ಇನ್ನೊಂದು ಡೋಕ್ಲಾಂ ಸಂಘರ್ಷ ಉಂಟಾಗದು: ಚೀನ ರಾಯಭಾರಿ
Team Udayavani, Jun 19, 2018, 10:52 AM IST
ಹೊಸದಿಲ್ಲಿ: ಭಾರತ ಮತ್ತು ಚೀನದ ಸಂಬಂಧವು ಇನ್ನೊಂದು ಡೋಕ್ಲಾಂ ಸಂಘರ್ಷದ ಹೊರೆ ಹೊರುವುದು ಅಸಾಧ್ಯ ಎಂದು ಎಂದು ಭಾರತದಲ್ಲಿನ ಚೀನ ರಾಯಭಾರಿ ಲುವೊ ಝಾವೋಯಿ ಹೇಳಿದ್ದಾರೆ.
ವಿಶೇಷ ಪ್ರತಿನಿಧಿಗಳ ಸಭೆಯ ಮೂಲಕ ಗಡಿ ಸಮಸ್ಯೆಗೆ ಪರಸ್ಪರ ಸಮ್ಮತಿಯ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಕೆಲವು ಭಾರತೀಯ ಸ್ನೇಹಿತರು ಭಾರತ, ಚೀನ ಮತ್ತು ಪಾಕಿಸ್ಥಾನದ ತ್ರಿಪಕ್ಷೀಯ ಮಾತುಕತೆಗೆ ಸಲಹೆ ನೀಡಿದ್ದಾರೆ. ಇದು ಉತ್ತಮ ಕಲ್ಪನೆ ಎಂದೂ ಅವರು ಹೇಳಿದ್ದಾರೆ. ಭಿನ್ನಾಭಿಪ್ರಾಯಗಳು ಸಹಜ. ಆದರೆ ಅವುಗಳನ್ನು ಸಹಕಾರದಿಂದ ನಿಯಂತ್ರಣ ಮತ್ತು ನಿರ್ವಹಣೆ ಮಾಡಬೇಕು ಎಂದಿದ್ದಾರೆ.
ಕಳೆದ ವರ್ಷ ಚೀನ ಸೇನೆ ಡೋಕ್ಲಾಂ ಗಡಿ ನುಸುಳಿ ಒಳಬಂದಿದ್ದರಿಂದ 73 ದಿನಗಳವರೆಗೆ ಬಿಕ್ಕಟ್ಟು ಉಂಟಾಗಿತ್ತು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಾಗಿದ್ದು, ಆ ನಂತರದಲ್ಲಿ ಹಲವು ಸುತ್ತು ಉಭಯ ದೇಶಗಳ ಮಧ್ಯೆ ಮಾತುಕತೆ ನಡೆದಿದೆ. ಈ ವೇಳೆ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಚೀನ ರದ್ದುಗೊಳಿಸಿದ್ದಲ್ಲದೆ, ಉಭಯ ದೇಶಗಳ ಸೇನಾ ಕವಾಯತು ಕೂಡ ರದ್ದಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai; ಆಸ್ಪತ್ರೆಯಲ್ಲಿ ವೈದ್ಯರಿಗೆ ಮನಬಂದಂತೆ ಇರಿದ ರೋಗಿಯ ಪುತ್ರ!!
15 ದಿನ ಮೊದಲು ನೋಟಿಸ್…ಕಟ್ಟಡ ಧ್ವಂಸಕ್ಕೆ ಮಾರ್ಗಸೂಚಿ ಪ್ರಕಟಿಸಿದ ಸುಪ್ರೀಂಕೋರ್ಟ್
Maharashtra; ಉದ್ಧವ್ ಮಾತ್ರವಲ್ಲ ಫಡ್ನವಿಸ್ ಬ್ಯಾಗ್ ಕೂಡ ಚೆಕ್: ಬಿಜೆಪಿಯಿಂದ ವಿಡಿಯೋ
Manipur; ಹಿಂಸಾಚಾರದ ಬಳಿಕ ಕೇಂದ್ರದಿಂದ 20 CAPF ತುಕಡಿಗಳ ರವಾನೆ
ED; ಅಕ್ರಮವಾಗಿ ಒಳನುಸುಳಿದ ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.