ಮಕ್ಕಳ ಮೇಲಿನ ದೌರ್ಜನ್ಯ ತಡೆ: ಇಂಟರ್‌ಪೋಲ್ ನೆರವು
ಇಂಟರ್‌ಪೋಲ್ ಐಸಿಎಸ್‌ಇ ಮಾಹಿತಿಗಳಿಗೆ ನೇರಪ್ರವೇಶ ಪಡೆದ 68ನೇ ದೇಶ ಭಾರತ
Team Udayavani, Jul 13, 2022, 6:35 AM IST
ಹೊಸದಿಲ್ಲಿ: ಭಾರತದ ಕೇಂದ್ರ ಗುಪ್ತಚರ ಸಂಸ್ಥೆ ಸಿಬಿಐಗೆ ಪ್ರಬಲ ಅಸ್ತ್ರವೊಂದು ದೊರೆತಿದೆ. ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯಗಳನ್ನು ತಡೆಯುವ ಅದರ ಹೋರಾಟಕ್ಕೆ ಮಹತ್ವದ ಬೆಂಬಲ ಇಂಟರ್‌ಪೋಲ್ (ಅಂತರ ರಾಷ್ಟ್ರೀಯ ಗುಪ್ತಚರ ಸಂಸ್ಥೆ) ಕಡೆಯಿಂದ ಲಭಿಸಿದೆ.
ಇಂಟರ್‌ಪೋಲ್‌ನ ಐಸಿಎಸ್‌ಇ ಮಾಹಿತಿಗಳಿಗೆ ಸಿಬಿಐಗೆ ನೇರಪ್ರವೇಶ ಸಿಕ್ಕಿದೆ.
ಇಂಟರ್‌ಪೋಲ್‌ಗಿರುವ 295 ಸದಸ್ಯ ರಾಷ್ಟ್ರಗಳ ಪೈಕಿ ಇಂತಹದ್ದೊಂದು ಅಪರೂಪದ ಅವಕಾಶ ಪಡೆದ ವಿಶ್ವದ 68ನೇ ದೇಶ ಭಾರತ.
ಐಸಿಎಸ್‌ಇ ತನ್ನದೇ ಆದ ವಿಶೇಷ ಸಾಫ್ಟ್ ವೇ ರನ್ನು ಹೊಂದಿದೆ. ಇದರ ಮೂಲಕ ಧ್ವನಿ, ದೃಶ್ಯಗಳ ಕ್ಲಿಪ್ ಗಳನ್ನು ಪಡೆದುಕೊಳ್ಳಬಹುದು. ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಹಲವಾರು ಮೂಲಗಳಿಂದ ಇಂತಹ ಕ್ಲಿಪ್ ಗಳು ಐಸಿಎಸ್‌ಇನಲ್ಲಿ ಸಂಗ್ರಹವಾಗಿರುತ್ತವೆ. ಇಲ್ಲಿಯವರೆಗೆ ಐಸಿಎಸ್‌ಇ ಮೂಲಕ 30,000 ಲೈಂಗಿಕ ಕಿರುಕುಳಕ್ಕೊಳಗಾದ ಮಕ್ಕಳನ್ನು, 13,000 ಅಪರಾಧಿಗಳನ್ನು ಪತ್ತೆ ಹಚ್ಚಲಾಗಿದೆ.
ಇಲ್ಲಿ ದೊರೆಯುವ ಚಿತ್ರಗಳು, ವಿಡಿಯೊಗಳ ಮೂಲಕ ತನಿಖಾಧಿಕಾರಿಗಳು ಅಪರಾಧಿಗಳನ್ನು ಪತ್ತೆ ಮಾಡಲು ಸಾಧ್ಯವಿದೆ. ಭಾರತೀಯ ಪೊಲೀಸರಿಗೂ ಇದರಿಂದ ಲಾಭ ವಾಗಲಿದೆ. ತೀರಾ ವಿಕೃತ, ಸವಾಲಿನ ಪ್ರಕರಣಗಳಲ್ಲಿ ಸಿಬಿಐ ಮೂಲಕ ಪೊಲೀಸರು ಸುಳಿವುಗಳನ್ನು ಪಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.