ಅಪ್ರಾಯೋಗಿಕ ನಾಯಕತ್ವದಿಂದ ದೇಶ ನಡೆಸಲಾಗದು : ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ
Team Udayavani, Apr 9, 2019, 11:17 AM IST
ಹೊಸದಿಲ್ಲಿ : ಸದಾಕಾಲ ಹೆಚ್ಚುತ್ತಲೇ ಇರುವ ಜನರ ನಿರೀಕ್ಷೆಗಳು, ಬೇಡಿಕೆಗಳು ಮತ್ತು ಆಶೋತ್ತರಗಳನ್ನು ಈಡೇರಿಸಲು ಶ್ರಮಿಸುವ ಜನ ನಾಯಕ ಇಂದು ದೇಶಕ್ಕೆ ಬೇಕಾಗಿದೆ ಎಂದು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದ್ದಾರೆ.
ಅಸಾಧ್ಯವಾದದ್ದನ್ನು, ಅಪ್ರಾಯೋಗಿಕವಾಗಿರುವುದನ್ನು ಸಾಧಿಸಿ ತೋರುವುದಾಗಿ ಕೊಚ್ಚಿಕೊಳ್ಳುವ ಕ್ವಿಕ್ಸಾಟಿಕ್ ಹಿರೋಯಿಸಂ ನಿಂದ ದೇಶವನ್ನು ನಡೆಸಲಾಗದು ಎಂದವರು ಹೇಳಿದರು.
ಎಐಎಂಎ ಮ್ಯಾನೇಜಿಂಗ್ ಇಂಡಿಯ ಅವಾರ್ಡ್ ಸಮಾರಂಭದಲ್ಲಿ ಕಾರ್ಪೊರೇಟ್‌ಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು “ದೇಶದಲ್ಲಿನ ಬಡತನ ಸಂಪೂರ್ಣವಾಗಿ ತೊಲಗುವುದಕ್ಕೆ ಇನ್ನೂ ದೀರ್ಘವಾದ ಹಾದಿಯನ್ನು ಸವೆಸಬೇಕಾಗಿರುವುದರಿಂದ ದೇಶಕ್ಕೆ ಜನರಿಗಾಗಿ ಶ್ರಮಿಸುವ ಮತ್ತು ಅವರ ಸದಾ ಕಾಲ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸುವ ನಾಯಕತ್ವ ಬೇಕಾಗಿದೆ’ ಎಂದು ಹೇಳಿದರು.
ದೇಶದ ಕೇವಲ ಶೇ.1ರಷ್ಟು ಜನರು ದೇಶದ ಒಟ್ಟು ಸಂಪತ್ತಿನ ಶೇ.60ರಷ್ಟನ್ನು ನಿಯಂತ್ರಿಸುತ್ತಿದ್ದಾರೆ ಎಂಬ ಸತ್ಯಾಂಶದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಪ್ರಣವ್, ದೇಶದಲ್ಲಿನ ಬಡತನವನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಪೋರೇಟ್‌ಗಳು ಸರಕಾರದೊಂದಿಗೆ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…