ಭಾರತ-ಚೀನಾ ಮಾತುಕತೆ ಮುಕ್ತಾಯ
Team Udayavani, Oct 11, 2021, 6:20 AM IST
ಲಡಾಖ್/ನವದೆಹಲಿ: ಭಾರತ ಮತ್ತು ಚೀನಾ ನಡುವಿನ 13ನೇ ಸುತ್ತಿನ ಸೇನಾಧಿಕಾರಿಗಳ ಮಟ್ಟ ಮಾತುಕತೆ ಭಾನುವಾರ ಲಡಾಖ್ನ ಚೀನಾ ಭಾಗವಾಗಿರುವ ಮೋಲ್ಡೋ ಎಂಬಲ್ಲಿ ನಡೆದಿದೆ.
ಎಂಟು ಗಂಟೆಗಳ ಕಾಲ ನಡೆದ ಮಾತುಕತೆಯಲ್ಲಿ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿನ ಬಿಕ್ಕಟ್ಟಿನ ಬಗ್ಗೆ ಚರ್ಚೆಗಳು ನಡೆದಿವೆ ಮತ್ತು ಕ್ಷಿಪ್ರವಾಗಿ ಸೇನೆ ವಾಪಸ್ ಪಡೆಯಬೇಕು ಎಂಬ ಬಗ್ಗೆ ಚೀನಾಕ್ಕೆ ಮನವರಿಕೆ ಮಾಡಿಕೊಡಲಾಗಿದೆ.
ವಿಶೇಷವಾಗಿ ಪಟ್ರೋಲಿಂಗ್ ಪಾಯಿಂಟ್ 15ರಿಂದ ಸೇನೆ ಹಿಂಪಡೆಯುವ ಬಗ್ಗೆ ಅಧಿಕಾರಿಗಳು ಚರ್ಚಿಸಿದ್ದಾರೆ. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಲಾಗಿಲ್ಲ.
ಬೆಳಗ್ಗೆ 10.30ಕ್ಕೆ ಶುರುವಾದ ಮಾತುಕತೆ ರಾತ್ರಿ 7 ಗಂಟೆಗೆ ಮುಕ್ತಾಯವಾಗಿದೆ. ಮುಂಚೂಣಿ ನೆಲೆಗಳಿಂದ ಎರಡೂ ದೇಶಗಳ ಸೇನೆಗಳನ್ನು ವಾಪಸ್ ಕರೆಯಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆದಿವೆ.
ಇದನ್ನೂ ಓದಿ:ಬ್ಯೂಟಿಫುಲ್ ತಾಜ್ಮಹಲ್ ಎಂದ ಡೆನ್ಮಾರ್ಕ್ ಪ್ರಧಾನಮಂತ್ರಿ ಮೆಟೆ ಫ್ರೆಡ್ರಿಕ್ಸನ್
ಈ ಮಾತುಕತೆಗೂ ಮುನ್ನ ಕಳೆದ ವಾರ ಚೀನಾದ 200 ಮಂದಿ ಯೋಧರು ಅರುಣಾಚಲ ಪ್ರದೇಶದ ತವಾಂಗ್ಗೆ ಅಕ್ರಮವಾಗಿ ಪ್ರವೇಶಿಸಿ, ದೇಶದ ಯೋಧರು ನಿರ್ಮಿಸಿದ್ದ ಬಂಕರ್ ಮತ್ತು ಇತರ ಕಾಮಗಾರಿಗಳನ್ನು ಪರೀಕ್ಷಿಸಿದ್ದರು. ಕೆಲ ಹೊತ್ತಿನ ಕಾಲ ಚೀನಾ ಯೋಧರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.