ಅಘ್ಘನ್ನರಿಗೆ ಭಾರತ ಅಭಯ
Team Udayavani, Aug 18, 2021, 7:30 AM IST
ಕಾಬೂಲ್: ಸೋಮವಾರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಂಡುಬಂದ ಘೋರ ದೃಶ್ಯಾವಳಿಗಳಿಗೆ ಮರುಗಿರುವ ಭಾರತವು, ಅಫ್ಘಾನ್‌ನಲ್ಲಿ ಅಸುರಕ್ಷಿತ ಭಾವನೆ ಎದುರಿಸುತ್ತಿರುವ ಅಲ್ಲಿನ ನಾಗರಿಕರಿಗೆ ಆಶ್ರಯ ನೀಡಲು ಮುಂದಾಗಿದೆ. ಅವರಿಗೆ ತುರ್ತು ಇ-ವೀಸಾ ಸೌಲಭ್ಯ ಕಲ್ಪಿಸುವುದಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮಂಗಳವಾರ ಘೋಷಿಸಿದೆ.
ಯುದ್ಧಗ್ರಸ್ತ ಅಫ್ಘಾನಿಸ್ಥಾನದಿಂದ ಬರುವ ಎಲ್ಲರಿಗೂ “ಇ-ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾ’ ಎಂಬ ಹೊಸ ವರ್ಗದ ಎಲೆಕ್ಟ್ರಾನಿಕ್ ವೀಸಾ ಒದಗಿಸಲು ಸರಕಾರ ನಿರ್ಧರಿಸಿದೆ. ಈ ವೀಸಾವನ್ನು ಧರ್ಮಾಧಾರಿತ ಆದ್ಯತೆ ಮೇರೆಗೆ ನೀಡಲಾಗುವುದಿಲ್ಲ. ಎಲ್ಲ ಅಫ್ಘಾನ್ ನಾಗರಿಕರೂ ಅರ್ಜಿ ಸಲ್ಲಿಸಬಹುದು ಎಂದು ಸರಕಾರ ತಿಳಿಸಿದೆ. ಈವರೆಗೆ ಇದ್ದ ನಿಯಮದ ಪ್ರಕಾರ ಅಫ್ಘಾನ್ ನಾಗರಿಕರನ್ನು ಈ ವರ್ಗದ ವೀಸಾದಿಂದ ಹೊರಗಿಡಲಾಗಿತ್ತು. ವೀಸಾಕ್ಕಾಗಿ ಅರ್ಜಿ ಸಲ್ಲಿಸುವ ವ್ಯಕ್ತಿ ಸ್ವತಃ ಅಲ್ಲಿನ ರಾಯಭಾರ ಕಚೇರಿಗೆ ಭೇಟಿ ನೀಡ ಬೇಕಾಗಿತ್ತು. ಆದರೆ ಈಗ ಕಾಬೂಲ್‌ನ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಇ-ವೀಸಾ ಸೌಲಭ್ಯ ಕಲ್ಪಿಸಲು ಸರಕಾರ ನಿರ್ಧರಿಸಿದೆ.
ಪರಿಶೀಲನೆ ಬಳಿಕವೇ ವೀಸಾ :
ಎಲ್ಲ ಅಘ್ಗನ್ನರೂ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ದಿಲ್ಲಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಯಾರಿಗೆ ವೀಸಾ ನೀಡಬಹುದು ಎಂದು ನಿರ್ಧರಿಸ ಲಾಗುತ್ತದೆ. ಆರಂಭದಲ್ಲಿ 6 ತಿಂಗಳ ಮಟ್ಟಿಗೆ ವೀಸಾ ನೀಡ ಲಾಗುತ್ತದೆ. ಸಲ್ಲಿಸಬೇಕಾದ ದಾಖಲೆ ಗಳ ವಿವರವನ್ನು ಸದ್ಯವೇ ಅಪ್‌ಲೋಡ್ ಮಾಡಲಾಗುತ್ತದೆ.
ಮೋದಿ ತುರ್ತು ಸಭೆ :
ಮಂಗಳವಾರ ಸಂಜೆ ಪ್ರಧಾನಿ ಮೋದಿ ಸಂಪುಟ ಸಮಿತಿಯೊಂದಿಗೆ ಉನ್ನತ ಸಭೆ ನಡೆಸಿದ್ದಾರೆ. ಅಫ್ಘಾನ್ ಪರಿಸ್ಥಿತಿ ಚರ್ಚಿಸಲಾಗಿದ್ದು, ಗೃಹ ಸಚಿವ ಅಮಿತ್ ಶಾ, ರಕ್ಷಣ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಾಷ್ಟ್ರೀಯ ಭದ್ರತ ಸಲಹೆಗಾರ ಅಜಿತ್ ದೋವಲ್ ಭಾಗಿಯಾಗಿದ್ದರು.
ಕಾಬೂಲ್ ಹಾಗೂ ಇತರ ನಗರ ಗಳಿಗೆ ಎಷ್ಟು ಬೇಕಾ ದರೂ ವಿಮಾನಗಳನ್ನು ಕಳುಹಿಸಿ ಅಲ್ಲಿರುವ ಎಲ್ಲ ಭಾರತೀಯರನ್ನು ಕರೆತನ್ನಿ ಎಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ.
ಅಫ್ಘಾನ್‌ನಲ್ಲಿ ರಾಜ್ಯದ ನಾಗರಿಕರು ತೊಂದರೆಗೆ ಸಿಲುಕಿ ದ್ದಾರೆಯೇ ಅಥವಾ ರಾಜ್ಯದಲ್ಲಿರುವ ಅಫ್ಘಾನ್ ಪ್ರಜೆಗಳಿಗೆ ಸಮಸ್ಯೆ ಇದೆಯೇ ಎನ್ನುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. ನಮ್ಮ ರಾಜ್ಯ ದವರು ತೊಂದರೆಗೆ ಸಿಲುಕಿದ್ದರೆ ಅವ ರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಪಡೆಯಲು ಸೂಚಿಸಲಾಗುವುದು.– ಅರಗ ಜ್ಞಾನೇಂದ್ರ, ಗೃಹ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.