ಪಾಕ್, ಚೀನ ಕಣ್ತಪ್ಪಿಸಿ ಲಡಾಖ್ ಗೆ ಸೇನೆ ತೆರಳಲು ಭಾರತದಿಂದ ರಹಸ್ಯ ರಸ್ತೆ

ಹೊಸ ರಸ್ತೆಯು ನಿಮು-ಪದಮ್‌ -ದಾರ್ಚಾ ಮಾರ್ಗವಾಗಿ ಸಾಗುತ್ತದೆ.

Team Udayavani, Aug 20, 2020, 8:45 AM IST

ಪಾಕ್, ಚೀನ ಕಣ್ತಪ್ಪಿಸಿ ಲಡಾಖ್ ಗೆ ಸೇನೆ ತೆರಳಲು ಭಾರತದಿಂದ ರಹಸ್ಯ ರಸ್ತೆ

Representative Image

ನವದೆಹಲಿ : ಪಾಕಿಸ್ತಾನ ಹಾಗೂ ಚೀನಾಕ್ಕೆ ಸನಿಹವಾಗಿ ರುವ ಲಡಾಖ್‌ಗೆ ತ್ವರಿತವಾಗಿ ಸೇನೆ ಹಾಗೂ ಸೇನಾ ಸರಂಜಾಮುಗಳನ್ನು ಸಾಗಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಹಿಮಾಚಲ ಪ್ರದೇಶದ ಮನಾಲಿಯಿಂದ ಲಡಾಖ್‌ವರೆಗೆ ಹೆದ್ದಾರಿಯೊಂದನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಲ್ಲದೆ, ದುರ್ಗಮ ಪ್ರದೇಶಗಳಿಂದ ಸಾಗುವ ಈ ರಸ್ತೆಯಲ್ಲಿ ಸಂಚರಿಸುವ ಯಾವುದೇ ಸೇನಾ ವಾಹನದ ಪರಿವೀಕ್ಷಣೆ ನಡೆಸಲು ಪಾಕಿಸ್ತಾನಕ್ಕೆ ಅಥವಾ ಚೀನಾಕ್ಕೆ ಸಾಧ್ಯವಾಗುವುದಿಲ್ಲ.

ಸದ್ಯಕ್ಕೆ ಮನಾಲಿಯಿಂದ ಲಡಾಖ್‌ ಅನ್ನು ಸಂಪರ್ಕಿಸಲು ಈಗಾಗಲೇ ಎರಡು ರಸ್ತೆಗಳಿದ್ದು, ಹೊಸ ರಸ್ತೆ ಅವೆರಡೂ ಸ್ಥಳಗಳನ್ನು ಬೆಸೆಯುವ ಮೂರನೇ ಸಂಪರ್ಕವಾಗಲಿದೆ. ಹೊಸ ರಸ್ತೆಯು ನಿಮು-ಪದಮ್‌ -ದಾರ್ಚಾ ಮಾರ್ಗವಾಗಿ ಸಾಗುತ್ತದೆ. ಮೊದಲಿಗೆ ಮನಾಲಿಯಿಂದ ಲೇಹ್‌ವರೆಗೆ ತಲುಪಿ ಅಲ್ಲಿಂದ ಲಡಾಖ್‌ ಅನ್ನು ಬೆಸೆಯುತ್ತದೆ. ಈಗ ಮನಾಲಿಯಿಂದ ಲಡಾಖ್‌ಗೆ ಹೋಗಲು ಹಿಮಾಚಲ ಪ್ರದೇಶದ ಸರ್ಚುವಿನ ಮೂಲಕ ಅಥವಾ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮೂಲಕ ಸಾಗಬೇಕಿದೆ.

ಈ ಎರಡೂ ರಸ್ತೆಗಳು ತುಂಬಾ ದೂರ ಹಾಗೂ ಪಾಕಿಸ್ತಾನ, ಚೀನಾ ಸೇನೆಗಳಿಂದ  ಪರಿವೀಕ್ಷಣೆಗೊಳ ಪಡಬಹುದಾದ ರಸ್ತೆಗಳು. ಆದರೆ, ಹೊಸ ಮಾರ್ಗದಿಂದ 3ರಿಂದ 4 ಗಂಟೆಗಳ ಸಮಯ ಉಳಿತಾಯವಾಗುತ್ತದಲ್ಲದೆ, ಇಲ್ಲಿ ಓಡಾಡುವ ಸೇನಾ ವಾಹನಗಳ ಮೇಲೆ ದೃಷ್ಟಿ ನೆಡಲು ನೆರೆ ಷ್ಟ್ರಗಳಿಗೆ ಅಸಾಧ್ಯವಾಗಲಿದೆ ಎಂದು ಮೂಲಗಳು ವಿವರಿಸಿವೆ.

ಚೀನಾ ಸವಾಲಿಗೆ ನೌಕಾಪಡೆ ಸನ್ನದ್ಧ: ರಾಜನಾಥ್‌ ಸಿಂಗ್‌

ಭಾರತದ ಕರಾವಳಿಯ ಮೇಲೆ ಚೀನಾದಿಂದ ಯಾವುದೇ ಸಂದರ್ಭದಲ್ಲಿ ಒದಗಬಹುದಾದ ದಾಳಿಗಳು ಹಾಗೂ ಇನ್ನಿತರ ಭದ್ರತಾ ಸವಾಲುಗಳನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ನೌಕಾಪಡೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಸಮಾಧಾನಕರವಾಗಿವೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ.

ನೌಕಾಪಡೆಯ ಕಮಾಂಡರ್‌ಗಳಿಗಾಗಿ ಆಯೋಜಿಸಲಾಗಿರುವ ಮೂರು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು “ದೇಶದ ಸಾಗರ ತೀರಗಳನ್ನು ರಕ್ಷಿಸುವಲ್ಲಿ ನೌಕಾಪಡೆ ಸ್ಮರಣೀಯ ಸೇವೆ ಯನ್ನು ನೀಡಿದೆ.

ಅದಕ್ಕಾಗಿ ದೇಶ ಬಾಂಧವ್ಯರು ನೌಕಾಪಡೆಗೆ ಚಿರಋಣಿಯಾಗಿದ್ದಾರೆ. ಸಾಗರ ತೀರಗಳಲ್ಲಿ ತನ್ನ ನೌಕೆಗಳನ್ನು, ಸಮರ ವಿಮಾನಗಳನ್ನು ನಿಯೋಜಿಸಿ, ಚೀನಾದಿಂದ ಯಾವುದೇ ಕ್ಷಣದಲ್ಲಿ ಎದುರಾಗ ಬ ಹುದಾದ ಸವಾಲನ್ನು ಎದುರಿಸಲು ಸನ್ನದ್ಧವಾಗಿರುವ ಕ್ರಮ ಮೆಚ್ಚು ವಂಥದ್ದು’ ಎಂದರು.

ಲಡಾಖ್‌ ನಲ್ಲಿ ಇತ್ತೀಚೆಗೆ ಭಾರತ-ಚೀನಾ ಸೈನಿಕರು ಮುಖಾಮುಖಿಯಾಗಿದ ನಂತರ, ಎರಡೂ ದೇಶಗಳ ನಡುವೆ ಉಲ್ಪಣಿಸಿರುವ ಬಿಗುವಿನ ವಾತಾವರಣದ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆ, ಚೀನಾಕ್ಕೆ ಹತ್ತಿರವಿರುವ ಭಾರತೀಯ ಕರಾವಳಿಯಲ್ಲಿ ತನ್ನ ಯುದ್ಧ ನೌಕೆಗಳನ್ನು, ಕಾವಲು ನೌಕೆಗಳನ್ನು ಸನ್ನದ್ಧವಾಗಿಸಿಕೊಂಡು ಕಟ್ಟುನಿಟ್ಟಾಗಿ ಕಾಯುತ್ತಿದೆ.

ಟಾಪ್ ನ್ಯೂಸ್

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

CDS ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನಕ್ಕೆ ಮಾನವ ಲೋಪವೇ ಕಾರಣ: ವರದಿ

Human Error: ಮಾನವ ಲೋಪದಿಂದಲೇ CDS ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ: ವರದಿ

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

20-

Burhan Wani; ಬುರ್ಹಾನ್‌ ವಾನಿ ಅನುಚರ ಸೇರಿ 5 ಉಗ್ರರ ಎನ್‌ಕೌಂಟರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

6

Gangolli-ಕುಂದಾಪುರ ಬಾರ್ಜ್‌ ಕನಸಿಗೆ ತಣ್ಣೀರು

5

Mangaluru: ಮಳೆ ನೀರು ಹರಿಯುವ ಕಾಲುವೆಗೆ ಪೈಪ್‌!

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.