ಸ್ವದೇಶಿ ಹಿಂಗು ಕ್ರಾಂತಿ
Team Udayavani, Oct 21, 2020, 6:01 AM IST
ಒಗ್ಗರಣೆಗೆ ಹಿಂಗು ಬೀಳದೆ, ಭಾರತೀಯರ ಅಡುಗೆ ರುಚಿಸದು. ಜಸ್ಟ್ “ಚಿಟಕಿ’ಯಲ್ಲಿ ಪವಾಡರುಚಿ ಹೆಚ್ಚಿಸುವ ಈ ಜನಪ್ರಿಯ ಮಸಾಲ ಪದಾರ್ಥವನ್ನು ಭಾರತ ಇದುವರೆಗೂ ಬೆಳೆದಿರಲಿಲ್ಲ. ಇದೇ ಮೊದಲ ಬಾರಿಗೆ ಪ್ರಾದೇಶಿಕವಾಗಿ ಹಿಂಗು ಕೃಷಿಗೆ ಚಾಲನೆ ನೀಡುವ ಸಾಹಸ ಹಿಮಾಚಲ ಪ್ರದೇಶದಲ್ಲಿ ಸಾಗಿದೆ…
ಹಿಂಗು “ಕ್ರಾಂತಿ’ ಶುರು!
ಭಾರತದಲ್ಲಿ ಯಾವ ಮಣ್ಣು, ವಾತಾವರಣ ಹಿಂಗು ಬೆಳೆಗೆ ಸೂಕ್ತ ಎನ್ನುವುದರ ಕುರಿತು ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‌ಐಆರ್) 2016ರಿಂದ ಸಂಶೋಧನೆ ಕೈಗೊಂಡಿತ್ತು. ಹಿಮಾಚಲ ಪ್ರದೇಶದ ಲಹೌಲ್- ಸ್ಪಿಟಿ ಪ್ರದೇಶಗಳು, ಲಡಾಖ್‌ನಲ್ಲಿ ಹಿಂಗು ಬೆಳೆಗೆ ಸೂಕ್ತ ವಾತಾವರಣ ಇರುವುದು ದೃಢವಾಗಿದೆ.
ಪ್ರಾಜೆಕ್ಟ್ ಎಲ್ಲಿ? ಹೇಗೆ?
ಹಿಮಾಚಲ ಪ್ರದೇಶದ ಪಾಲಂಪುರದ 5 ಹೆಕ್ಟೇರ್ ಕೃಷಿ ಜಮೀನಿನಲ್ಲಿ ಸಿಎಸ್‌ಐಆರ್ ತಜ್ಞರು ಹಿಂಗು ಕೃಷಿ ಆರಂಭಿಸಿದ್ದಾರೆ. ಮುಂದಿನ ಪ್ರಾಜೆಕ್ಟ್ ಸಿಹ್ಯಾಬ್, ಲಹೌಲ್ ಸ್ಪಿಟಿ, ರಿಬ್ಲಿಂಗ್‌ಗಳಲ್ಲಿ ನಡೆಯಲಿದೆ. ಹಿಂಗು ಫಸಲು ಕೈಗೆ ಬರಲು 5 ವರ್ಷಗಳು ಕಾಯಬೇಕು. ಮುಂದಿನ 3 ವರ್ಷಗಳಲ್ಲಿ 300 ಹೆಕ್ಟೇರ್ ಹಿಂಗು ಕೃಷಿ ಗುರಿ ಹೊಂದಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ 4 ಕೋಟಿ ರೂ. ಅನುದಾನ ಮೀಸಲಿಟ್ಟಿದೆ.
ಭಾರತ ಏಕೆ ಬೆಳೆದಿರಲಿಲ್ಲ?
ಭಾರತದ ವಿಶ್ವದ ನಂ.1 ಹಿಂಗು ಗ್ರಾಹಕ ರಾಷ್ಟ್ರವಾದರೂ, ಆ ಬೆಳೆಗೆ ಸೂಕ್ತ ವಾತಾವರಣ ಇಲ್ಲಿಲ್ಲ. ಶೀತ ಮತ್ತು ನಿರ್ದಿಷ್ಟ ಭೌಗೋಳಿಕ ವಾತಾವರಣದಲ್ಲಿ ಮಾತ್ರವೇ ಹಿಂಗು ಚೆನ್ನಾಗಿ ಬರುತ್ತದೆ.
ಹಿಂಗು ಪೂರೈಕೆ ರಾಷ್ಟ್ರಗಳು
ಭಾರತಕ್ಕೆ ಅತಿಹೆಚ್ಚು ಹಿಂಗು ಪೂರೈಸುವುದು ಆಫ್ಘಾನಿಸ್ತಾನ. ಇರಾನ್, ಉಜ್ಬೇಕಿಸ್ತಾನದಿಂದಲೂ ತರಿಸಿಕೊಳ್ಳುತ್ತೇವೆ.
ಬೇಡಿಕೆ ಹೇಗಿದೆ?
ವಿಶ್ವದ ಶೇ.40ರಷ್ಟು ಹಿಂಗು ಗ್ರಾಹಕರನ್ನು ಭಾರತ ಹೊಂದಿದೆ. ಪ್ರತಿವರ್ಷ 600 ಕೋಟಿ ರೂ. ಮೌಲ್ಯದ 1200 ಮೆಟ್ರಿಕ್ ಟನ್ ಹಿಂಗನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.