ.
ಈ ಪೈಕಿ 358 ಕೋಟಿ ರೂ.ಗಳನ್ನು ಭಯೋತ್ಪಾದನೆ ವಿರುದ್ಧ ಹೋರಾಡಲು ನೀಡಲಾಗಿದೆ. ಲಂಕಾದಲ್ಲಿ ವಾಸಿಸುವ ತಮಿಳಿಗರ ಆಶೋತ್ತರಗಳನ್ನು ಪೂರೈಸು ವುದು, ಶ್ರೀಲಂಕಾದ ಆರ್ಥಿಕ ಉನ್ನತಿಗೆ ನೆರವು ನೀಡುವುದು ಬಾಕಿ ಸಾಲದ ಉದ್ದೇಶವಾಗಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಮೀನು ಗಾರರಿಂದ ವಶಪಡಿಸಿಕೊಂಡ ಎಲ್ಲ ದೋಣಿಗಳನ್ನು ಬಿಡುಗಡೆ ಮಾಡುವು ದಾಗಿ ಗೊಟಬಯ ಭರವಸೆ ನೀಡಿದ್ದಾರೆ. ಅಲ್ಲದೆ, ತನ್ನ ಅಧಿಕಾರಾವಧಿಯಲ್ಲಿ ಭಾರತದೊಂದಿಗೆ ಸಂಬಂಧವನ್ನು ಉನ್ನತ ಮಟ್ಟಕ್ಕೆ ಒಯ್ಯಲು ಯತ್ನಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಪ್ರತಿಕ್ರಿಯಿಸಿದ ಮೋದಿ, ಶ್ರೀಲಂಕಾದ ಅಭಿವೃದ್ಧಿಗೆ ಎಲ್ಲ ನೆರವು ನೀಡುವುದಾಗಿ ತಿಳಿಸಿದ್ದಾರೆ.
ತಮ್ಮ ಮೊದಲ ವಿದೇಶಿ ಭೇಟಿಗೆ ಭಾರತವನ್ನು ಗೊಟಬಯ ಆಯ್ದು ಕೊಂಡಿರುವುದು, ಭಾರತಕ್ಕೆ ಅವರು ನೀಡಿರುವ ಆದ್ಯತೆಯ ಸಂಕೇತ ಎನ್ನುವು ದನ್ನು ಇಲ್ಲಿ ಗಮನಿಸಬಹುದು. ತಮ್ಮ 3 ದಿನಗಳ ಭೇಟಿಯ ಅಂಗವಾಗಿ, ಗೊಟಬಯ ಗುರುವಾರವೇ ಭಾರತಕ್ಕೆ ಆಗಮಿಸಿದ್ದಾರೆ.
ಶ್ರೀಲಂಕಾದ ನೂತನ ಅಧ್ಯಕ್ಷ ಗೊಟಬಯ ರಾಜಪಕ್ಷೆಗೆ ಹಸ್ತಲಾಘವ ಮಾಡುತ್ತಿರುವ ಪ್ರಧಾನಿ ಮೋದಿ. ರಾಷ್ಟ್ರಪತಿ ಕೋವಿಂದ್ ಇದ್ದಾರೆ.
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.