![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 25, 2024, 8:45 PM IST
ದೇಹ್ರಿ/ಬಿಕ್ರಮ್: ದಲಿತರು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಗೆ ಕನ್ನ ಹಾಕುತ್ತಿರುವ ಇಂಡಿಯಾ ಒಕ್ಕೂಟವು, ಮುಸ್ಲಿಮರ ಮತಗಳಿಗಾಗಿ ಅವರ ಮುಂದೆ ಮುಜ್ರಾ ನತೃ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಿಹಾರದ ಕಾರಾಕಾಟ ಮತ್ತು ಪಾಟಲಿಪುತ್ರ ಲೋಕಸಭೆ ಕ್ಷೇತ್ರಗಳ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, ಬಿಹಾರವು ಸಾಮಾಜಿಕ ನ್ಯಾಯದ ಹೋರಾಟಕ್ಕೆ ದಿಕ್ಕು ತೋರಿದ ನೆಲ. ಎಸ್‌ಸಿ, ಎಸ್‌ಟಿ, ಒಬಿಸಿಗಳ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವ ಕುತಂತ್ರವನ್ನು ನಾನು ತಡೆಯುತ್ತೇನೆ. ಪ್ರತಿಪಕ್ಷಗಳ ನಾಯಕರು ಗುಲಾಮರಾಗಿ, ಮುಸ್ಲಿಮರ ಮುಂದೆ ಮುಜ್ರಾ ನೃತ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪಂಜಾಬ್, ತೆಲಂಗಾಣ, ತಮಿಳುನಾಡಿನಲ್ಲಿ ಬಿಹಾರದ ವಲಸಿಗರನ್ನು ಅವಮಾನ ಮಾಡಿದರೂ ಪ್ರತಿಪಕ್ಷಗಳ ನಾಯಕರು ಅದನ್ನು ಪ್ರತಿಭಟಿಸುವ ಧೈರ್ಯ ತೋರುವುದಿಲ್ಲ ಎಂದೂ ಆರೋಪಿಸಿದರು.
ಮೋದಿಯವರ ಮುಜ್ರಾ ಹೇಳಿಕೆಗೆ ಕಾಂಗ್ರೆಸ್, ಆರ್‌ಜೆಡಿ, ಎನ್‌ಸಿಪಿ(ಶರದ್‌ಚಂದ್ರ ಪವಾರ್), ಟಿಎಂಸಿ, ಶಿವಸೇನೆ ಉದ್ಧವ್ ಬಣ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕಾಂಗ್ರೆಸ್ ನಾಯಕ ಪವನ್ ಖೇರಾ ಪ್ರತಿಕ್ರಿಯಿಸಿ, “ಮೋದಿಯವರ ಬಾಯಿಯಲ್ಲಿ ಮುಜ್ರಾ ಪದ ಹೊರಬಿದ್ದಿದೆ. ಮೋದಿಯವರೇ ಏನಿದು? ಬಿಸಿಲಲ್ಲಿ ಪ್ರಚಾರ ಮಾಡಿದ್ದು ನಿಮ್ಮ ಮೆದುಳಿನ ಮೇಲೆ ಭಾರೀ ಪರಿಣಾಮ ಬೀರಿದಂತಿದೆ. ಅಮಿತ್ ಶಾ, ನಡ್ಡಾ ಅವರೇ, ಕೂಡಲೇ ಮೋದಿಯವರಿಗೆ ಸ್ವಲ್ಪ ಚಿಕಿತ್ಸೆ ಕೊಡಿಸಿ’ ಎಂದಿದ್ದಾರೆ.
ಇತಿಹಾಸದಲ್ಲೇ ಯಾವ ಪ್ರಧಾನಿಯೂ ಬಳಸದ ಭಾಷೆಯಿದು: ಪ್ರಿಯಾಂಕಾ
ಪ್ರಧಾನಿ ಮೋದಿಯವರ “ಮುಜ್ರಾ ನೃತ್ಯ’ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, “ಭಾರತದ ಇತಿಹಾಸದಲ್ಲೇ ಯಾವ ಪ್ರಧಾನಮಂತ್ರಿಯೂ ಬಳಸದಂಥ ಕೀಳು ಮಟ್ಟದ ಭಾಷೆಯನ್ನು ಮೋದಿಯವರು ಬಳಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಏನಿದು ಮುಜ್ರಾ ನೃತ್ಯ?
ಮುಜ್ರಾ ಎನ್ನುವುದು ಒಂದು ನೃತ್ಯ ಪ್ರಕಾರ. ಭಾರತದಲ್ಲಿ ಮೊಘಲರ ಆಳ್ವಿಕೆ ಸಮಯದಲ್ಲಿ ಇದು ಪ್ರವರ್ಧಮಾನಕ್ಕೆ ಬಂತು. ಮೊಘಲ್ ರಾಜರ ಆಸ್ಥಾನದಲ್ಲಿ ನವಾಬರ ಮುಂದೆ ಯುವತಿಯರ ಸಮೂಹವು ಈ ನೃತ್ಯ ಮಾಡುತ್ತಾ, ಮನರಂಜನೆ ನೀಡುತ್ತಿತ್ತು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.