ಭಾರತ-ಇಸ್ರೇಲ್ ನಡುವಿನ ಕ್ಷಿಪಣಿ ಒಪ್ಪಂದ ರದ್ದು
Team Udayavani, Jan 4, 2018, 6:50 AM IST
ಹೊಸದಿಲ್ಲಿ: ಇಸ್ರೇಲ್‌ನಿಂದ 1600 ಕ್ಷಿಪಣಿಗಳನ್ನು ಖರೀದಿ ಸುವ 3,250 ಕೋಟಿ ರೂ. ಮೊತ್ತದ ಒಪ್ಪಂದವನ್ನು ಭಾರತ ರದ್ದುಗೊಳಿಸಿದೆ. ಇಸ್ರೇಲ್ ರಫೇಲ್ ಅಡ್ವಾನ್ಸ್‌ಡ್ ಡಿಫೆನ್ಸ್ ಸಿಸ್ಟಮ್ಸ್‌ನಿಂದ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಕೆಲವು ತಿಂಗಳ ಹಿಂದೆಯೇ ರಕ್ಷಣಾ ಇಲಾಖೆ ಈ ರದ್ದತಿಯ ಬಗ್ಗೆ ನಿರ್ಧರಿಸಿತ್ತಾದರೂ, ಕಳೆದ ವಾರವಷ್ಟೇ ಇದನ್ನು ಘೋಷಿಸಲಾಗಿದೆ. ಸ್ಪೈಕ್ ಕ್ಷಿಪಣಿಗಳನ್ನು ತ್ವರಿತವಾಗಿ ಫಿರಂಗಿಯನ್ನು ಗುರಿಯಿಟ್ಟು ಉಡಾಯಿಸಬಹುದಾಗಿದೆ. 2014ರಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆಗ ಅಮೆರಿಕ ಜಾವೆಲಿನ್ ಕ್ಷಿಪಣಿಗಳನ್ನು ಒದಗಿಸುವುದಾಗಿ ಹೇಳಿತ್ತಾದರೂ, ಹೆಚ್ಚು ಶಕ್ತಿಶಾಲಿಯಾದ ಸ್ಪೈಕ್‌ಗೆ ಆರ್ಡರ್ ಮಾಡಲಾಗಿತ್ತು. ಅಷ್ಟೇ ಅಲ್ಲ, ಹೈದರಾಬಾದ್‌ನಲ್ಲಿ ಈ ಸಂಬಂಧ ಕಲ್ಯಾಣಿ ಗ್ರೂಪ್ ಸಹಭಾಗಿತ್ವದಲ್ಲಿ ಉತ್ಪಾದನಾ ಘಟಕವೂ ನಿರ್ಮಾಣ ವಾಗಿತ್ತು. ಆದರೆ ಈ ಮಧ್ಯೆ ಡಿಆರ್‌ಡಿಒ ಅತ್ಯಾಧುನಿಕ ಕ್ಷಿಪಣಿಯನ್ನು ನಾಲ್ಕು ವರ್ಷಗಳಲ್ಲಿ ಉತ್ಪಾದಿಸುವುದಾಗಿ ಭರವಸೆ ನೀಡಿದ್ದರಿಂದ ಈ ಒಪ್ಪಂದ ರದ್ದುಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
MUST WATCH
ಹೊಸ ಸೇರ್ಪಡೆ
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.