ಭಾರತ-ಚೀನ ಮುಖಾಮುಖಿ; ಇದಿರೇಟು ನೀಡಲು ಭಾರತ ಸರ್ವಸನ್ನದ್ಧ
Team Udayavani, Sep 13, 2020, 6:20 AM IST
ಹೊಸದಿಲ್ಲಿ: ಶಾಂತಿ ಮಂತ್ರ ಪಠಿಸುತ್ತಲೇ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡುತ್ತಿರುವ ಚೀನವು ಮತ್ತೆ ತನ್ನ ಕೆಟ್ಟ ಚಾಳಿ ಮುಂದುವರಿಸಿದೆ. ಲಡಾಖ್ ಸನಿಹದ ಪ್ಯಾಂಗಾಂಗ್ ತ್ಸೋನ ದಕ್ಷಿಣ ಭಾಗದಲ್ಲಿರುವ ಸ್ಪ್ಯಾಂಗ್ಗರ್ ಗ್ಯಾಪ್ ಬಳಿ ಚೀನದ ಸಾವಿರಾರು ಸೈನಿಕರು ಟ್ಯಾಂಕರ್‌ಗಳು ಮತ್ತು ಹೋವಿಟ್ಜರ್‌ಗಳೊಂದಿಗೆ ಜಮಾಯಿಸಿದ್ದಾರೆ. ಈ ಮೂಲಕ ಎರಡೂ ಸೇನೆಗಳು ಮುಖಾಮುಖಿಯಾಗಿ ನಿಂತು ಯುದ್ಧ ಮಾಡುವಷ್ಟು ಸನಿಹಕ್ಕೆ ಬಂದಿವೆ.
ಈ ಬೆಳವಣಿಗೆಗಳ ಬೆನ್ನಲ್ಲೇ ಭಾರತೀಯ ಸೇನೆಯೂ ತೀವ್ರ ಕಟ್ಟೆಚ್ಚರ ವಹಿಸಿದೆ. ಚೀನದ ಸೈನಿಕರು ಗಡಿಯ ಸನಿಹಕ್ಕೆ ಬರುತ್ತಿದ್ದಂತೆ ಭಾರತೀಯ ಯೋಧರೂ ಶಸ್ತ್ರಾಸ್ತ್ರ ಗಳೊಂದಿಗೆ ಗಡಿಯತ್ತ ಧಾವಿಸಿದ್ದಾರೆ. ಚೀನದ ಸೇನೆಯ ಅಟಾಟೋಪ ಎದುರಿಸಲು ಸೇನೆಯೂ ಸರ್ವರೀತಿಯಲ್ಲೂ ಸನ್ನದ್ಧವಾಗಿ ನಿಂತಿದೆ ಎಂದು ಸರಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಒಂದು ಆಂಗ್ಲ ವೆಬ್‌ಸೈಟ್ ವರದಿ ಮಾಡಿದೆ.
ಮೂಲಗಳ ಪ್ರಕಾರ ಚೀನದ ಮಿಲಿಶಿಯಾ ಸ್ಕ್ವಾಡ್ ಈ ಭಾಗಕ್ಕೆ ಬಂದಿದೆ. ಇದರಲ್ಲಿ ಪರ್ವತಾರೋಹಿಗಳು, ಬಾಕ್ಸರ್‌ಗಳು, ಸ್ಥಳೀಯ ಸಮರ ಕ್ಲಬ್‌ನ ಸದಸ್ಯರು ಮತ್ತು ಇತರ ಸಿಬಂದಿ ಇರುತ್ತಾರೆ. ಈ ಸ್ಕ್ವಾಡ್ ಅನ್ನು ಚೀನ ಸೇನೆಯ ನೆರವಿಗಾಗಿ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಪಹರಣ: ಗ್ಲೋಬಲ್ ಟೈಮ್ಸ್ ಧಿಮಾಕು
ಅರುಣಾಚಲ ಪ್ರದೇಶದ ಐವರು ಯುವಕರ ಅಪಹರಣ ಪ್ರಕರಣದ ಬೆನ್ನಲ್ಲೇ ಕಳೆದ ಸೋಮವಾರ ಚೀನ ಸರಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಅರುಣಾಚಲ ಪ್ರದೇಶ ಸಂಬಂಧ ಉದ್ಧಟತನ ಮೆರೆದಿತ್ತು. ಇದುವರೆಗೆ ಚೀನವು ಈ ರಾಜ್ಯಭಾರತದ್ದು ಎಂದು ಗುರುತಿಸಿಯೇ ಇಲ್ಲ ಎಂದಿತ್ತು. ಅದು ಟಿಬೆಟ್‌ನ ಮತ್ತೂಂದು ಭಾಗ ಎಂದೇ ನಂಬಿದ್ದೇವೆ ಎಂದು ಬರೆದು ಭಾರತೀಯ ಸಾರ್ವಭೌಮತೆ ವಿಚಾರದಲ್ಲಿ ಮೂಗುತೂರಿಸಿತ್ತು.
ಈ ಉದ್ಧಟತನದ ನಡುವೆಯೇ ಚೀನವು ಸದ್ದಿಲ್ಲದೆ ಭಾರತದ ಯುವಕರನ್ನು ಬಿಡುಗಡೆ ಮಾಡಿದೆ. ಮಾಲ್ಡೀವ್ಸ್ ಜತೆ ಅಮೆರಿಕ ಒಪ್ಪಂದ
ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನದ ಪ್ರಭಾವವನ್ನು ತಗ್ಗಿಸುವ ಉದ್ದೇಶದಿಂದ ಅಮೆರಿಕ ಸರಕಾರವು ಮಾಲ್ಡೀವ್ಸ್ ಜತೆಗೆ ರಕ್ಷಣಾತ್ಮಕ ಒಪ್ಪಂದಗಳಿಗೆ ಸಹಿ ಹಾಕಿದೆ. ಅಮೆರಿಕದ ಈ ನಡೆಯು ಭಾರತಕ್ಕೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.