ಚೀನದ ವಿರುದ್ಧ ಈಗ ಜಲ ಸಮರ
ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ನಿರ್ಮಿಸಿ ಸಡ್ಡು ಹೊಡೆಯಲು ಮುಂದಾದ ಭಾರತ
Team Udayavani, Dec 2, 2020, 6:21 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಮುಂದಾಗಿರುವ ಚೀನಕ್ಕೆ ತಕ್ಕ ಪಾಠ ಕಲಿಸಲು ಭಾರತ ಸಜ್ಜಾಗಿದೆ. ಅರುಣಾಚಲ ಪ್ರದೇಶದಲ್ಲಿ ಇದೇ ನದಿಗೆ 10 ಗಿಗಾವ್ಯಾಟ್ ಜಲವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಅಣೆಕಟ್ಟು ನಿರ್ಮಿಲು ಭಾರತವೂ ತಯಾರಿ ನಡೆಸುತ್ತಿದೆ.
ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ನಿರ್ಮಾಣ ಮಾಡಲು ಚೀನ ಸಿದ್ಧತೆ ನಡೆಸಿದೆ. ಈ ಅಣೆಕಟ್ಟು ನಿರ್ಮಾಣವಾದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೂ ಆಕ್ಷೇಪಗಳನ್ನು ಬದಿಗೊತ್ತಿ ಅಣೆಕಟ್ಟು ನಿರ್ಮಿಸಲು ಚೀನ ಮುಂದಾಗಿದೆ. ಭಾರತ ಅದಕ್ಕೆ ತಕ್ಕ ಪಾಠ ಕಲಿಸಲು ತಯಾರಿ ನಡೆಸಿದೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ಆಯುಕ್ತ ಟಿ.ಎಸ್. ಮಿಶ್ರಾ ಹೇಳಿದ್ದಾರೆ.
ಅಣೆಕಟ್ಟು ನಿರ್ಮಾಣಕ್ಕೆ ಚೀನ ಮುಂದಾಗಿರುವುದರಿಂದ ನಾವೂ ದೊಡ್ಡದಾದ ಅಣೆಕಟ್ಟು ನಿರ್ಮಾಣ ಮಾಡಲೇಬೇಕು. ಇಲ್ಲದಿದ್ದರೆ ಭಾರತಕ್ಕೆ ಅಪಾಯ ಹೆಚ್ಚು ಎಂದು ಮಿಶ್ರಾ ತಿಳಿಸಿದ್ದಾರೆ.
ಬ್ರಹ್ಮಪುತ್ರಾ ನದಿಗೆ ಚೀನದಲ್ಲಿ ಯರ್ಲುಂಗ್ ಸ್ಯಾಂಗ್ದೋ ಎನ್ನಲಾಗುತ್ತದೆ. ಇದು ಟಿಬೆಟ್‌ನಲ್ಲಿ ಹುಟ್ಟಿ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಮೂಲಕ ಹರಿದು, ಬಾಂಗ್ಲಾ ಸೇರುತ್ತದೆ. ಚೀನ ಈ ಅಣೆಕಟ್ಟು ನಿರ್ಮಾಣ ಮಾಡಿದರೆ ಭಾರತಕ್ಕೆ ದಿಢೀರ್ ಪ್ರವಾಹದಂಥ ಅಪಾಯಗಳು ಉಂಟಾಗುತ್ತವೆ ಎಂಬುದು ಮಿಶ್ರಾ ಅವರ ಹೇಳಿಕೆ.
ಕೇಂದ್ರಕ್ಕೆ ಪ್ರಸ್ತಾವ
ಡ್ಯಾಂ ನಿರ್ಮಾಣ ಕುರಿತ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಸರಕಾರ ಅತೀ ಆದ್ಯತೆ ಮೇರೆಗೆ ಪ್ರಸ್ತಾವವನ್ನು ಪರಿಶೀಲಿಸಿದೆ ಎಂದು ಟಿ.ಎಸ್. ಮಿಶ್ರಾ ಹೇಳಿದ್ದಾರೆ. ಡ್ಯಾಂ ನಿರ್ಮಿಸುವ ಚೀನ ಮತ್ತು ಭಾರತದ ಪ್ರಸ್ತಾವನೆಯಿಂದಾಗಿ ಹೊಸ ವಿವಾದ ಆರಂಭವಾಗಬಹುದು ಎಂಬುದು ತಜ್ಞರ ಆತಂಕ. ಸದ್ಯ ಎರಡೂ ದೇಶಗಳ ವೈಮನಸ್ಸಿಗೆ ಲಡಾಖ್ ಕೇಂದ್ರ ಬಿಂದುವಾಗಿದೆ. ಮುಂದೆ ಈ ಡ್ಯಾಂ ನಿರ್ಮಾಣ ವಿಚಾರವೇ ಕೇಂದ್ರಬಿಂದು ಆಗ
ಬಹುದು ಎಂದಿದ್ದಾರೆ.
ಚೀನಕ್ಕೆ ಚಳಿ ಕಾಟ
ಲಡಾಖ್ ಘರ್ಷಣೆಯ ಅನಂತರ ಭಾರತ ಮತ್ತು ಚೀನದ ಸೇನೆಗಳು ಅಲ್ಲೇ ನೆಲೆಯೂರಿವೆ. ಆದರೆ ಸದ್ಯ ಚಳಿಗಾಲ ಚೀನದ ಸೈನಿಕರನ್ನು ಹೆಚ್ಚು ಬಾಧಿಸುತ್ತಿದೆ. ಹೀಗಾಗಿ ಅಲ್ಲಿರುವ ಚೀನದ ಸೈನಿಕರನ್ನು ಪ್ರತಿದಿನವೂ ಬದಲಾವಣೆ ಮಾಡಲಾಗುತ್ತಿದೆ ಎಂದು ಭಾರತ ಸೇನೆಯ ಮೂಲಗಳು ತಿಳಿಸಿವೆ. ಆದರೆ ಭಾರತೀಯ ಸೈನಿಕರು ವಿಶೇಷ ತರಬೇತಿ ಹೊಂದಿದ್ದಾರೆ, ಅಲ್ಲದೆ ಬೆಚ್ಚಗಿನ ಟೆಂಟ್‌ಗಳೂ ಇವೆ. ಹೀಗಾಗಿ ಭಾರತದ ಯೋಧರು ದೀರ್ಘಾವಧಿ ವರೆಗೆ ಮುಂಚೂಣಿ ನೆಲೆಯಲ್ಲೇ ಗಸ್ತು ಕಾಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
Maha Election: ಡಿಕೆಶಿ ಸೇರಿ ಕಾಂಗ್ರೆಸ್ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.