ಪಾಕಿಗಳ ಮಟ್ಟಹಾಕಲು ಶಾಶ್ವತ ಬಂಕರ್; ನುಸುಳುವಿಕೆ, ಕಳ್ಳಸಾಗಣೆ ತಡೆಗೆ ಈ ಕ್ರಮ
ಭಾರತ-ಪಾಕ್ ಗಡಿಯಲ್ಲಿ ನಿರ್ಮಾಣ ಆರಂಭ
Team Udayavani, Jan 3, 2023, 7:25 AM IST
ನವದೆಹಲಿ: ಗುಜರಾತ್ನಲ್ಲಿರುವ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಮೀನುಗಾರರ ಒಳನುಸುಳುವಿಕೆ ಮಟ್ಟಹಾಕಲು, ಭಾರತೀಯ ಗಡಿ ಭದ್ರತಾ ಪಡೆಗಳ ನಿಯೋಜನೆಗೆ ಕೇಂದ್ರಸರ್ಕಾರ ಸಜ್ಜಾಗಿದ್ದು, ಇದೇ ಮೊದಲ ಬಾರಿಗೆ ಗುಜರಾತ್ನ ಅಂತಾರಾಷ್ಟ್ರೀಯ ಗಡಿಯಲ್ಲಿ ಶಾಶ್ವತ ಬಂಕರ್ಗಳನ್ನು ನಿರ್ಮಿಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭುಜ್ ಸೆಕ್ಟರ್ನ ಸರ್ ಕ್ರೀಕ್ ಹಾಗೂ ಹರಾಮಿನಲ್ಲಾ ಏರಿಯಾಗಳಲ್ಲಿ ಬಹುಮಹಡಿ ಬಂಕರ್ಗಳ ನಿರ್ಮಾಣ ಮಾಡಲಾಗುತ್ತಿದ್ದು, ಇವು ಗಡಿಯಲ್ಲಿನ ಚಲನವಲನ ಗಮನಿಸುವ ವೀಕ್ಷಣಾ ಪೋಸ್ಟ್ಗಳಾಗಿಯೂ ಕಾರ್ಯನಿರ್ವಹಿಸಲಿವೆ ಎಂದು ತಿಳಿದುಬಂದಿದೆ. ಶಾಶ್ವತ ಬಂಕರ್ಗಳ ನಿರ್ಮಾಣಕ್ಕಾಗಿ ಕೇಂದ್ರ ಗೃಹ ಸಚಿವಾಲಯವು 50 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಗಡಿಯಲ್ಲಿ ನಡೆಯುತ್ತಿರುವ ಅಕ್ರಮ ಒಳನುಸುಳುವಿಕೆ, ಮಾದಕ ವಸ್ತುಗಳ ಕಳ್ಳ ಸಾಗಣೆ ಪ್ರಕರಣಗಳಿಗೆ ಈ ಮೂಲಕ ಕಡಿವಾಣ ಬೀಳಲಿದೆ ಎನ್ನಲಾಗಿದೆ.
ಸರ್ಕ್ರೀಕ್ನಲ್ಲಿ ನಿರ್ಮಾಣವಾಗುತ್ತಿರುವ 3 ಬಂಕರ್ಗಳ ವ್ಯಾಪ್ತಿ – 4,050 ಚದರ ಕಿ.ಮೀ
ಬಂಕರ್ಗಳ ಎತ್ತರ – 42 ಅಡಿ
ಗಡಿಯಲ್ಲಿ ನಿರ್ಮಾಣವಾಗಲಿರುವ ಒಟ್ಟು ಬಂಕರ್ಗಳು- 8
ಹರಾಮಿನಲ್ಲಾದಲ್ಲಿ ನಿರ್ಮಾಣವಾಗಲಿರುವ ಬಂಕರ್ಗಳು- 4
ಎಷ್ಟು ಸಶಸ್ತ್ರ ಬಿಎಸ್ಎಫ್ ಯೋಧರು ಇಲ್ಲಿರಬಹುದು?- 15
ಎಷ್ಟು ಮಹಡಿಗಳಿರುತ್ತವೆ?- 3
ಬಂಕರ್ ನಿರ್ಮಾಣಕ್ಕೆ ಸರ್ಕಾರ ಮಂಜೂರು ಮಾಡಿದ ಮೊತ್ತ- 50 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Verdict: ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ… ಆರೋಪಿ ಸಂಜಯ್ ರಾಯ್ ದೋಷಿ
Suffocation: ಚಳಿಗೆಂದು ಹಾಕಿದ ಬೆಂಕಿ… ಬೆಳಗಾಗುವಷ್ಟರಲ್ಲಿ ದಂಪತಿಯ ಜೀವವೇ ಹೋಗಿತ್ತು…
IMF; ಜಗತ್ತಿಗೆ ಆರ್ಥಿಕ ಹಿಂಜರಿತ ಉಂಟಾದರೂ, ಭಾರತಕ್ಕೆ ಅಪಾಯ ಇಲ್ಲ
Russia ಸೇನೆಯಲ್ಲಿದ್ದ 16 ಭಾರತೀಯರು ನಾಪತ್ತೆ, 12 ಜನ ಸಾವು: ಕೇಂದ್ರ
ಬಾಲ್ಯ ವಿವಾಹ ಕಾನೂನು ಪರಿಶೀಲನೆ: ಸುಪ್ರೀಂ ಅಸ್ತು
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.