![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 13, 2022, 6:35 AM IST
ಆತ್ಮನಿರ್ಭರ ಭಾರತ ನಿರ್ಮಾಣದ ನಿಟ್ಟಿನಲ್ಲಿ ಮತ್ತೂಂದು ಪ್ರಮುಖ ಹೆಜ್ಜೆ ಎಂಬಂತೆ “ಅಸ್ತ್ರ’ ಸರಣಿಯ ಎರಡು ಸುಧಾರಿತ ಆವೃತ್ತಿಗಳಾದ ಅಸ್ತ್ರ ಎಂಕೆ-2 ಮತ್ತು ಎಂಕೆ-3 ಕ್ಷಿಪಣಿಗಳನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸುತ್ತಿದೆ. ಅವುಗಳ ಪ್ರಾಯೋಗಿಕ ಪರೀಕ್ಷೆ ಕ್ರಮವಾಗಿ ಮುಂದಿನ ವರ್ಷ ಮತ್ತು 2024ರಲ್ಲಿ ನಡೆಯಲಿದೆ.
2,971 ಕೋಟಿ ರೂ. ಒಪ್ಪಂದ
ಭಾರತೀಯ ವಾಯುಪಡೆ ಮತ್ತು ನೌಕಾ ಪಡೆಗೆ ಅಸ್ತ್ರ ಎಂಕೆ-1 ಕ್ಷಿಪಣಿಯನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮೇ 31ರಂದು ರಕ್ಷಣ ಇಲಾಖೆಯು ಭಾರತ್ ಡೈನಾಮಿಕ್ಸ್ ಲಿ.(ಬಿಡಿಎಲ್)ನೊಂದಿಗೆ 2,971 ಕೋಟಿ ರೂ. ಮೊತ್ತದ ಒಪ್ಪಂದ ಮಾಡಿಕೊಂಡಿದೆ.
ಹೆಚ್ಚಲಿದೆ ಸಾಮರ್ಥ್ಯ
ಅಸ್ತ್ರ ಎಂಕೆ-1 ಕ್ಷಿಪಣಿಯನ್ನು ಸುಖೋಯ್- 30 ಯುದ್ಧ ವಿಮಾನದೊಂದಿಗೆ ಸಂಯೋಜಿಸಲಾಗಿದೆ. ಈಗ ತೇಜಸ್ ಲಘು ಯುದ್ಧ ವಿಮಾನ ಸೇರಿದಂತೆ ಇತರ ಸಮರ ವಿಮಾನಗಳ ಸಾಮರ್ಥ್ಯವೂ ಇದರ ಜತೆಗೂಡಲಿದೆ. ಇದಲ್ಲದೇ ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧನೌಕೆಯಿಂದ ಕಾರ್ಯ ನಿರ್ವಹಿಸಲ್ಪಡುವ ಮಿಗ್-29ಕೆ ಯುದ್ಧ ವಿಮಾನಗಳನ್ನು ಕೂಡ ಎಂಕೆ-1 ಕ್ಷಿಪಣಿಯೊಂದಿಗೆ ಸಜ್ಜುಗೊಳಿಸಲು ನಿರ್ಧರಿಸಲಾಗಿದೆ.
ಭವಿಷ್ಯದ ಯುದ್ಧಗಳು ಎಷ್ಟು ಸಾಧ್ಯವೋ ಅಷ್ಟು ದೂರದಲ್ಲಿರುವ ಗುರಿಯನ್ನು ಪತ್ತೆಹಚ್ಚಿ, ಛೇದಿಸುವಂಥ ಸಾಮರ್ಥ್ಯವನ್ನು ಬಯಸುತ್ತವೆ. ಹೀಗಾಗಿ ವಾಯುಪಡೆಯ ಅಗತ್ಯತೆಗೆ ಅನುಗುಣವಾಗಿ ಅಸ್ತ್ರ ಎಂಕೆ-2 ಮತ್ತು ಎಂಕೆ-3ಯಂಥ ಕ್ಷಿಪಣಿಗಳನ್ನು ಭಾರತ ಅಭಿವೃದ್ಧಿಸಬೇಕಾಗಿದೆ.
ಅನಿಲ್ ಛೋಪ್ರಾ (ನಿವೃತ್ತ ಏರ್ ಮಾರ್ಷಲ್),
ಡಿಜಿ, ಸೆಂಟರ್ ಫಾರ್ ಏರ್‌ಪವರ್ ಸ್ಟಡೀಸ್
ಅಸ್ತ್ರ ಎಂಕೆ-1 ಕ್ಷಿಪಣಿಯ ವ್ಯಾಪ್ತಿ 100 ಕಿ.ಮೀ.
ಅಸ್ತ್ರ ಎಂಕೆ-1 ಕ್ಷಿಪಣಿಯ ವ್ಯಾಪ್ತಿ 160 ಕಿ.ಮೀ.
ಅಸ್ತ್ರ ಎಂಕೆ-1 ಕ್ಷಿಪಣಿಯ ವ್ಯಾಪ್ತಿ 300 ಕಿ.ಮೀ.
ಎಂಕೆ-2 ಸರಣಿಯ ಪರೀಕ್ಷೆ ಯಾವಾಗ? 2023 ರಲ್ಲಿ
ಎಂಕೆ-3 ಸರಣಿಯ ಕ್ಷಿಪಣಿ ಪರೀಕ್ಷೆ? 2024 ರಲ್ಲಿ
ಚೀನದ ಪಿಎಲ್-15 ಕ್ಷಿಪಣಿಯ ವ್ಯಾಪ್ತಿ 200 ಕಿ.ಮೀ.
ಭಾರತದಲ್ಲಿ ತಯಾರಾಗುತ್ತಿರುವ ಶಸ್ತ್ರಾಸ್ತ್ರ ವ್ಯವಸ್ಥೆಗಳು 310
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.